ETV Bharat / sitara

ಹಿಂದೂ ದೇವರನ್ನು ಅವಮಾನಿಸಿದ್ದ ಆರೋಪ: ಮುನಾವಾರ್​​​​ ಜಾಮೀನು ಅರ್ಜಿ ತಿರಸ್ಕಾರ

ಗುಜರಾತಿನ ಹಾಸ್ಯ ಭಾಷಣಕಾರಮುನಾವರ್ ಫಾರೂಕಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಮಧ್ಯಪ್ರದೇಶ ಹೈಕೋರ್ಟ್​​ ವಜಾ ಮಾಡಿದೆ.

HC rejects comedian Munawar Faruqui's bail plea
ಕಾಮಿಡಿಯನ್ ಮುನವಾರ್​​​​ ಜಾಮೀನು ಅರ್ಜಿಯನ್ನ ತಿರಸ್ಕರಿಸಿದ ಕೋರ್ಟ್​​
author img

By

Published : Jan 28, 2021, 6:19 PM IST

ಇಂಧೋರ್​, ಮಧ್ಯಪ್ರದೇಶ: ಗುಜರಾತಿನ ಹಾಸ್ಯ ಭಾಷಣಕಾರ ಮುನಾವರ್ ಫಾರೂಕಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಮಧ್ಯ ಪ್ರದೇಶ ಹೈಕೋರ್ಟ್​​ ವಜಾ ಮಾಡಿದೆ.

ಹೊಸ ವರ್ಷದ ಹಿನ್ನೆಲೆಯಲ್ಲಿ ಇಂಧೋರ್​​​ನಲ್ಲಿ ಆಯೋಜಿಸಿದ ಕಾರ್ಯಕ್ರಮವೊಂದರಲ್ಲಿ ಹಿಂದೂ ದೇವರು ಮತ್ತು ದೇವತೆಗಳನ್ನು ಅವಮಾನಿಸಿದ್ದರು ಎಂಬ ಕಾರಣಕ್ಕೆ ಮುನಾವಾರ್ ಫಾರೂಕಿಯನ್ನು ಬಂಧಿಸಲಾಗಿತ್ತು.

ಇಂದು ನಡೆದ ವಿಚಾರಣೆಯಲ್ಲಿ ಮುನಾವರ್ ಫಾರೂಕಿ ಪರ ಯಾವುದೇ ದಾಖಲೆಗಳು ಇಲ್ಲದ ಕಾರಣ ಅವರ ಜಾಮೀನು ಅರ್ಜಿಯನ್ನು ವಜಾಗಳಿಸಿದ ಕೋರ್ಟ್​​ ಆದೇಶ ಹೊರಡಿಸಿದೆ.

ನ್ಯಾಯಮೂರ್ತಿ ರೋಹಿತ್​ ಆರ್ಯ ಇದ್ದ ನ್ಯಾಯಾಧೀಶರ ಪೀಠವು, ಇದೇ ಪ್ರಕರಣದಲ್ಲಿ ಭಾಗಿಯಾಗಿದ್ದ, ಮತ್ತೊಬ್ಬ ಆರೋಪಿ ನಳಿನ್ ಯಾದವ್ ಜಾಮೀನು ಅರ್ಜಿಯನ್ನೂ ತಿರಸ್ಕರಿಸಿದ್ದಾರೆ.

ಮಧ್ಯಪ್ರದೇಶದ ಇಂಧೋರ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮುನಾವರ್ ಅವಹೇಳನಾಕಾರಿಯಾಗಿ ಮಾತನಾಡಿದ್ದು, ಬಿಜೆಪಿ ಶಾಸಕಿಯ ಪುತ್ರ ದೂರು ದಾಖಲಿಸಿದ್ದರು. ಈ ದೂರಿನ ಆಧಾರದಲ್ಲಿ ಅವರನ್ನು ಬಂಧಿಸಲಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.