ಇತ್ತೀಚೆಗೆ ನೋಯ್ಡಾದಲ್ಲಿ ನಡೆದ 4ನೇ ಭಾರತೀಯ ವಿಶ್ವ ಸಿನಿಮಾ ಉತ್ಸವದಲ್ಲಿ ಹರಿಪ್ರಿಯಾಗೆ ಉತ್ತಮ ನಟಿ ಪ್ರಶಸ್ತಿ ಲಭಿಸಿದೆ. ಈ ಚಿತ್ರೋತ್ಸವದಲ್ಲಿ ಬರಗೂರು ರಾಮಚಂದ್ರಪ್ಪ ನಿರ್ದೇಶನದ ಅಮೃತಮತಿ ಸಿನಿಮಾ ಕೂಡ ಸ್ಪರ್ಧೆ ನಡೆಸಿದ್ದು, ಚಿತ್ರದಲ್ಲಿ ನಾಯಕ ನಟಿಯಾಗಿ ಅಭಿನಯಿಸಿರುವ ಹರಿಪ್ರಿಯಾಗೆ ಉತ್ತಮ ನಟಿ ಪ್ರಶಸ್ತಿ ಸಿಕ್ಕಿದೆ.
![haripriya got best actress award](https://etvbharatimages.akamaized.net/etvbharat/prod-images/amruthamathi---haripriya-41583804250578-28_1003email_1583804261_249.jpg)
ಇದೇ ಮಾರ್ಚ್ 8ರಂದು ನಡೆದಿದ್ದ ಸಿನಿಮೋತ್ಸವದಲ್ಲಿ ಬ್ರಿಟನ್, ಚೀನಾ, ಕೊರಿಯಾ, ಅರ್ಜೆಂಟೈನಾ, ಟರ್ಕಿ ಸೇರಿದಂತೆ ಹಲವು ರಾಷ್ಟ್ರಗಳ ಸಿನಿಮಾಗಳು ಪ್ರದರ್ಶನಗೊಂಡಿದ್ದವು.
ಅಮೃತಮತಿ ಸಿನಿಮಾ 13ನೇ ಶತಮಾನದ ಜನ್ನ ರಚಿಸಿದ ‘ಯಶೋಧರ ಚರಿತೆ’ಯಲ್ಲಿ ಬರುವ ‘ಅಮೃತಮತಿ’ ಕಥೆಯಾಗಿದೆ. ಪ್ರೊ. ಬರಗೂರು ರಾಮಚಂದ್ರಪ್ಪ ಈ ಕಥಾ ವಸ್ತುವನ್ನು ಭೋಗ-ಸುಖ, ಬಂಧನ-ಬಿಡುಗಡೆ, ಪ್ರಭುತ್ವ-ಜನತೆ ಎಂಬ ವೈರುಧ್ಯಗಳ ಮುಖಾಂತರ ತೆರೆ ಮೇಲೆ ತಂದಿದ್ದಾರೆ.
![haripriya got best actress award](https://etvbharatimages.akamaized.net/etvbharat/prod-images/amruthamathi-haripriya-and-kishor1583804250579-48_1003email_1583804261_57.jpg)
ಇಂಚರ ಪುಟ್ಟಣ್ಣ ಪ್ರೊಡಕ್ಷನ್ ಅಡಿಯಲ್ಲಿ ಈ ಚಿತ್ರವನ್ನ ನಿರ್ಮಾಣ ಮಾಡಿದ್ದು, ಚಿತ್ರದಲ್ಲಿ ಹರಿಪ್ರಿಯಾ, ಕಿಶೋರ್, ತಿಲಕ್, ಸುಪ್ರಿಯ ರಾವ್, ಅಂಬರೀಶ್ ಸಾರಂಗಿ, ಸುಂದರ್ ರಾಜ್, ಪ್ರಮಿಳ ಜೋಶೈ, ವತ್ಸಲಾ ಮೋಹನ್ ಸೇರಿದಂತೆ ಹಲವರು ಬಣ್ಣ ಹಚ್ಚಿದ್ದಾರೆ.
![haripriya got best actress award](https://etvbharatimages.akamaized.net/etvbharat/prod-images/amruthamathi---haripriya-31583804250580-27_1003email_1583804261_461.jpg)