ಸ್ಯಾಂಡಲ್ವುಡ್ನಲ್ಲಿ ಸ್ಟಾರ್ ನಟರ ಬಿಗ್ ಬಜೆಟ್ ಸಿನಿಮಾಗಳ ಮಧ್ಯೆ ಹೊಸ ಕಾನ್ಸೆಪ್ಟ್ಗಳನ್ನಿಟ್ಟುಕೊಂಡು ಹೊಸ ಸಿನಿಮಾಗಳು ಬರುತ್ತಿವೆ. ಹರೀಶ ವಯಸ್ಸು 36 ಎಂಬ ಟೈಟಲ್ ಇಟ್ಟುಕೊಂಡಿರುವ ಸಿನಿಮಾವೊಂದು ಬಿಡುಗಡೆಗೆ ಸಜ್ಜಾಗಿದೆ.
ಹಿರಿಯ ಹಾಸ್ಯ ನಟ ಉಮೇಶ್ ಮುಖ್ಯಭೂಮಿಕೆಯಲ್ಲಿರೋ ಹರೀಶ ವಯಸ್ಸು 36 ಸಿನಿಮಾ ಬಹುತೇಕ ಚಿತ್ರೀಕರಣ ಮುಗಿಸಿ, ಬಿಡುಗಡೆಗೊಳ್ಳಲು ಸಜ್ಜಾಗಿದೆ. ಅಪ್ಪು ದನಿಯಲ್ಲಿ ಈ ಚಿತ್ರದ ಹಾಡೊಂಡು ಮೂಡಿ ಬಂದಿದೆ.
ಇಂದು ಚಿತ್ರದ ನಿರ್ಮಾಪಕರಾದ ಲಕ್ಷ್ಮಿಕಾಂತ್, ತ್ರಿಲೋಕ್ ಝಾ, ಚಿಂತಕುಂಟ, ನಿರ್ದೇಶಕ ಗುರುರಾಜ್ ಜೈಷ್ಠ, ಯುವ ನಾಯಕ ಯೋಗೀಶ್ ಶೆಟ್ಟಿ, ಶ್ವೇತಾ ಅರೆಹೊಳೆ ಹಾಗೂ ಆನಂದ್ ಆಡಿಯೋ ಸಂಸ್ಥೆಯ ಮಾಲೀಕರಾದ ಆನಂದ್ ಅವರು ಆಡಿಯೋ ಅನಾವರಣ ಮಾಡಿದರು.
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಸಿನಿಮಾದಲ್ಲಿ ನಟಿಸಿದ್ದ ಯೋಗೀಶ್ ಶೆಟ್ಟಿ ಹಿರಿಯ ನಟ ಉಮೇಶ್ ಜೊತೆ ನಟಿಸಿದ್ದಾರೆ. ರಂಗ ನಾಟಕಗಳನ್ನು ನಿರ್ದೇಶನ ಮಾಡಿದ್ದ ಗುರುರಾಜ್ ಜೈಷ್ಠ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ.
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಟೈಟಲ್ ಹಾಡನ್ನು ಹಾಡಿದ್ದರು. ಈ ಸಿನಿಮಾವನ್ನ ಪಿಆರ್ಕೆ ಬ್ಯಾನರ್ ಪ್ರಮೋಶನ್ ಮಾಡುವುದಾಗಿ ಹೇಳಿದ್ರು ಅನ್ನೋದು ನಿರ್ದೇಶಕ ಗುರುರಾಜ್ ಅವರ ಮಾತು.
ಈ ಚಿತ್ರದಲ್ಲಿ ನಾಯಕ ಯೋಗೀಶ್ ಶೆಟ್ಟಿ ಹಗಲುಗನಸು ಕಾಣೋ ಯುವಕನಾಗಿ ಮಿಂಚಿದ್ದಾರೆ. ಜೊತೆಗೆ ವಯಸ್ಸು 36 ಆದರೂ ಮದುವೆ ಆಗಿರುವುದಿಲ್ಲ. ಈ ಹರೀಶನಿಗೆ ಮದುವೆ ಆಗೋ ಹುಡುಗಿ ಸಿಗುತ್ತಾಳಾ ಅನ್ನೋದು ಹರೀಶ 36 ಸಿನಿಮಾದ ಕಥೆ.
ಇದನ್ನೂ ಓದಿ: ಸಿಂಪಲ್ ಆಗಿ ಗೆಳೆಯನ ಜೊತೆ ಸಪ್ತಪದಿ ತುಳಿದ ಶುಭಾ ಪೂಂಜಾ!
ಹರೀಶನಿಗೆ ನಾಯಕಿಯಾಗಿ ರಂಗಭೂಮಿ ಕಲಾವಿದೆ ಶ್ವೇತಾ ಅರೆಹೊಳೆ ನಟಿಸಿದ್ದಾರೆ. ಇವರ ಜೊತೆ ರೋಹಿಣಿ ಜಗರಾಮ್, ಪ್ರಶಾಶ್ ತೂಮಿನಾಡು, ರಕ್ಷಣ್ ಮಡೂರ್, ಶೋಭಾ ಶೆಟ್ಟಿ, ಮಂಜುಳ ಜನಾರ್ದನ್ ಹೀಗೆ ಸಾಕಷ್ಟು ತಾರಾ ಬಳಗ ಈ ಚಿತ್ರದಲ್ಲಿದೆ. ದಕ್ಷಿಣ ಕನ್ನಡ ಜಿಲ್ಲೆಯ ಗುರುವಾಯನಕೆರೆ ಹಾಗೂ ಮಂಗಳೂರಿನ ಸುಂದರ ತಾಣಗಳಲ್ಲಿ ಹರೀಶ ವಯಸ್ಸು 36 ಸಿನಿಮಾ ಚಿತ್ರೀಕರಣ ಮಾಡಲಾಗಿದೆ.
ಮೋಹನ್ ಪಡ್ರೆ ಕ್ಯಾಮೆರಾಮ್ಯಾನ್ ಆಗಿದ್ದು, ನಿರ್ದೇಶಕ ಗುರುರಾಜ್ ಜೈಷ್ಠ ನಿರ್ದೇಶನದ ಜೊತೆಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಲಕ್ಷ್ಮಿಕಾಂತ್, ತ್ರಿಲೋಕ್ ಝಾ, ಚಿಂತಕುಂಟ ಈ ಮೂರು ಜನ ನಿರ್ಮಾಪಕರು ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಸದ್ಯ ಟೈಟಲ್, ಪೋಸ್ಟರ್ನಿಂದಲೇ ಗಮನ ಸೆಳೆಯುತ್ತಿರೋ ಹರೀಶ 36 ಸಿನಿಮಾ ಈ ತಿಂಗಳಲ್ಲಿ ಬಿಡುಗಡೆ ಆಗೋದಿಕ್ಕೆ ರೆಡಿಯಾಗಿದೆ.