ETV Bharat / sitara

ಸಿಂಪಲ್ಲಾಗಿ ಸೆಟ್ಟೇರಿತು ಭಜರಂಗಿ-2: ನಾಳೆಯಿಂದ ಶೂಟಿಂಗ್ ಶುರು

author img

By

Published : Jun 20, 2019, 2:52 PM IST

ಎ.ಹರ್ಷ ನಿರ್ದೇಶನದಲ್ಲಿ ಶಿವರಾಜ್​​ಕುಮಾರ್ ನಟಿಸುತ್ತಿರುವ 'ಭಜರಂಗಿ-2' ಚಿತ್ರದ ಮುಹೂರ್ತ ಇಂದು ಜರುಗಿದ್ದು, ನಾಳೆಯಿಂದ ಶೂಟಿಂಗ್ ಆರಂಭವಾಗಲಿದೆ. ಜಾಕಿ ಭಾವನಾ ಶಿವಣ್ಣನಿಗೆ ಜೊತೆಯಾಗಿ ನಟಿಸುತ್ತಿದ್ದಾರೆ.

ಭಜರಂಗಿ-2

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ 'ರುಸ್ತುಂ' ಚಿತ್ರ ರಿಲೀಸ್​​​ಗೆ ರೆಡಿಯಾಗಿದೆ. ಜೊತೆಗೆ 'ಆನಂದ್', 'ದ್ರೋಣ' ಹಾಗೂ 'ಎಸ್​​​ಆರ್​​ಕೆ' ಸಿನಿಮಾಗಳ ಶೂಟಿಂಗ್​​​ನಲ್ಲಿ ಶಿವಣ್ಣ ಬ್ಯುಸಿಯಾಗಿದ್ದಾರೆ. ಇದೀಗ ಅವರ ಮತ್ತೊಂದು ಹೊಸ ಚಿತ್ರ ಸೆಟ್ಟೇರಿದೆ.

geeta shivrajkumar
ಚಿತ್ರಕ್ಕೆ ಕ್ಲಾಪ್​ ಮಾಡುತ್ತಿರುವ ಗೀತಾ ಶಿವರಾಜ್​​​ಕುಮಾರ್

ಬ್ಯುಸಿ ಶೆಡ್ಯೂಲ್ ನಡುವೆಯೂ ಶಿವಣ್ಣ 'ಭಜರಂಗಿ-2' ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದು, ಇಂದು ಚಿತ್ರ ಸಿಂಪಲ್ಲಾಗಿ ಸೆಟ್ಟೇರಿದೆ. ಬೆಂಗಳೂರಿನ ಯಡಿಯೂರು ಬಳಿ ಇರುವ ಶ್ರೀ ವೀರಾಂಜನೇಯ ದೇವಸ್ಥಾನದಲ್ಲಿ ಸರಳವಾಗಿ ಸಿನಿಮಾದ ಮುಹೂರ್ತ ನೆರವೇರಿತು. ಶಿವರಾಜ್​ಕುಮಾರ್ ಅವರ ಪತ್ನಿ ಗೀತಾ ಶಿವರಾಜ್​​ಕುಮಾರ್ ಕ್ಲಾಪ್ ಮಾಡುವ ಮೂಲಕ ಚಿತ್ರಕ್ಕೆ ಚಾಲನೆ ನೀಡಿದ್ದಾರೆ. ಚಿತ್ರದ ಶೂಟಿಂಗ್ ನಾಳೆಯಿಂದ ಆರಂಭವಾಗಲಿದೆ.

muhurta
ಭಜರಂಗಿ-2 ಮುಹೂರ್ತ

ಶಿವಣ್ಣನ‌ ಜೊತೆ ನಾಯಕಿಯಾಗಿ ಜಾಕಿ ಭಾವನಾ ನಟಿಸುತ್ತಿದ್ದಾರೆ. 'ಭಜರಂಗಿ' ಚಿತ್ರದಲ್ಲಿ ಸೂಪರ್ ಡೂಪರ್ ಹಾಡುಗಳನ್ನು ಕೊಟ್ಟಿದ್ದ ಮ್ಯೂಸಿಕ್​​ ಕಂಪೋಸರ್ ಅರ್ಜುನ್ ಜನ್ಯ ಭಜರಂಗಿ-2ಕ್ಕೂ ಸಂಗೀತ ನೀಡಲಿದ್ದಾರೆ. ಚಿತ್ರವನ್ನು ಜಯಣ್ಣ ಭೋಗೇಂದ್ರ ನಿರ್ಮಾಣ ಮಾಡುತ್ತಿದ್ದು, ಜುಲೈ 12ರಂದು ಶಿವರಾಜ್​​​​ಕುಮಾರ್​ ಬರ್ತಡೇ ದಿನ ಫಸ್ಟ್ ಲುಕ್ ಬಿಡುಗಡೆ ಮಾಡುವುದಾಗಿ ನಿರ್ದೇಶಕ ಹರ್ಷ ತಿಳಿಸಿದ್ದಾರೆ.

ಸಿಂಪಲಾಗಿ" ಸೆಟ್ಟೇರ್ತು ಭಜರಂಗಿ೨"ನಾಳೆಯಿಂದ ಶೂಟಿಂಗ್ ಶುರು ಗುರು...!!!! ಸುದ್ದಿ ಮೇಲ್ ಮಾಡಲಾಗಿದೆ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ರುಸ್ತುಂ' ಚಿತ್ರದ ರಿಲೀಸ್ ಗೆ ರೆಡಿಯಾಗಿದೆ.ಜೊತೆಗೆ
ಶಿವರಾಜ್ ಕುಮಾರ್ 'ಆನಂದ್' " ದ್ರೋಣ" ಹಾಗೂ "ಎಸ್ ಆರ್ ಕೆ"ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.ಈ ಬ್ಯುಸಿ ಶೆಡ್ಯೂಲ್ ನಲ್ಲೂ
ಶಿವಣ್ಣ ಬಲ 'ಭಜರಂಗಿ-2' ಚಿತ್ರಕ್ಕೂ ಗ್ರೀನ್ ಸಿಗ್ನಲ್ ಕೊಟ್ಟಿದ್ದು .ಇಂದು "ಭಜರಂಗಿ ೨ " ಚಿತ್ರ ಸಿಂಪಲಾಗಿ ಸೆಟ್ಟೇರಿದೆ.ನಗರದ ಯಡಿಯೂರು ಬಳಿಇರುವ ಶ್ರೀ ವೀರಾಂಜನೇಯ ದೇವಸ್ಥಾನದಲ್ಲಿ ಸರಳವಾಗಿ "ಭಜರಂಗಿ೨ " ಚಿತ್ರದ ಮುಹೂರ್ತ ನೇರವೇರಿದ್ದು ಗೀತಾ ಶಿವರಾಜ್ ಕುಮಾರ್ ಕ್ಲಾಪ್ ಮಾಡುವ ಮೂಲಕ ಚಿತ್ರಕ್ಕೆ ಚಾಲನೇ ನೀಡಿದ್ದಾರೆ.ಇನ್ನೂ ಭಜರಂಗಿ ೨ ಚಿತ್ರಕ್ಕೆ ಎ ಹರ್ಷ ಆಕ್ಷನ್ ಕಟ್ ಹೇಳ್ತಿದ್ದು .ಚಿತ್ರದ ಶೂಟಿಂಗ್ ನಾಳೆಯಿಂದ ಶುರುವಾಗಲಿದೆ. ಅಲ್ಲದೆ ಚಿತ್ರದಲ್ಲಿ ಶಿವಣ್ಣನ‌ ಜೊತೆ ನಾಯಕಿಯಾಗಿ ಜಾಕಿ ಭಾವನ ಕಾಣಿಸ್ತಿದ್ದು ಭಜರಂಗಿ ಚಿತ್ರದಲ್ಲಿ ಸೂಪರ್ ಡೂಪರ್ ಹಾಡುಗಳ ಕೊಟ್ಟಿದ್ದ ಮ್ಯಾಜಿಕಲ್‌ ಕಂಪೋಸರ್ ಅರ್ಜುನ್ ಜನ್ಯ ಭಜರಂಗಿ ಸಿಕ್ವೇಲ್ ಗೂ ಸಂಗೀತ ನೀಡಲಿದ್ದಾರೆ.ಇನ್ನೂ ಈ ಚಿತ್ರವನ್ನು ಜಯಣ್ಣ ಭೋಗೇಂದ್ರ ನಿರ್ಮಾಣ ಮಾಡ್ತಿದ್ದು.ಮುಂದಿನ ತಿಂಗಳು ಹ್ಯಾಟ್ರಿಕ್ ಹೀರೋ ಬರ್ತ್ ಡೇ ದಿನ ಚಿತ್ರದ ಫಸ್ಟ್ ಲುಕ್ ಲಾಂಚ್ ಮಾಡುವುದಾಗಿ ನಿರ್ದೇಶಕ ಹರ್ಷಈ‌ ಟಿವಿ
ಭಾರತ್ ಗೆ‌ ತಿಳಿಸಿ್್ದ್ದಾದ್ದಾರೆ.

ಸತೀಶ ಎಂಬಿ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.