ETV Bharat / sitara

ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಶಿವಣ್ಣನ ಗಿಫ್ಟ್.. ಒಂದರ ಮೇಲೊಂದರಂತೆ ಚಿತ್ರ ಅನೌನ್ಸ್ - ಶಿವರಾಜ್​ ಕುಮಾರ್

ಇಂದು ಕರುನಾಡ ಚಕ್ರವರ್ತಿ ಸೆಂಚುರಿ ಸ್ಟಾರ್ ಶಿವರಾಜ್​ ಕುಮಾರ್ ಹುಟ್ಟುಹಬ್ಬ. ಕೊರೊನಾ ಹಿನ್ನೆಲೆ ಶಿವಣ್ಣ ಸರಳವಾಗಿ ಹುಟ್ಟು ಹಬ್ಬ ಆಚರಿಸಿದ್ರು ಸಹ ಅಭಿಮಾನಿಗಳಿಗೆ ಮಾತ್ರ ಬಿಗ್ ಸರ್ಪ್ರೈಸ್ ಕೊಟ್ಟಿದ್ದಾರೆ..

dsdsd
ಬ್ಯಾಕು ಟು ಬ್ಯಾಕ್ ಸಿನಿಮಾ ಅನೌನ್ಸ್ ಮಾಡಿದ ಸೆಂಚುರಿ ಸ್ಟಾರ್​
author img

By

Published : Jul 12, 2020, 9:57 PM IST

ಬೆಂಗಳೂರು : ಮೊನ್ನೆಯಷ್ಟೆ ಹೊಸ ಚಿತ್ರ ಅನೌನ್ಸ್ ಮಾಡಿದ್ದ ಶಿವಣ್ಣ, ಟಗರು ನಂತರ ಡಾಲಿ ಧನಂಜಯ್ ಜೊತೆ ಸ್ಕ್ರೀನ್ ಶೇರ್ ಮಾಡಲಿರೋ ಹೇಳಿದ್ದರು. ಅದರ ಜೊತೆಗೆ ಶಿವಣ್ಣ ಇಂದು ಕೂಡ ಒಂದು ಹೊಸ ಚಿತ್ರ ಅನೌನ್ಸ್ ಮಾಡುವ ಮೂಲಕ ಹುಟ್ಟುಹಬ್ಬದಂದು ಫ್ಯಾನ್ಸ್‌ಗೆ ಬಿಗ್ ಗಿಫ್ಟ್ ಕೊಟ್ಟಿದ್ದಾರೆ.

ಈ ಚಿತ್ರಕ್ಕೆ ಟೈಟಲ್ ಕನ್ಪರ್ಮ್‌ ಆಗಿಲ್ಲ. ಆದರೆ, ಶಿವಣ್ಣ ಬರ್ತ್​ ಡೇ ಸ್ಪೆಷಲ್ ಆಗಿ ಇಂದು ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಈ ಚಿತ್ರವನ್ನು (ಪ್ರೊಡಕ್ಷನ್ ನಂ.1) ತೆಲುಗಿನ ಸ್ವಾತಿ ವನಪಲ್ಲಿ, ಶ್ರೀಕಾಂತ್ ದುಲಿಪುಡಿ ಹಾಗೂ ನರಳ ಶ್ರೀನಿವಾಸ ರೆಡ್ಡಿ ಬಾಲಶ್ರೀರಾಮ್ ಸ್ಟುಡಿಯೋ ಲಾಂಛನದಲ್ಲಿ ನಿರ್ಮಾಣ ಮಾಡಲಿದ್ದಾರೆ. ತೆಲುಗಿನ ರಾಮ್ ದುಲಿಪುಡಿ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಲಿದ್ದಾರೆ.

ಎಮೋಷನಲ್ ಹಾಗೂ ಮಿಲಟರಿ ಬ್ಯಾಕ್ ಡ್ರಾಪ್ ಸ್ಟೋರಿ ಇರುವ ಈ ಚಿತ್ರದಲ್ಲಿ ಶಿವಣ್ಣ ಮಾಸ್ ಲುಕ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕೊರೊನಾ ಲಾಕ್​ಡೌನ್ ಕಾರಣ ಸರ್ಕಾರ ಹೊಸ ಚಿತ್ರಕ್ಕೆ ಅನುಮತಿ ನೀಡಿದ ನಂತರ ಚಿತ್ರದ ಶೂಟಿಂಗ್ ಆರಂಭವಾಗಲಿದೆ. ಚಿಕ್ಕಮಗಳೂರು, ಕಾಶ್ಮೀರ ಹಾಗೂ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಚಿತ್ರದ ಶೂಟಿಂಗ್ ಮಾಡಲು ಚಿತ್ರತಂಡ ಈಗಾಗಲೇ ಪ್ಲಾನ್ ಮಾಡಿದೆ. ಚಿತ್ರದಲ್ಲಿ ಶಿವಣ್ಣನಿಗೆ ನಾಯಕಿಯಾಗಿ ಸ್ಟಾರ್ ನಟಿಯೊಬ್ಬರು ನಟಿಸುವ ಸಾಧ್ಯತೆ ಇದೆ. ಅಲ್ಲದೆ ಶ್ರೀಚರಣ್ ಪಕಾಲ ಸಂಗೀತ ನೀಡಲಿದ್ದು, ಶೀಘ್ರದಲ್ಲೇ ಚಿತ್ರದ ಉಳಿದ ತಾರಾಗಣ ಫೈನಲ್ ಮಾಡಿ ಶೂಟಿಂಗ್ ಅಖಾಡಕ್ಕೆ ಇಳಿಯಲು ಚಿತ್ರತಂಡ ಪ್ಲಾನ್ ಮಾಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.