ETV Bharat / sitara

ನಿರ್ಮಾಪಕ ಕನಕಪುರ ಶ್ರೀನಿವಾಸ್​​​​​​ ಕಾಲೆಳೆದ ನಿರ್ದೇಶಕ ಗುರುಪ್ರಸಾದ್​​​

ಗುರುಪ್ರಸಾದ್ ನಿರ್ದೇಶನದಲ್ಲಿ ನಟ ಜಗ್ಗೇಶ್ ನಟಿಸುತ್ತಿರುವ 'ರಂಗನಾಯಕ' ಚಿತ್ರದ ಟೀಸರ್ ನಿನ್ನೆ ಬಿಡುಗಡೆಯಾಗಿದೆ. ಇನ್ನು ಈ ಸಮಾರಂಭದಲ್ಲಿ ನಿರ್ದೇಶಕ ಗುರುಪ್ರಸಾದ್ ನಿರ್ಮಾಪಕ ಕನಕಪುರ ಶ್ರೀನಿವಾಸ್ ಕಾಲೆಳೆದ ಘಟನೆ ನಡೆಯಿತು.

ಶ್ರೀನಿವಾಸ್​, ಗುರುಪ್ರಸಾದ್​​​
author img

By

Published : Oct 9, 2019, 8:05 PM IST

ನಿರ್ದೇಶಕ ಗುರುಪ್ರಸಾದ್ ಮಾತಿನ ಮಲ್ಲ, ಸಮಯಕ್ಕೆ ಸರಿಯಾಗಿ ಯಾರದಾದ್ರೂ ಕಾಲೆಳೆಯುತ್ತಾರೆ. ‘ಮಠ’ ಚಿತ್ರದಿಂದ ಖ್ಯಾತಿ ಪಡೆದ ಗುರುಪ್ರಸಾದ್​​​ಗೆ ನಂತರ ‘ಎದ್ದೇಳು ಮಂಜುನಾಥ’ ಸಿನಿಮಾ ಕೂಡಾ ಹೆಸರು ತಂದುಕೊಟ್ಟಿತು. ಇದೀಗ ನಟ ಜಗ್ಗೇಶ್ ಜೊತೆ 'ರಂಗನಾಯಕ' ಎಂಬ ಸಿನಿಮಾ ಮಾಡುತ್ತಿದ್ದಾರೆ.

