ETV Bharat / sitara

Happy Birthday Hrithik Roshan: ಹುಟ್ಟುಹಬ್ಬದ ಸಂಭ್ರಮದಲ್ಲಿ 'ಗ್ರೀಕ್ ಗಾಡ್' - kaho naa pyaa hai

ನಟನೆ ಹಾಗೂ ನೃತ್ಯ ಕೌಶಲ್ಯದ ಮೂಲಕ ಅಭಿಮಾನಿಗಳ ಮನ ಗೆದ್ದಿರುವ ಬಾಲಿವುಡ್​ ನಟ ಹೃತಿಕ್​ ರೋಷನ್​ಗೆ ಇಂದು 48 ನೇ ಹುಟ್ಟುಹಬ್ಬದ ಸಂಭ್ರಮ.

ನಟ ಹೃತಿಕ್​ ರೋಷನ್​
ನಟ ಹೃತಿಕ್​ ರೋಷನ್​
author img

By

Published : Jan 10, 2022, 11:41 AM IST

ಬಾಲಿವುಡ್​ ನಟ ಹೃತಿಕ್​ ರೋಷನ್​ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ತಮ್ಮ ಕಟ್ಟುಮಸ್ತಾದ ದೇಹ ಹಾಗೂ ಫ್ಯಾಷನ್​ ಸೆನ್ಸ್​ಗೆ ಹೆಸರಾಗಿರುವ ಹೃತಿಕ್ ರೋಷನ್ ಇಂದು 48ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಬಾಲಿವುಡ್​ ತಾರೆಯರು ಹಾಗೂ ಅಭಿಮಾನಿಗಳು ನೆಚ್ಚಿನ ನಟನ ಹುಟ್ಟುಹಬ್ಬಕ್ಕೆ ಶುಭ ಕೋರುತ್ತಿದ್ದಾರೆ.

ನಟ ಹೃತಿಕ್​ ರೋಷನ್​
ನಟ ಹೃತಿಕ್​ ರೋಷನ್​

'ಗ್ರೀಕ್ ಗಾಡ್' ಎಂದೇ ಪ್ರಖ್ಯಾತಿ ಪಡೆದಿರುವ ಹೃತಿಕ್, ಬಾಲಿವುಡ್‌ನಲ್ಲಿ ತಮ್ಮ ಚೊಚ್ಚಲ ಚಿತ್ರ 'ಕಹೋ ನಾ ಪ್ಯಾರ್ ಹೇ' ಮೂಲಕ ಪ್ರೇಕ್ಷಕರನ್ನು ಮೋಡಿ ಮಾಡಿದರು. ಇದೀಗ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಇವರು ಕೂಡ ಒಬ್ಬರಾಗಿದ್ದು, ನಟನೆ ಹಾಗೂ ನೃತ್ಯ ಕೌಶಲ್ಯದಿಂದ ಪ್ರೇಕ್ಷಕರನ್ನು ರಂಜಿಸಿ ಆರು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.

ನಟ ಹೃತಿಕ್​ ರೋಷನ್​
ನಟ ಹೃತಿಕ್​ ರೋಷನ್​

1980 ರಲ್ಲಿ 'ಆಶಾ' ಸಿನಿಮಾದಲ್ಲಿ ಆರು ವರ್ಷದ ಬಾಲಕನ ಪಾತ್ರದಲ್ಲಿ ಮೊದಲ ಬಾರಿ ಅಭಿನಯಿಸಿದ ರೋಷನ್‌, ಆನಂತರ 'ಕ್ರಿಶ್', 'ಧೂಮ್ 2', 'ಪಾನಿ', 'ಜಿಂದಗಿ ನಾ ಮಿಲೆಗಿ ದೊಬಾರ', 'ಅಗ್ನಿಪಥ್', 'ಓಂ ಶಾಂತಿ ಓಂ', 'ಜೋಧಾ ಅಕ್ಬರ್' ಸೇರಿದಂತೆ ಅನೇಕ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ನಟ ಹೃತಿಕ್​ ರೋಷನ್​
ನಟ ಹೃತಿಕ್​ ರೋಷನ್​

2019 ರಲ್ಲಿ ಬಿಡುಗಡೆಯಾದ 'ವಾರ್' ಚಲನಚಿತ್ರದ ಪ್ರಚಾರದ ವೇಳೆ ಹೃತಿಕ್ ಅವರು ಅಚ್ಚರಿಯ ಮಾಹಿತಿಯೊಂದನ್ನು ಹಂಚಿಕೊಂಡಿದ್ದರು. ತಮ್ಮ ಚೊಚ್ಚಲ ಚಿತ್ರ ಬಿಡುಗಡೆಯಾದ ನಂತರ 30,000 ಕ್ಕೂ ಹೆಚ್ಚು ಮದುವೆ ಪ್ರಸ್ತಾಪಗಳು ಬಂದಿದ್ದವು ಎಂದು ಬಹಿರಂಗ ಪಡಿಸಿದ್ದರು.

ನಟ ಹೃತಿಕ್​ ರೋಷನ್​
ನಟ ಹೃತಿಕ್​ ರೋಷನ್​

2000 ಡಿಸೆಂಬರ್​ನಲ್ಲಿ ಬಾಲ್ಯದ ಗೆಳತಿ ಸುಸೈನ್​ ಖಾನ್ ಅವರನ್ನು ವಿವಾಹವಾದರು. ನಂತರ ದಾಂಪತ್ಯದಲ್ಲಿ ಬಿರುಕು ಮೂಡಿ ವಿಚ್ಛೇದನ ಪಡೆದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.