ETV Bharat / sitara

300 ಮಕ್ಕಳ ಸಿನಿಮಾ ಗಿರ್ಮಿಟ್​​: ಅಂತದ್ದೇನಿದೆ ಈ ಸಿನಿಮಾದಲ್ಲಿ? - ಗಿರ್ಮಿಟ್​​ ಸಿನಿಮಾ

ಸುಮಾರು 300 ಮಕ್ಕಳು ಅಭಿನಯ ಮಾಡಿರುವ ಸಿನಿಮಾ ಗಿರ್ಮಿಟ್​ ಈ ಸಿನಿಮಾದ ವಿಶೇಷತೆ ಅಂದ್ರೆ ಮಕ್ಕಳು ಅಭಿನಯಿಸಿದ್ದು, ಇವರ ಧ್ವನಿಯಾಗಿ ಸ್ಯಾಂಡಲ್​ವುಡ್​​ನ ಸ್ಟಾರ್​ ನಟರು ನಿಂತಿದ್ದಾರೆ.

ಗಿರ್ಮಿಟ್
author img

By

Published : Nov 9, 2019, 9:31 AM IST

ಸಂಪೂರ್ಣ ಮಕ್ಕಳೇ ಆವರಿಸಿಕೊಂಡಿರುವ ಚಿತ್ರ ‘ಗಿರ್ಮಿಟ್’. ಸುಮಾರು 300 ಮಕ್ಕಳು ಈ ಚಿತ್ರದಲ್ಲಿ ಅಭಿನಯ ಮಾಡಿದ್ದಾರೆ. ಮನರಂಜನೆ ಜೊತೆ ಹಾಸ್ಯದ ಹೊನಲು ಹರಿಯುವುದಕ್ಕೆ ಕಾರಣ ಜನಪ್ರಿಯ ನಟರುಗಳ ಸಂಭಾಷಣೆ.

ಸಿನಿಮಾದಲ್ಲಿ ಪುಟ್ಟ ಮಕ್ಕಳಾದ ಆಶ್ಲೇಶ್ ಹಾಗೂ ಶ್ಲಾಘಾ ಪಾತ್ರಕ್ಕೆ ರಾಕಿಂಗ್ ಸ್ಟಾರ್ ಯಶ್​ ಹಾಗೂ ರಾಧಿಕಾ ಪಂಡಿತ್ ದನಿಯಾಗಿದ್ದಾರೆ. ಸುಧಾ ಬೆಳವಾಡಿ ಹಾಗೂ ರಂಗಾಯಣ ರಘು ಮೂರು ಹೆಣ್ಣುಮಕ್ಕಳ ತಾಯಿ ಹಾಗೂ ತಂದೆಯ ಪಾತ್ರಕ್ಕೆ ತಮ್ಮ ವಾಯ್ಸ್​​ ಡಬ್​​​ ಮಾಡಿದ್ದಾರೆ. ಅಚ್ಯುತ್ ಕುಮಾರ್ ನಾಯಕನ ತಂದೆಗೆ ಪಾತ್ರಕ್ಕೆ ಧ್ವನಿ ನೀಡಿದ್ರೆ, ತಾರಾ ಅನುರಾಧ ನಾಯಕನ ತಾಯಿ ಪಾತ್ರಕ್ಕೆ ನೀಡಿದ್ದಾರೆ.

