ಕನ್ನಡ ಕಿರುತೆರೆಯ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 8 ಮುಕ್ತಾಯಗೊಳ್ಳುತ್ತಿದೆ. ಸೋಮವಾರದಿಂದ 14 ದಿನಗಳ ಕಾಲ ಲಾಕ್ಡೌನ್ ಘೋಷಣೆ ಮಾಡಿರುವುದರಿಂದ ಬಿಗ್ ಬಾಸ್ ಆಯೋಜಕರು ಶೋವನ್ನು ಅರ್ಧದಲ್ಲಿಯೇ ಮುಗಿಸಲು ನಿರ್ಧರಿಸಿದ್ದಾರೆ.
ಶೋನ ಫೈನಲ್ ಸಂಚಿಕೆ ಇಂದು ಮತ್ತು ನಾಳೆ ಪ್ರಸಾರವಾಗಲಿದೆ. ಈ ಕುರಿತು ಬಿಗ್ ಬಾಸ್ ಸ್ಪರ್ಧಿ ಗೀತಾ ಭಾರತಿ ಭಟ್ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಇದು ನಿಜವಾಗಿಯೂ ಬೇಸರದ ಸಂಗತಿ. ಸದ್ಯದ ಪರಿಸ್ಥಿತಿಯಲ್ಲಿ ಇದು ಅಗತ್ಯವಾಗಿದೆ.
ರಿಯಾಲಿಟಿ ಶೋ ರೂಪಿಸುವುದರ ಹಿಂದೆ ತುಂಬಾ ಕೆಲಸವಿದೆ. ಇಂತಹ ಕಠಿಣ ಸ್ಥಿತಿಯಲ್ಲಿ ಬಿಗ್ ಬಾಸ್ ಶೋವನ್ನು ಮುಗಿಸುತ್ತಿರುವುದು ಉತ್ತಮ ನಿರ್ಧಾರ. ಆದರೂ ಇದು ಅರ್ಧದಲ್ಲಿಯೇ ಅಂತ್ಯಗೊಳ್ಳುತ್ತಿರುವುದಕ್ಕೆ ನನಗೆ ಬೇಸರವಿದೆ ಎಂದಿದ್ದಾರೆ.
ಈ ಸೀಸನ್ ಬಹಳ ಕಾಳಜಿವಹಿಸಿಯೇ ನಡೆಯುತ್ತಿದೆ. ಕಳೆದ ವರುಷವೇ ಈ ಸೀಸನ್ ನಡೆಯಬೇಕಿತ್ತು. ಆದರೆ, ಕೊರೊನಾದಿಂದಾಗಿ ಮೂರು ತಿಂಗಳು ತಡವಾಯಿತು. ಶೋ ಆರಂಭಕ್ಕಿಂತ ಮುನ್ನ ಬಹಳ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಲಾಗಿತ್ತು ಎಂದಿದ್ದಾರೆ.
ಬಿಗ್ ಬಾಸ್ ಕನ್ನಡದ ದೊಡ್ಡ ರಿಯಾಲಿಟಿ ಶೋ. ಶೋನ ರೂಪಿಸಲು ಬಹಳ ಶ್ರಮ ಇದೆ. ಹೀಗಾಗಿ, ಅರ್ಧಕ್ಕೆ ಅಂತ್ಯಗೊಳಿಸುವುದು ಕಷ್ಟದ ನಿರ್ಧಾರ. ಬೇರೆ ಆಯ್ಕೆಗಳಿಲ್ಲ. ಹೊರಗಿನ ಪರಿಸ್ಥಿತಿ ಹದಗೆಟ್ಟಿದೆ ಎಂದು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.