ETV Bharat / sitara

'ಗರುಡ' ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ ಚಿತ್ರತಂಡ

ಸುಮಾರು 100 ಕ್ಕೂ ಹೆಚ್ಚು ಚಿತ್ರಗಳಲ್ಲಿ ಕೊರಿಯೋಗ್ರಫರ್ ಆಗಿ ಕೆಲಸ ಮಾಡಿರುವ ಧನು ಕುಮಾರ್ 'ಗರುಡ' ಸಿನಿಮಾವನ್ನು ನಿರ್ಮಿಸಿದ್ದಾರೆ. ಸಿದ್ಧಾರ್ಥ್ ಮಹೇಶ್, ಐಂದ್ರಿತಾ ರೈ, ಶ್ರೀನಗರ ಕಿಟ್ಟಿ, ಆಶಿಕಾ ರಂಗನಾಥ್, ರಂಗಾಯಣ ರಘು ಹಾಗೂ ಇನ್ನಿತರರು ಸಿನಿಮಾದಲ್ಲಿ ನಟಿಸಿದ್ದಾರೆ.

'ಗರುಡ'
author img

By

Published : Oct 1, 2019, 6:58 PM IST

2016 ರಲ್ಲಿ ತೆರೆಕಂಡಿದ್ದ 'ಸಿಪಾಯಿ' ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ನವನಟ ಸಿದ್ಧಾರ್ಥ್ ಮಹೇಶ್ ಈಗ ಮತ್ತೆ ಸ್ಯಾಂಡಲ್​​​​ವುಡ್​​​​ನಲ್ಲಿ 'ಗರುಡ' ನಾಗಿ ಹಾರಾಡಲು ರೆಡಿಯಾಗಿದ್ದಾರೆ. ಚಿತ್ರದ ಟ್ರೇಲರ್ ಇಂದು ಬಿಡುಗಡೆಯಾಗಿದೆ. ಮಲ್ಲೇಶ್ವರಂನ ಎಸ್​​​ಆರ್ವಿ ಥಿಯೇಟರ್​​​​​​​​ನಲ್ಲಿ ನಡೆದ ಟ್ರೇಲರ್ ಲಾಂಚ್ ಕಾರ್ಯಕ್ರಮದಲ್ಲಿ ಇಡೀ ಚಿತ್ರತಂಡ ಭಾಗವಹಿಸಿತ್ತು.