ಅಸಲಿಗೆ ಈ ಮಕ್ಕಳ ಅಭಿನಯದ ‘ಗಿರ್ಮಿಟ್’ ಚಿತ್ರದ ಕಥೆ ಏನಪ್ಪಾ ಅಂದರೆ, ಶಂಕ್ರಪ್ಪನ ಮನೆಯಲ್ಲಿ ಮೂರು ಹೆಣ್ಣು ಮಕ್ಕಳು. ದೊಡ್ಡವಳಿಗೆ ಮದುವೆ ಆಗದೇ ಮಿಕ್ಕವರಿಗೆ ಮದುವೆ ಆಗುವಂತಿಲ್ಲ. ಶಂಕರಪ್ಪ ಬಹಳ ಜುಗ್ಗ ಆಸಾಮಿ. ಈ ಮನೆಯ ಕೊನೆಯ ಮಗಳು ರಶ್ಮಿ ಹಾಗೂ ರಾಜ ಪ್ರೇಮಿಗಳು. ಆದರೆ ರಶ್ಮಿ ಹಾಕುವ ಷರತ್ತು ಏನಪ್ಪ ಅಂದರೆ , ರಾಜನೇ ಇಬ್ಬರು ಹುಡುಗರನ್ನು ಹುಡುಕಿ ಅಕ್ಕಂದಿರ ಮದುವೆಗೆ ವ್ಯವಸ್ಥೆ ಮಾಡಿದರೆ ಎಲ್ಲವೂ ಸರಾಗ ಎಂದು.

  • " class="align-text-top noRightClick twitterSection" data="">

ಈಗ ರಾಜ ಈ ರಶ್ಮಿಯನ್ನೇ ಇಷ್ಟ ಪಡಲು ಕಾರಣ ರಾಜನ ಅಮ್ಮ ಇಂಗ್ಲಿಷ್​ ವ್ಯಾಮೋಹಿ. ಇಂಗ್ಲೀಷ್ ಗೊತ್ತಿರುವವಳೇ ಸೊಸೆ ಆಗಬೇಕು. ರಾಜ ರಶ್ಮಿ ಪರಸ್ಪರ ಒಪ್ಪಿದ್ದಾರೆ. ಆದರೆ, ರಾಜ ಇನ್ನ ಎರಡು ಹುಡುಗರನ್ನು ಹುಡುಕುವುದು ಚಿತ್ರದ ಮುಂದಿನ ವಿಚಾರ. ಇದರ ಜೊತೆಗೆ ರಶ್ಮಿಯನ್ನು ಇಷ್ಟ ಪಡುವ ವಿಲನ್ ಸಹ ಇದ್ದಾನೆ. ಮುಂದಿನದ್ದು ಥೇಟ್ ದೊಡ್ಡವರ ಸಿನಿಮಾದಲ್ಲಿ ಆಗುವಂತೆ ಈ ಮಕ್ಕಳ ಅಭಿನಯದ ಸಿನಿಮಾದಲ್ಲಿಯೂ ಆಗುವುದು.

ಮಾಸ್ಟರ್​ ಆಶ್ಲೇಶ್ ಸ್ಟೈಲ್ ರಾಕಿಂಗ್ ಸ್ಟಾರ್ ಯಶ್​​ ಅನುಕರಣೆ. ಶ್ಲಾಘಾ ಪಾತ್ರ ಸಹ ರಾಧಿಕಾ ಪಂಡಿತ್ ಪಡಿಯಚ್ಚು. ಮಕ್ಕಳ ಅಭಿನಯದ ಜೊತೆಗೆ, ವೇಷ ಭೂಷಣ ದೊಡ್ಡವರನ್ನು ಹೋಲುವಂತೆ ಮಾಡಿರುವುದು ಬೇಶ್​​ ಎನ್ನಿಸಿಕೊಳ್ಳುತ್ತದೆ. ‘ಗಿರ್ಮಿಟ್’ ಚಿತ್ರದ ಸಂಭಾಷಣೆ ಚುರುಕಾಗಿ ಹಾಗೂ ಹಾಸ್ಯಮಯವಾಗಿದೆ. ರವಿ ಬಸ್ರೂರ್ ಅವರು ಮೂರು ಹಾಡುಗಳನ್ನು ಕೇಳುವಂತೆ ಮಾಡಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಾಡಿನಲ್ಲಿ ಕರ್ನಾಟಕದ 30 ಜಿಲ್ಲೆಗಳ ಹೆಸರುಗಳು ಬರುವುದುಂಟು.

