ETV Bharat / sitara

2ನೇ ಮಗುವಿನ ನಿರೀಕ್ಷೆಯಲ್ಲಿ ಕರೀನಾ-ಸೈಫ್​ ಅಲಿ ದಂಪತಿ: ಕರೀನಾ ಮತ್ತೆ ಗರ್ಭಿಣಿ! - ಸೈಫ್​ ಅಲಿ ಖಾನ್​

ಬಾಲಿವುಡ್​ನ ತಾರಾ ದಂಪತಿಗಳಾಗಿರುವ ಸೈಫ್​ ಅಲಿ ಖಾನ್​ ಹಾಗೂ ಕರೀನಾ ಕಪೂರ್​ ಖಾನ್​ ಜೋಡಿ ಇದೀಗ ಮತ್ತೊಂದು ಗುಡ್​ನ್ಯೂಸ್​ ನೀಡಿದೆ.

Kareena Kapoor Khan
Kareena Kapoor Khan
author img

By

Published : Aug 13, 2020, 3:37 AM IST

ನವದೆಹಲಿ: ಬಾಲಿವುಡ್​ ನಟಿ ಕರೀನಾ ಕಪೂರ್​​ ಖಾನ್​ ಹಾಗೂ ನಟ ಸೈಫ್​ ಅಲಿ ಖಾನ್​ ಇದೀಗ ಮತ್ತೋಮ್ಮೆ ತಂದೆ-ತಾಯಿಯಾಗಲಿದ್ದು, ಕರೀನಾ ಎರಡನೇ ಮಗುವಿಗೆ ಜನ್ಮ ನೀಡಲಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ಉಭಯ ತಾರೆಯರ ಮ್ಯಾನೇಜರ್​ ಜಂಟಿ ಹೇಳಿಕೆ ರಿಲೀಸ್​ ಮಾಡಿದ್ದು, ಕರೀನಾ ಕಪೂರ್​ ಖಾನ್​ ಗರ್ಭಿಣಿಯಾಗಿದ್ದಾರೆ. ಹೀಗಾಗಿ ಪಟೌಡಿ ಕುಟುಂಬಕ್ಕೆ ಶೀಘ್ರದಲ್ಲೇ ಮತ್ತೋರ್ವ ಸದಸ್ಯನ ಎಂಟ್ರಿ ಆಗಲಿದೆ.

2012ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಕರೀನಾ-ಸೈಫ್​ಗೆ 2016ರಲ್ಲಿ ತೈಮೂರ್​ ಜನಿಸಿದ್ದಾನೆ. ಈಗಾಗಲೇ ಆತನಿಗೆ 4 ವರ್ಷ ತುಂಬಲಿದ್ದು, ಇದರ ಮಧ್ಯೆ ಮತ್ತೊಂದು ಸಂತೋಷದ ವಿಚಾರ ಹಂಚಿಕೊಂಡಿದ್ದಾರೆ.

ಈಗಾಗಲೇ ಅಮೃತಾ ಸಿಂಗ್​ ಜೊತೆ ಮೊದಲ ಮದುವೆ ಮಾಡಿಕೊಂಡಿರುವ ಸೈಫ್​ ಅಲಿ ಖಾನ್​ಗೆ ಇಬ್ಬರು ಮಕ್ಕಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.