ಬೆಂಗಳೂರು: ಬಣ್ಣದ ಲೋಕದಲ್ಲಿ ಬದುಕು ಕಟ್ಟಿಕೊಳ್ಳ ಬೇಕೆಂಬ ಕನಸ ಹೊತ್ತ ಹಾವೇರಿ ಹುಡುಗರ ತಂಡವೊಂದು " ಗೋರಿ" ಎಂಬ ಚಿತ್ರ ರೆಡಿ ಮಾಡ್ಕೊಂಡ್ ಗಾಂಧಿ ನಗರಕ್ಕೆ ಲಗ್ಗೆ ಇಡೋಕೆ ಬರ್ತಿದ್ದಾರೆ. ಅಲ್ಲದೆ ಈಗಾಗಲೇ ಚಿತ್ರದ ಬಹುತೇಕ ಶೂಟಿಂಗ್ ಕಂಪ್ಲೀಟ್ ಮಾಡಿದ್ದು , ಸಾಂಗ್, ಫೈಟ್, ಶೂಟ್, ಬ್ಯಾಲೆನ್ಸ್ ಇಟ್ಕೊಂಡ್ ಈ ಗ್ಯಾಪ್ ನಲ್ಲಿ ಚಿತ್ರತಂಡ ಚಿತ್ರದ ಆಡಿಯೋ ಬಿಡುಗಡೆ ಮಾಡಿದೆ.
ನಗರದ ಎಸ್ ಆರ್ ವಿ ಥಿಯೇಟರ್ ನಲ್ಲಿ ನಡೆದ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಇಡೀ ಚಿತ್ರತಂಡ ಭಾಗವಹಿಸಿ ಗೋರಿ ಚಿತ್ರ ಆಡಿಯೋ ಲಾಂಚ್ ಮಾಡಿದ್ರು." ಗೋರಿ" ಚಿತ್ರವನ್ನು ನವ ನಿರ್ದೇಶಕ ಗೋಪಾಲಕೃಷ್ಣ ನಿರ್ದೇಶನ ಮಾಡಿದ್ದು . ಸ್ನೇಹ ಪ್ರೀತಿ ಸುತ್ತ ಸುತ್ತುವ ಕಥೆಯ ಹೆಣೆದು "ಗೋರಿ" ಮೇಲೆ "ಪ್ರೀತಿಯ ಸಮಾಧಿ" ಕಟ್ಟೊಕೆ ಹೊರಟಿದ್ದಾರೆ.ಇನ್ನು ಗೋರಿ ಚಿತ್ರದಲ್ಲಿ ನಾಯಕನಾಗಿ ಸಿನಿಮಾ ಪತ್ರಕರ್ತ ಕಿರಣ್ ಹಾವೇರಿ ನಟಿಸಿದ್ದು ,ಈ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡೊಕೆ ಭರ್ಜರಿಯಾಗಿ ಸಿದ್ದರಾಗ್ತಿದ್ದಾರೆ.
ಇನ್ನೂ ಚಿತ್ರದಲ್ಲಿ ನಾಯಕಿಯಾಗಿ ಸ್ಮಿತಾ ಶ್ವೇತ ಮೊದಲ ಬಾರಿಗೆ ಬಣ್ಣ ಹಚ್ಚಿದ್ದು, ಅದೃಷ್ಟ ಪರೀಕ್ಷೆಗೆ ಸಿದ್ದರಾಗಿದ್ದಾರೆ. ಅಲ್ಲದೇ ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು ,ವಿನು, ಮನಸು, ಸಂಗೀತ ನೀಡಿದ್ದು, ಕೆ ಕಲ್ಯಾಣ್ ,ಚುಟು ಚುಟು ಖ್ಯಾತಿಯ ಶಿವು ಬೇರ್ಗಿ ಹಾಗೂ ಪತ್ರಕರ್ತ ಎಂಚ್ ಜಗ್ಗೀನ್ ಸಾಹಿತ್ಯ ಬರೆದಿದ್ದಾರೆ. ಅಲ್ಲದೆ ಶಿವು ಬೇರ್ಗಿ ಬರೆದಿರುವ ಬೇರೆನೆ ಐತಿ ಸಾಂಗ್ ಉತ್ತರ ಕರ್ನಾಟಕ ಶೈಲಿಯಲ್ಲಿದ್ದು ಪಡ್ಡೆಗಳ ಅಡ್ಡದಲ್ಲಿ ಸೌಂಡ್ ಮಾಡೋ ಸೂಚನೆಯನ್ನೂ ಕೊಟ್ಟಿದೆ.