ಚಿತ್ರ : ಗಿರ್ಮಿಟ್

ನಿರ್ಮಾಪಕರು : ಎನ್ ಎಸ್ ರಾಜಕುಮಾರ

ನಿರ್ದೇಶನ : ರವಿ ಬಸ್ರೂರ್

ಸಂಗೀತ : ರವಿ ಬಸ್ರೂರ್

ಛಾಯಾಗ್ರಹಣ : ಸಚಿನ್ ಬಸ್ರೂರ್

ಗಿರ್ಮಿಟ್ ಕನ್ನಡ ಚಿತ್ರ ವಿಮರ್ಶೆ

ಗಿರ್ಮಿಟ್ ಸವಿದಷ್ಟೇ ರುಚಿಕರ ಹಾಗೂ ಸ್ವಾದ!

ಅವದಿ – 120 ನಿಮಿಷ, ಕ್ಯಾಟಗರಿ ಮಕ್ಕಳಿಂದ ದೊಡ್ಡವರ ಲವ್ ಸ್ಟೋರಿ, ರೇಟಿಂಟ್ -3.5/5

ಚಿತ್ರ – ಗಿರ್ಮಿಟ್, ನಿರ್ಮಾಪಕರು –ಎನ್ ಎಸ್ ರಾಜಕುಮಾರ, ನಿರ್ದೇಶನ = ರವಿ ಬಸ್ರೂರ್, ಸಂಗೀತ – ರವಿ ಬಸ್ರೂರ್, ಛಾಯಾಗ್ರಹಣ – ಸಚಿನ್ ಬಸ್ರೂರ್, ತಾರಾಗಣ - ಆಶ್ಲೇಷ ರಾಜ್, ಶ್ಲಾಘಾ ಸಾಲಿಗ್ರಾಮ, ಶ್ರಾವ್ಯ ಮರವಂತೆ, ನಾಗರಾಜ್ ಜಪ್ತಿ, ತನಿಶ ಕೋಣೆ, ಆರಾಧ್ಯ ಶೆಟ್ಟಿ, ಆದಿತ್ಯ ಕುಂದಾಪುರ, ಸಿಚನ ಕೋಟೇಶ್ವರ, ಪವಿತ್ರ ಎಚ್, ಜಾಯೆನ್ದ್ರ ವಾಕ್ವಾಡಿ, ಮನಿಷ್ ಶೆಟ್ಟಿ, ಸಾರ್ತಕ್ ಶೇನೊಯ್, ಮಹೇಂದ್ರ, ಸಹನಾ ಬಸ್ರೂರ್, ಪವನ್ ಬಸ್ರೂರ್ ಹಾಗೂ ಇನ್ನಿತರ ಪುಟಾಣಿಗಳು.

ಇದು ಸಂಪೂರ್ಣ ಮಕ್ಕಳೇ ಆವರಿಸಿಕೊಂಡಿರುವ ಚಿತ್ರ ಗಿರ್ಮಿಟ್ – ಸುಮಾರು 300 ಮಕ್ಕಳು ಈ ಚಿತ್ರದಲ್ಲಿ ಅಭಿನಯ ಮಾಡಿದ್ದಾರೆ. ಇದು ಮನರಂಜನೆ ಜೊತೆ ಹಾಸ್ಯದ ಹೊನಲು ಹರಿಯುವುದಕ್ಕೆ ಕಾರಣ ಜನಪ್ರಿಯ ನಟರುಗಳ ಸಂಭಾಷಣೆ ಮಕ್ಕಳ ಪಾತ್ರಕ್ಕೆ ಡಬ್ ಮಾಡಿರುವುದರಿಂದ.

ಸಾಧು ಕೋಕಿಲ ಅವರ ನಿರೂಪಣೆ, ರಾಕಿಂಗ್ ಸ್ಟಾರ್ ಯಷ್ ಹಾಗೂ ರಾಧಿಕಾ ಪಂಡಿತ್ ಅವರು ಮಾತುಗಳನ್ನು ಪುಟ್ಟ ಮಕ್ಕಳಾದ ಆಶ್ಲೇಶ್ ಹಾಗೂ ಶ್ಲಾಘಾ ಅವರಿಗೆ ಜೋಡಿಸಿರುವುದು, ಸುಧ ಬೆಳವಾಡಿ ಹಾಗೂ ರಂಗಾಯಣ ರಘು ಮೂರು ಹೆಣ್ಣುಮಕ್ಕಳ ತಾಯಿ ಹಾಗೂ ತಂದೆಯ ಪಾತ್ರಕ್ಕೆ, ಅಚ್ಯುತ್ ಕುಮಾರ್ ನಾಯಕನ ತಂದೆಗೆ, ತಾರಾ ಅನುರಾಧ ನಾಯಕನ ತಾಯಿ ಪಾತ್ರಕ್ಕೆ, ಜೊತೆಗೆ ನಗೆ ನಟ ಜಹಂಗೀರ್, ಖಳ ನಟನಿಗೆ ಉಗ್ರಂ ಮಂಜು ಮಾತು ಜೋಡಿಸಿರುವುದು ಹಾಗೂ ಆ ಮಾತುಗಳನ್ನು ಬರೆದಿರುವುದಕ್ಕೆ ಚಪ್ಪಾಳೆ, ಶಿಳ್ಳೆ ಬೀಳುತ್ತದೆ.

ಅಸಲಿಗೆ ಈ ಮಕ್ಕಳ ಅಭಿನಯದ ಗಿರ್ಮಿಟ್ ಚಿತ್ರದ ಕಥೆ ಏನಪ್ಪಾ ಅಂದರೆ – ಶಂಕ್ರಪ್ಪನ ಮನೆಯಲ್ಲಿ ಮೂರು ಹೆಣ್ಣು ಮಕ್ಕಳು. ದೊಡ್ಡವಳಿಗೆ ಮದುವೆ ಆಗದೆ ಮಿಕ್ಕವರಿಗೆ ಮದುವೆ ಆಗುವಂತಿಲ್ಲ. ಶಂಕರಪ್ಪ ಬಹಳ ಜುಗ್ಗ ಆಸಾಮಿ. ಈ ಮನೆಯ ಕೊನೆಯ ಮಗಳು ರಶ್ಮಿ ಹಾಗೂ ರಾಜ ಪ್ರೇಮಿಗಳು. ಆದರೆ ರಶ್ಮಿ ಹಾಕುವ ಷರತ್ತು ಏನಪ್ಪಾ ಅಂದರೆ – ರಾಜನೆ ಇಬ್ಬರು ಹುಡುಗರನ್ನು ಹುಡುಕಿ ಅಕ್ಕಂದಿರ ಮದುವೆಗೆ ವ್ಯವಸ್ಥೆ ಮಾಡಿದರೆ ಎಲ್ಲವೂ ಸರಾಗ ಎಂದು.

ಈಗ ರಾಜ ಈ ರಶ್ಮಿಯನ್ನೇ ಇಷ್ಟ ಪಡಲು ಕಾರಣ ಅವನ ಮನೆಯಲ್ಲಿ ಅಮ್ಮ ಇಂಗ್ಲೀಷ್ ವ್ಯಾಮೋಹಿ. ಇಂಗ್ಲೀಷ್ ಗೊತ್ತಿರುವವಳೇ ಸೊಸೆ ಆಗಬೇಕು. ರಾಜ ರಶ್ಮಿ ಪರಸ್ಪರ ಒಪ್ಪಿದ್ದಾರೆ ಆದರೆ ರಾಜ ಇನ್ನ ಎರಡು ಹುಡುಗರನ್ನು ಹುಡುಕುವುದು ಚಿತ್ರದ ಮುಂದಿನ ವಿಚಾರ. ಇದರ ಜೊತೆಗೆ ರಶ್ಮಿಯನ್ನು ಇಷ್ಟ ಪಡುವ ವಿಲನ್ ಸಹ ಇದ್ದಾನೆ. ಮುಂದಿನದ್ದು ಥೇಟ್ ದೊಡ್ಡವರ ಸಿನಿಮಾದಲ್ಲಿ ಆಗುವಂತೆ ಈ ಮಕ್ಕಳ ಅಭಿನಯದ ಸಿನಿಮಾದಲ್ಲಿಯೂ ಆಗುವುದು.

