ಈಗ ಹಾಲಿವುಡ್, ಬಾಲಿವುಡ್, ಸ್ಯಾಂಡಲ್ವುಡ್ ಸೇರಿದಂತೆ ಎಲ್ಲೆಡೆ ಬಾಟಲ್ ಕ್ಯಾಪ್ ಚಾಲೆಂಜ್ನದ್ದೇ ಸುದ್ದಿ. ಕಾಲಿನ ತುದಿಯಿಂದ ಕಿಕ್ ಮಾಡಿ ಬಾಟಲಿ ಮುಚ್ಚಳವನ್ನು ತೆರೆಯುವ ಈ ಚಾಲೆಂಜ್ ವಿಡಿಯೋ ಸಖತ್ ವೈರಲ್ ಆಗುತ್ತಿದೆ.
-
My kind of #bottlecapchallange 😋🙈🙊😂🤣 Power of a kiss with love is very strong u see 😈😆 pic.twitter.com/KzRSHmZdo8
— HariPrriya (@HariPrriya6) July 7, 2019 " class="align-text-top noRightClick twitterSection" data="
">My kind of #bottlecapchallange 😋🙈🙊😂🤣 Power of a kiss with love is very strong u see 😈😆 pic.twitter.com/KzRSHmZdo8
— HariPrriya (@HariPrriya6) July 7, 2019My kind of #bottlecapchallange 😋🙈🙊😂🤣 Power of a kiss with love is very strong u see 😈😆 pic.twitter.com/KzRSHmZdo8
— HariPrriya (@HariPrriya6) July 7, 2019
ಇತ್ತೀಚೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪುತ್ರ ವಿನೀಶ್ ಈ ಚಾಲೆಂಜ್ ಸ್ವೀಕರಿಸಿ ಯಶಸ್ವಿಯಾಗಿರುವ ವಿಡಿಯೋವನ್ನು ದರ್ಶನ್ ಅಭಿಮಾನಿಗಳು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು. ಇದೀಗ ಹರಿಪ್ರಿಯಾ ಸರದಿ. ಈ ಬೆಲ್ ಬಾಟಮ್ ಸುಂದರಿ ಕೂಡಾ ಈ ಬಾಟಲ್ ಕ್ಯಾಪ್ ಚಾಲೆಂಜ್ ಸ್ವೀಕರಿಸಿ, ಅದರಲ್ಲಿ ಯಶಸ್ವಿಯೂ ಆಗಿದ್ದಾರೆ. ಆದರೆ ವಿಷಯ ಏನಪ್ಪಾ ಅಂದ್ರೆ ಹರಿಪ್ರಿಯಾ ಬಾಟಲಿ ಕ್ಯಾಪನ್ನು ಕಿಕ್ ಮಾಡಿ ತೆಗೆದಿಲ್ಲ. ಅದರ ಬದಲಿಗೆ ಕಿಸ್ ಮಾಡಿ ಕ್ಯಾಪ್ ತೆಗೆದಿದ್ದಾರೆ. ಮುತ್ತಿನಿಂದ ಬಾಟಲ್ ಕ್ಯಾಪ್ ತೆಗೆಯಲು ಈ ಬ್ಯೂಟಿ ಅದೇನು ಟೆಕ್ನಿಕ್ ಬಳಸಿದ್ರೋ ಗೊತ್ತಿಲ್ಲ. ಆದ್ರೆ ಈ ವಿಡಿಯೋ ಮಾತ್ರ ಫನ್ನಿಯಾಗಿದೆ.

ತಮ್ಮ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿರುವ ಹರಿಪ್ರಿಯಾ, 'ಪ್ರೀತಿಯಿಂದ ಕೊಡುವ ಮುತ್ತು ಯಾವಾಗಲೂ ಸ್ಟ್ರಾಂಗ್ ಆಗಿರುತ್ತದೆ. ಇದು ನನ್ನ ಶೈಲಿಯ ಬಾಟಲ್ ಕ್ಯಾಪ್ ಚಾಲೆಂಜ್' ಎಂದು ಬರೆದುಕೊಂಡಿದ್ದಾರೆ.