ಬ್ರಹ್ಮಗಂಟು ಖ್ಯಾತಿಯ ಗೀತಾ ಭಾರತಿ ಭಟ್ ಬಿಗ್ಬಾಸ್ ಕನ್ನಡ ಸೀಸನ್ 8 ಸ್ಪರ್ಧಿಯಾಗಿ ಭಾಗವಹಿಸಿದ್ದರು. ಆದರೆ, ಬಿಗ್ ಬಾಸ್ ಮನೆಗೆ ಹೋಗಿ ಮೂರನೇ ವಾರಕ್ಕೆ ಎಲಿಮಿನೇಟ್ ಆಗಿದ್ದರು. ಇವರು ಮನೆಯಿಂದ ಹೊರಬಂದಿದ್ದಕ್ಕೆ ಅಭಿಮಾನಿಗಳು ಸಹ ಬೇಸರ ವ್ಯಕ್ತಪಡಿಸಿದ್ದರು. ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ಗೀತಾ ಎಂದಿನಂತೆ ಗಾಯನ, ನಟನೆಯಲ್ಲಿ ಬ್ಯೂಸಿ ಆದರು. ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ಗೀತಾ, ಆಗಾಗ ತಮ್ಮ ಹೊಸ ಹೊಸ ವಿಡಿಯೋಗಳು, ಫೋಟೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ.
- " class="align-text-top noRightClick twitterSection" data="">
ಸದ್ಯ ಗೀತಾ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಬ್ರಹ್ಮಗಂಟು ಧಾರಾವಾಹಿಯ ಚಿತ್ರೀಕರಣದ ಸಮಯದಲ್ಲಿ ತಮ್ಮ ಸಹದ್ಯೋಗಿಗಳೊಂದಿಗೆ ಕಳೆದ ಸುಂದರ ಕ್ಷಣಗಳನ್ನು ವಿಡಿಯೋ ಮಾಡಿ ಅದನ್ನು ಅಪ್ಲೋಡ್ ಮಾಡಿದ್ದಾರೆ. ವಿಡಿಯೋ ಜೊತೆಗೆ “ಒಂದು ಸಾವಿರ ಸುಂದರ ನೆನಪುಗಳು, ಎಲ್ಲವೂ ನನ್ನ ಪುಟ್ಟ ಹೃದಯದೊಳಗೆ ಲಾಕ್ ಆಗಿದೆ” ಎಂದು ಶೀರ್ಷಿಕೆ ಕೊಟ್ಟಿದ್ದಾರೆ.

ಗೀತಾ ಇದುವರೆಗೆ ಕೆಲವು ಕನ್ನಡ ಚಲನಚಿತ್ರಗಳು ಮತ್ತು ಟಿವಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ, ಅವರು ಬ್ರಹ್ಮಗಂಟು ಧಾರಾವಾಹಿಯ ಮೂಲಕ ಹೆಚ್ಚು ಜನಪ್ರಿಯರಾದರು. ಗೀತಾ ಭಾರತಿ ಭಟ್ ಹಾಡುವ ಬಗ್ಗೆ ಹೆಚ್ಚು ಉತ್ಸಾಹ ಹೊಂದಿದ್ದು, ಇತ್ತೀಚೆಗೆ ತಮ್ಮ ಮ್ಯೂಸಿಕ್ ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದಾರೆ.