ನಾಗಿಣಿ ಎಂದ ಕೂಡಲೇ ನೆನಪಾಗುವುದು ದೀಪಿಕಾ ದಾಸ್. ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ನಾಗಿಣಿ ಧಾರಾವಾಹಿಯಲ್ಲಿ ನಾಗಿಣಿ ಅಮೃತಾಳಾಗಿ ಮನೆ ಮಾತಾಗಿದ್ದ ದೀಪಿಕಾ ದಾಸ್ ಅದ್ಯಾವಾಗ ಧಾರಾವಾಹಿಯಿಂದ ಹೊರಬಂದರೋ ಆ ಜಾಗಕ್ಕೆ ಬಂದ ಮತ್ತೋರ್ವ ನಾಗಿಣಿಯೇ ಈ ಗೌತಮಿ ಜಯರಾಮ್.

ನಾಗಿಣಿಯಾಗಿ ನಟಿಸಿ ಕಿರುತೆರೆ ಪ್ರಿಯರ ಮನ ಗೆದ್ದಿರುವ ಗೌತಮಿ ಜಯರಾಮ್ ಅವರಿಗೆ ಬಾಲ್ಯದಿಂದಲೂ ನಟನೆಯೆಂದರೆ ವಿಶೇಷ ಒಲವು. ಅದೃಷ್ಟ ಎಂಬಂತೆ ಅವಕಾಶಗಳು ಕೂಡ ಇವರನ್ನು ಅರಸಿ ಬರುತ್ತಿತ್ತು. ಆದರೆ ಗೌತಮಿ ತಂದೆ ಟೀಚರ್ ಆಗಿದ್ದರಿಂದ ಪಿಯುಸಿ ಕಂಪ್ಲೀಟ್ ಆಗದೆ ನಟನೆ ಬೇಡ ಎಂದಿದ್ದರು.

ಮುಂದೆ ಮಹಾಕಾಳಿ, ಅಕ್ಕ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿರುವ ಗೌತಮಿ, ನೆಗೆಟಿವ್ ರೋಲ್ನಲ್ಲಿ ಕಾಣಿಸಿಕೊಂಡಿದ್ದೇ ಹೆಚ್ಚು. ನಾಗಿಣಿ ಧಾರಾವಾಹಿಯಲ್ಲಿ ಮೊದಲಿಗೆ ನೆಗೆಟಿವ್ ರೋಲ್ನಲ್ಲಿ ಗೌತಮಿ ಎಂಟ್ರಿ ಕೊಟ್ಟಿದ್ದರೂ ಇದೀಗ ಪಾಸಿಟಿವ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ನಾಗಿಣಿ ಪಾತ್ರದಲ್ಲಿ ನಟಿಸುವ ಅವಕಾಶ ಬಂದಾಗ ಕೊಂಚ ಭಯವಾಯಿತು. ಯಾಕೆಂದರೆ ನಾಗಿಣಿ ಎಂದ ಕೂಡಲೇ ಜನರ ಮುಂದೆ ಬರುವ ಮುಖ ದೀಪಿಕಾ ದಾಸ್ ಅವರದು. ನಾಗಿಣಿಯಾಗಿ ಅವರು ಮನೆ ಮಾತಾಗಿದ್ದರು. ನಾನು ನಾಗಿಣಿ ಆಗಿ ಬಂದರೆ ಜನ ಸ್ವೀಕರಿಸುತ್ತಾರಾ? ಎಂದು ಭಯವೂ ಇತ್ತು. ಆದರೆ ಜನರು ನನ್ನನ್ನು ಪ್ರೀತಿಸಿ ಸ್ವಾಗತಿಸಿದ್ದಾರೆ. ಅವರ ಪ್ರೀತಿಗೆ ನಾನು ಆಭಾರಿಯಾಗಿದ್ದೇನೆ ಎಂದು ಗೌತಮಿ ಸಂತೋಷ ವ್ಯಕ್ತಪಡಿಸಿದ್ರು.
