ಲಾಸ್ ಏಂಜಲೀಸ್: ಮುಂಬರುವ 93ನೇ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ವಿದೇಶಿ ಭಾಷೆಯ ಚಲನಚಿತ್ರಗಳ ಅರ್ಹತಾ ಮಾನದಂಡಗಳನ್ನು ಹಾಲಿವುಡ್ ವಿದೇಶಿ ಪತ್ರಿಕಾ ಮಂಡಳಿ (ಹೆಚ್ಎಫ್ಪಿಎ) ಬದಲಾಯಿಸಿದೆ.
ಇದರಿಂದಾಗಿ ಈ ಮೊದಲಿದ್ದ, ಅಕ್ಟೋಬರ್ 1 ರಿಂದ ಡಿಸೆಂಬರ್ 31 ರವರೆಗೆ 15 ತಿಂಗಳು ತಮ್ಮ ಮೂಲ ದೇಶದಲ್ಲಿ ಚಿತ್ರ ಬಿಡುಗಡೆಯಾಗಿರಬೇಕು ಎಂಬ ಮಾನದಂಡವನ್ನು ರದ್ದು ಮಾಡಲಾಗಿದೆ.
ಹೊಸ ನಿಯಮದ ಪ್ರಕಾರ, ಮುಂಬರುವ ಮಾರ್ಚ್ 15 ರಿಂದ ಹೆಚ್ಎಫ್ಪಿಎ ಹೇಳುವ ಅವಧಿಯವರೆಗೆ ಯಾವುದೇ ದೇಶದಲ್ಲಿ ಯಾವುದೇ ಸ್ವರೂಪ (ಉದಾ : ಚಿತ್ರ ಮಂದಿರ, ಪೇ-ಪರ್-ವೀವ್ , ಸಬ್ಸ್ಕ್ರೈಬ್ಡ್ ಕೇಬಲ್ ಚಾನೆಲ್ ) ದಲ್ಲಿ ಚಿತ್ರ ಬಿಡುಗಡೆಯಾಗಿದ್ದರೆ ಸಾಕು.