ಗೋಲ್ಡನ್ ಸ್ಟಾರ್ ಗಣೇಶ್ ಹುಟ್ಟುಹಬ್ಬಕ್ಕೆ ಅವರ ಅಭಿಮಾನಿಗಳಿಗೆ ಡಬಲ್ ಧಮಾಕ ಕಾದಿದೆ. ಹೌದು, ಜುಲೈ 2ರಂದು ಮಳೆ ಹುಡುಗನ ಹುಟ್ಟು ಹಬ್ಬಕ್ಕೆ ಸಿಂಪಲ್ ಸುನಿ ಕಾಂಬಿನೇಷನ್ನಲ್ಲಿ ಸೆಟ್ಟೇರಲಿರುವ "ಸಕತ್" ಚಿತ್ರದ ಪೋಸ್ಟರ್ ಲಾಂಚ್ ಮಾಡುವುದಾಗಿ ನಿರ್ದೇಶಕ ಸುನಿ ಘೋಷಿಸಿದ್ದರು.
ಅದರೆ ಈಗ ಎರಡು ದಿನ ಮುಂಚಿತವಾಗಿ ಗಣಿ ಫ್ಯಾನ್ಸ್ಗೆ ಸಿಂಪಲ್ ಸುನಿ ಮತ್ತೊಂದು ಸಿಹಿ ಸುದ್ದಿ ನೀಡಿದ್ದಾರೆ. ಚಮಕ್ ಚಿತ್ರದ ನಂತರ ಮತ್ತೊಮ್ಮೆ ಸಕತ್ ಚಿತ್ರದಲ್ಲಿ ಈಜೋಡಿ ಜೊತೆಯಾಗೋಕೆ ರೆಡಿಯಾಗಿತ್ತು. ಈಗ ಈ ಜೋಡಿ ಕಾಂಬಿನೇಷನಲ್ಲಿ ಮತ್ತೊಂದು ಮಾಸ್ ಚಿತ್ರವನ್ನು ಅನೌನ್ಸ್ ಮಾಡಿ, ಚಿತ್ರದ ಟೈಟಲ್ ಪೋಸ್ಟರ್ ಅನ್ನು ಸಹ ರಿವಿಲ್ ಮಾಡಿದ್ದಾರೆ.
ಸಕತ್ ಚಿತ್ರದ ನಂತರ ಗಣಿ-ಸುನಿ ಹ್ಯಾಟ್ರಿಕ್ ಕಾಂಬಿನೇಶನ್ನಲ್ಲಿ ಸ್ಟೋರಿ ಆಫ್ ‘ರಾಯಗಢ’ ಟೈಟಲ್ನಲ್ಲಿ ಮಾಸ್ ಸಿನಿಮಾ ಮಾಡೋಕೆ ಈ ಜೋಡಿ ರೆಡಿಯಾಗಿದೆ.
‘ರಾಯಗಢ’ ಚಿತ್ರದಲ್ಲಿ ಗಣೇಶ್ ಗಾಗಿಯೇ ನಿರ್ದೇಶಕ ಸಿಂಪಲ್ ಸುನಿ ಮಾಸ್ ಕಥೆ ಹೆಣೆದಿದ್ದು. ಗೋಲ್ಡನ್ ಸ್ಟಾರ್ ಹುಟ್ಟುಹಬ್ಬದ ಪ್ರಯುಕ್ತ ಸ್ಟೋರಿ ಆಫ್ ರಾಯಗಢದ ಫಸ್ಟ್ ಲುಕ್ ರಿವಿಲ್ ಮಾಡಿದ್ದಾರೆ.
ಅಲ್ಲದೆ ಚಿತ್ರಕ್ಕಾಗಿ ಗಣೇಶ್ 15 ದಿನಗಳ ಹಿಂದೆ ಭರ್ಜರಿ ಫೋಟೋ ಶೂಟ್ ಮಾಡಿಸಿದ್ದಾರೆ. ಈ ‘ಸಕತ್’ ಚಿತ್ರದ ಬಳಿಕ ಈ ಚಿತ್ರದ ಶೂಟಿಂಗ್ ಶುರುವಾಗಲಿದೆ.