'ಗರುಡ' ಚಿತ್ರತಂಡದಿಂದ ಟ್ರೇಲರ್ ಬಿಡುಗಡೆ

'ಗರುಡ' ಚಿತ್ರ ಸೆಟ್ಟೇರಿ ಬರೋಬ್ಬರಿ ಎರಡೂವರೆ ವರ್ಷಗಳು ಕಳೆದಿದ್ದು ಹಲವಾರು ಅಡಚಣೆಗಳನ್ನು ಮೆಟ್ಟಿನಿಂತು ಚಿತ್ರತಂಡ ಇಂದು ಕೊನೆಗೂ ಚಿತ್ರದ ಟ್ರೇಲರ್​​ ಬಿಡುಗಡೆ ಮಾಡಿದೆ. ವಿಶೇಷ ಎಂದರೆ 'ಗರುಡ' ಚಿತ್ರದಲ್ಲಿ ಡೈಮಂಡ್ ಸ್ಟಾರ್ ಶ್ರೀನಗರ ಕಿಟ್ಟಿ ಮೊದಲ ಬಾರಿ ಪೊಲೀಸ್ ಆಫೀಸರ್ ಪಾತ್ರದಲ್ಲಿ ಮಿಂಚಿದ್ದು, ಅವರ ಪಾತ್ರ ರೋಚಕವಾಗಿರುವುದು ಟ್ರೇಲರ್​​​​ನಲ್ಲಿ ಎದ್ದು ಕಾಣುತ್ತದೆ. ನನ್ನ ಸಿನಿಮಾ ವೃತ್ತಿ ಜೀವನದಲ್ಲಿ ಇತರ ಸಿನಿಮಾಗಳಿಗಿಂತ ಈ ಸಿನಿಮಾದಲ್ಲಿ ನಾನು ಬಹಳ ವಿಭಿನ್ನವಾಗಿ ಕಾಣಿಸಿದ್ದೇನೆ. ಇದು ಪಕ್ಕಾ ಕಮರ್ಷಿಯಲ್ ಪಾತ್ರ ಎಂದು ಶ್ರೀನಗರ ಕಿಟ್ಟಿ ಹೇಳಿದರು. ನಾಯಕಿಯರಾಗಿ ಆಶಿಕಾ ರಂಗನಾಥ್ ಹಾಗೂ ನಟಿ ಐಂದ್ರಿತಾ ರೈ ಅಭಿನಯಿಸಿದ್ದು ಇಬ್ಬರದ್ದು ಬಹಳ ಪ್ರಮುಖ ಪಾತ್ರವಾಗಿದೆ. ಚಿತ್ರದ ನಾಯಕ ಸಿದ್ದಾರ್ಥ್ ಮಾತನಾಡಿ 'ಗರುಡ' ಸಿನಿಮಾ ಬಹಳ ಚೆನ್ನಾಗಿ ಮೂಡಿಬಂದಿದೆ. ಇದು ನನಗೆ ಬಹಳ ವಿಶೇಷವಾದ ಸಿನಿಮಾ. ಏಕೆಂದರೆ ನನ್ನ ಮದುವೆ ವಿಚಾರವನ್ನು 'ಗರುಡ' ಚಿತ್ರದ ಶೂಟಿಂಗ್ ಸೆಟ್​​​​ನಲ್ಲೇ ನಾನು ಅನೌನ್ಸ್ ಮಾಡಿದೆ. ನನ್ನ ಮದುವೆಗೆ ಒಂದು ವಾರ ಇರುವವರೆಗೂ ನಾನು ಚಿತ್ರದ ಶೂಟಿಂಗ್​​​ನಲ್ಲಿ ಪಾಲ್ಗೊಂಡಿದ್ದೆ ಎಂದು ಹೇಳಿಕೊಂಡರು. ಆಶಿಕಾ ರಂಗನಾಥ್ ಮಾತನಾಡಿ 'ಮುಗುಳ್ನಗೆ' ನಂತರ ನಾನು ಈ ಚಿತ್ರಕ್ಕೆ ಸಹಿ ಮಾಡಿದೆ. ಚಿತ್ರದಲ್ಲಿ ನಾನು ಕಾಲೇಜು ಹುಡುಗಿ ಪಾತ್ರದಲ್ಲಿ ನಾನು ನಟಿಸಿದ್ದೇನೆ. ನನ್ನ ಪಾತ್ರಕ್ಕೆ ಬಹಳ ಪ್ರಾಮುಖ್ಯತೆ ಇದೆ ಎಂದರು.

garuda
ಆಶಿಕಾ ರಂಗನಾಥ್, ಸಿದ್ಧಾರ್ಥ್ ಮಹೇಶ್

ಸುಮಾರು 100 ಕ್ಕೂ ಹೆಚ್ಚು ಚಿತ್ರಗಳಲ್ಲಿ ಕೊರಿಯೋಗ್ರಫರ್ ಆಗಿ ಕೆಲಸ ಮಾಡಿರುವ ಧನು ಕುಮಾರ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಪಕ್ಕಾ ಕಮರ್ಷಿಯಲ್ ಎಲಿಮೆಂಟ್ಸ್ ಇದ್ದು ಕುಟುಂಬ ಸಮೇತರಾಗಿ ನೋಡಬಹುದಾದ ಸಿನಿಮಾವಾಗಿದೆ. ಚಿತ್ರದಲ್ಲಿ ಕಾಮೆಡಿಗೂ ಹೆಚ್ಚು ಒತ್ತು ನೀಡಲಾಗಿದೆ ಎಂದು ಧನು ಕುಮಾರ್ ಹೇಳಿದರು. ಹೊಸಬರ ಸಿನಿಮಾವಾದರೂ ದೊಡ್ಡ ಬಜೆಟ್​​​ನಲ್ಲೇ ಸಿನಿಮಾ ತಯಾರಾಗಿದೆ. ನಟ ಸಿದ್ಧಾರ್ಥ್ ಮಹೇಶ್ ತಂದೆ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ರಂಗಾಯಣ ರಘು, ಆದಿ ಲೋಕೇಶ್, ರಾಜೇಶ್ ನಟರಂಗ, ಕಾಮಿಡಿ ನಟ ಆನಂದ್, ರಮೇಶ್ ಪಂಡಿತ್ ಸೇರಿದಂತೆ ಬಹುತೇಕ ಕಲಾವಿದರು ಚಿತ್ರದಲ್ಲಿ ನಟಿಸಿದ್ದು ಚಿತ್ರಕ್ಕೆ ರಘು ದೀಕ್ಷಿತ್ ಸಂಗೀತ ನೀಡಿದ್ದಾರೆ. ಸದ್ಯ ಚಿತ್ರತಂಡ ಗ್ರಾಫಿಕ್ಸ್ ಕೆಲಸದಲ್ಲಿ ಬ್ಯುಸಿ ಇದ್ದು ಎಲ್ಲಾ ಅಂದುಕೊಂಡಂತೆ ಆದರೆ ಈ ವರ್ಷದ ಕೊನೆಯಲ್ಲಿ ಬಿಡುಗಡೆ ಮಾಡಲು ಪ್ಲ್ಯಾನ್ ಮಾಡಲಾಗಿದೆ.