ಬಹಳ ವರ್ಷಗಳಿಂದ ದೂರವಿದ್ದ ಜಗ್ಗೇಶ್ ಹಾಗೂ ಗುರುಪ್ರಸಾದ್ ಮನಸ್ತಾಪ ಮರೆತು ಮತ್ತೆ ಒಂದಾಗಿದ್ದಾರೆ. ನಿನ್ನೆ ವಿಜಯ ದಶಮಿ ಅಂಗವಾಗಿ ಚಿತ್ರದ ಟೀಸರ್ ಕೂಡಾ ಬಿಡುಗಡೆಯಾಗಿದೆ. ಅಂದಹಾಗೆ ಗುರುಪ್ರಸಾದ್ ನಿರ್ಮಾಪಕ ಕನಕಪುರ ಶ್ರೀನಿವಾಸ್ ಕಾಲೆಳೆದಿದ್ದು ಏಕೆ ಎಂಬುದನ್ನು ಮುಂದೆ ಓದಿ. 'ಮಠ' ಸಿನಿಮಾ ಬಿಡುಗಡೆಯಾದಾಗ ಥಿಯೇಟರ್​​​​ನಲ್ಲಿ ಸಿನಿಮಾ ನೋಡಿ ನನಗೆ ಸಿನಿಮಾನೇ ಅರ್ಥ ಆಗಲಿಲ್ಲ ಎಂದಿದ್ದರಂತೆ ನಿರ್ಮಾಪಕ ಕನಕಪುರ ಶ್ರೀನಿವಾಸ್​​​​​​​. ಅಲ್ಲದೆ ಬೇರೆ ನಿರ್ಮಾಪಕರ ಸಿನಿಮಾವೊಂದನ್ನು ನೋಡಿ ಬಂದು ಒಂದೇ ಎಳೆಯಲ್ಲಿ ಆ ಸಿನಿಮಾ ಗುಟ್ಟನ್ನು ಶ್ರೀನಿವಾಸ್ ಹೊರಗೆ ಹೇಳಿಬಿಟ್ಟರು. ಇಂತಹ ನಿರ್ಮಾಪಕರ ಮಧ್ಯೆ ನಾವು ಈ ಗಾಂಧಿನಗರದಲ್ಲಿ ಬದುಕಬೇಕಾಗಿದೆ' ಎಂದು ಕನಕಪುರ ಶ್ರೀನಿವಾಸ್ ಬಗ್ಗೆ ಗುರುಪ್ರಸಾದ್ ನಿನ್ನೆ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಆದರೆ ಇದು ಅಲ್ಲಿದ್ದವರಿಗೆ ಸರಿ ಎನಿಸಲಿಲ್ಲ. ಆಗ ನಡೆದ ಘಟನೆಯನ್ನು ಈಗ ಹೇಳುವ ಅಗತ್ಯ ಏನಿತ್ತು. ಅಲ್ಲದೆ ಕನಕಪುರ ಶ್ರೀನಿವಾಸ್ ದುಡ್ಡು ಹಾಕಿ 'ಮಠ' ಸಿನಿಮಾ ಮಾಡಿದ್ದರಿಂದಲೇ 14 ವರ್ಷಗಳ ನಂತರವೂ ಗುರುಪ್ರಸಾದ್​​​ಗೆ ಈ ಜನಪ್ರಿಯತೆ ಇರುತ್ತಿತ್ತಾ ಎಂಬುದು ಎಲ್ಲರ ಪ್ರಶ್ನೆ.

ಗುರುಪ್ರಸಾದ್ ನಿರ್ಮಾಪಕ ಕನಕಪುರ ಶ್ರೀನಿವಾಸ್ ಕಾಲು ಎಳೆದರು

ಗುರುಪ್ರಸಾದ್ ಮಾತಿನ ಮಲ್ಲ, ಸಮಯಕ್ಕೆ ಸರಿಯಾಗಿ ಯಾರನ್ನಾದರೂ ಕಾಲು ಎಳೆಯುವ ವ್ಯಕ್ತಿತ್ವ ಮಠ ಇಂದ ಖ್ಯಾತಿ ಪಡೆದವರು, ಆಮೇಲೆ ಎದ್ದೇಳು ಮಂಜುನಾಥ ಸಹ ಅವರ ಪಾಲಿಗೆ ಹಲವು ವರ್ಷ ಈ ಸಿನಿಮಾ ಉಧ್ಯಮದಲ್ಲಿ ಇರುವಂತೆ ಮಾಡಿತು.

ಸಧ್ಯಕ್ಕೆ ಆದೇಮ್ಮ ಸಿನಿಮಾ ಅರ್ಧದಲ್ಲೇ ಬಿಟ್ಟಿರುವ ಗುರುಪ್ರಸಾದ್ ನಿನ್ನೆ ಸಂಜೆ ರಂಗನಾಯಕ ಜಗ್ಗೇಶ್ ಅವರ ಜೊತೆ 10 ವರ್ಷಗಳ ಬಳಿಕ ಮತ್ತೆ ನಿರ್ದೇಶನಕ್ಕೆ (2006 ಮಠ, 2009 ಎದ್ದೇಳು ಮಂಜುನಾಥ – ಗುರುಪ್ರಸಾದ್ ಹಾಗೂ ಜಗ್ಗೇಶ್ ಕಾಂಬಿನೇಷನ್) ಈಗ ವಾಪಸ್ಸಾಗುತ್ತಿದೆ. ಜಗ್ಗೇಶ್ ಅವರ ಪ್ರಕಾರ ಗುರು ಹಾಗೂ ಅವರ ಸ್ನೇಹ ಬಹಳ ವರ್ಷಗಳ ಕಾಲ ವಿಚ್ಛೇದನ ಕೋರ್ಟ್ ಅಲ್ಲಿ ಇದ್ದ ಕೇಸ್ ಸರಿ ಹೋಗಿದ ಹಾಗೆ ಮತ್ತೆ ನಗಿಸಲು ಬರುತ್ತಿದೆ.