ಮಾಸ್ಟೆರ್ ಆಶ್ಲೇಶ್ ಸ್ಟೈಲ್ ರಾಕಿಂಗ್ ಸ್ಟಾರ್ ಯಷ್ ಅನುಕರಣೆ. ಶ್ಲಾಘಾ ಪಾತ್ರ ಸಹ ರಾಧಿಕ ಪಂಡಿತ್ ಪಡಿಯಚ್ಚು. ಮಕ್ಕಳ ಅಭಿನಯದ ಜೊತೆಗೆ, ವೇಷ ಭೂಷಣ ದೊಡ್ಡವರನ್ನು ಹೋಲುವಂತೆ ಮಾಡಿರುವುದು ಬೇಷ್ ಎನ್ನಿಸಿಕೊಳ್ಳುತ್ತದೆ.

ಗಿರ್ಮಿಟ್ ಚಿತ್ರದ ಸಂಭಾಷಣೆ ಚುರುಕಾಗಿ ಹಾಗೂ ಹಾಸ್ಯಮಯವಾಗಿದೆ. ರವಿ ಬಸ್ರೂರ್ ಅವರು ಮೂರು ಹಾಡುಗಳನ್ನು ಕೇಳುವಂತೆ ಮಾಡಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಾಡಿನಲ್ಲಿ ಕರ್ನಾಟಕದ 30 ಜಿಲ್ಲೆಗಳ ಹೆಸರುಗಳು ಬರುವುದುಂಟು.

ಸಚಿನ್ ಬಸ್ರೂರ್ ಛಾಯಾಗ್ರಹಣ ಉತ್ತಮ ಗುಣ ಮಟ್ಟದಲ್ಲಿದೆ, ಸಂಕಲನ, ಮಕ್ಕಳಿಗೆ ವಸ್ತ್ರ ವಿನ್ಯಾಸ ಸೊಗಸಾಗಿ ಮಾಡಿಸಿದ್ದಾರೆ ನಿರ್ಮಾಪಕ ಎನ್ ಎಸ್ ರಾಜಕುಮಾರ್.

ಈ ನವೆಂಬರ್ 14 ರ ಮಕ್ಕಳ ದಿನಾಚರಣೆಗೆ ಈ ಗಿರ್ಮಿಟ್ ಸಕ್ಕತ್ ಆಗಿ ಒಪ್ಪಿಕೊಳ್ಳುತ್ತದೆ. ಇದೊಂದು ಮಕ್ಕಳ ಚಿತ್ರ ದೊಡ್ಡವರ ಸಹಾಯದಿಂದ.

ಮಕ್ಕಳು ಎಂದು ಕಡೆಗಣಿಸುವಂತಿಲ್ಲ, ದೊಡ್ಡವರಿಗಿಂತ ಒಂದು ಕೈ ಚನ್ನಾಗಿಯೇ ಎಲ್ಲ ಪಾತ್ರಗಳನ್ನು ನಿರ್ವಹಿಸಿದ್ದಾರೆ.

ಮನೆ ಮಂದಿಯೆಲ್ಲಾ ಕುಳಿತು ನೋಡುವ ಸಿನಿಮಾ ಈ ಗಿರ್ಮಿಟ್’.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.