ಅದೆಲ್ಲ ಸರಿ ಆದರೆ ಮುಗ್ದ ನಿರ್ಮಾಪಕ ಕನಕಪುರ ಶ್ರೀನಿವಾಸ್ ಅವರ ಕಾಲು ಎಳೆದೆದ್ದು ಈ ಗುರುಪ್ರಸಾದ್ ಅಲ್ಲಿದ್ದವರಿಗೆ ಯಾಕೋ ಸರಿ ಅನ್ನಿಸಲಿಲ್ಲ.

ಹಾಗಾದರೆ ಗುರುಪ್ರಸಾದ್ ಏನು ಹೇಳಿದರು – ನಾನು ಮಠ ಸಿನಿಮಾ ನಿರ್ಮಾಪಕ ಕನಕಪುರ ಶ್ರೀನಿವಾಸ್ ಅವರಿಗೆ ತೋರಿಸಿ ಅವರು ಆಚೆ ಬಂದು ಸಿನಿಮಾ ಅರ್ಥ ಆಗಲಿಲ್ಲ ಎಂದು – ಇದೇನಿದು ಒಂದು ಫೈಟ್ ಸಹ ಇಲ್ಲ ಎಂದು ಹೇಳಿದ್ದನ್ನು ಜ್ಞಾಪಿಸಿಕೊಂಡು ಅದೇ ನಿರ್ಮಾಪಕರ ಸಿನಿಮಾ ಸಾಹಸ ತುಂಬಿದ ಸಿನಿಮಾ ನಿರ್ಮಾಪಕ ನೋಡಿಬಂದು ಅದೆಷ್ಟು ಚನ್ನಾಗಿ ಸಿನಿಮಾ ಮಾಡಿದ್ದಾನೆ ಕೊನೇ ವರಗು ಗೊತ್ತಾಗಕ್ಕಿಲ್ಲ ನಾಯಕನೆ ಮರ್ಡರ್ ಮಡಿರೋದು ಎಂದು ಅವರ ಸಿನಿಮಾ ಗುಟ್ಟು ಬಿಟ್ಟುಕೊಟ್ಟರು. ನಮ್ಮಂತಹವರು ಇಂತಹ ನಿರ್ಮಾಪಕರ ಮಧ್ಯೆ ಈ ಗಾಂಧಿನಗರದಲ್ಲಿ ಬದುಕಬೇಕಾಗಿದೆ ಎಂದು ಗುರು ಪ್ರಸಾದ್ ಹೇಳಿಕೊಂಡಿದ್ದು ಸ್ವಲ್ಪ ಜಾಸ್ತಿ ಆಯಿತು ಅನ್ನಿಸಿದ್ದು ಸುಳ್ಳಲ್ಲ.

ಏನೇ ಆಗಲಿ ಅಂದು ಕನಕಪುರ ಶ್ರೀನಿವಾಸ್ ದುಡ್ಡು ಹಾಕಿ ಮಠ ಸಿನಿಮಾ ಮಾಡಿದ್ದರಿಂದಲೇ ಈಗಲೂ ಆ ಹೆಸರಿನಿಂದಲೇ 14 ವರ್ಷಗಳಿಂದಲೂ ಗುರುಪ್ರಸಾದ್ ಜನಪ್ರಿಯತೆ ಇರುವುದು. 

ETV Bharat Logo

Copyright © 2024 Ushodaya Enterprises Pvt. Ltd., All Rights Reserved.