garuda
ಐಂದ್ರಿತಾ ರೈ

Intro:2016ರಲ್ಲಿ ತೆರೆಕಂಡಿದ್ದ "ಸಿಪಾಯಿ" ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ನವನಟ ಸಿದ್ಧಾರ್ಥ್ ಮಹೇಶ್ ಈಗ ಮತ್ತೆ ಸ್ಯಾಂಡಲ್ವುಡ್ನಲ್ಲಿ "ಗರುಡ "ನಾಗಿ ಹಾರಾಡಲು ರೆಡಿಯಾಗಿದ್ದಾರೆ.
ಎಸ್ ನವನಟ ಸಿದ್ಧಾರ್ಥ ಮಹೇಶ್ ಲೀಡ್ ರೋಲ್ ಪ್ಲೇ ಮಾಡಿರುವ ಗರುಡ ಚಿತ್ರದ ಟ್ರೈಲರ್ ಇಂದು ರಿಲೀಸ್ ಆಗಿದೆ. ಮಲ್ಲೇಶ್ವರಂನ ಎಸ್ ಆರ್ ವಿ ಥಿಯೇಟರ್ ನಲ್ಲಿ ನಡೆದ ಟ್ರೈಲರ್ ಲಾಂಚ್ ಕಾರ್ಯಕ್ರಮಕ್ಕೆ ಇಡೀ ಚಿತ್ರತಂಡ ಭಾಗವಹಿಸಿ ಅದ್ದೂರಿಯಾಗಿ ಚಿತ್ರದ ಟ್ರೈಲರ್ ಲಾಂಚ್.

Body:ಗರುಡ ಚಿತ್ರ ಸೆಟ್ಟೇರಿ ಬರೋಬ್ಬರಿ ಎರಡೂವರೆ ವರ್ಷಗಳು ಕಳೆದಿದ್ದು ಹಲವಾರು ಅಡಚಣೆಗಳನ್ನು ಮೆಟ್ಟಿನಿಂತು ಚಿತ್ರತಂಡ ಇಂದು ಕೊನೆಗೂ ಚಿತ್ರದ ಟ್ರೈಲರ್ ಲಾಂಚ್ ಮಾಡಿದೆ. ವಿಶೇಷ ಅಂದ್ರೆ ಗರುಡ ಚಿತ್ರದಲ್ಲಿ ಡೈಮಂಡ್ ಸ್ಟಾರ್ ಶ್ರೀನಗರ ಕಿಟ್ಟಿ ಫಸ್ಟ್ ಟೈಮ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಮಿಂಚಿದ್ದು, ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಪಾತ್ರ ರೋಚಕವಾಗಿರುವುದು ಟ್ರೈಲರ್ ನಲ್ಲಿ ಎದ್ದು ಕಾಣಿಸುತ್ತದೆ. ಅಲ್ಲದೆ ನನ್ನ ವೃತ್ತಿ ಜೀವನದಲ್ಲಿ ನಾನು ತುಂಬಾ ಡಿಫರೆಂಟಾಗಿ ಈ ಚಿತ್ರದಲ್ಲಿ ಕಾಣಿಸಿದ್ದೇನೆ. ಅಲ್ಲದೆ ನಾನು ಹೆಚ್ಚಾಗಿ ನೈಜತೆ ಇರುವ ಪಾತ್ರಗಳಲ್ಲಿ ಕಾಣಿಸಿದೆ. ಆದರೆ ಗರುಡ ಚಿತ್ರದಲ್ಲಿ ಪಕ್ಕಾ ಕಮರ್ಷಿಯಲ್ ಪಾತ್ರ ಮಾಡಿದ್ದೇನೆ ಎಂದು ಶ್ರೀನಗರಕಿಟ್ಟಿ ಹೇಳಿದರು. ಅಲ್ಲದೆ ಚಿತ್ರದಲ್ಲಿ ನಾಯಕ ಸಿದ್ಧಾರ್ಥ ಮಹೇಶ್.ನೇವಿ ಆಫೀಸರ್ ಪಾತ್ರದಲ್ಲಿ ಕಳಿಸಿದ್ದು ಅಂಡರ್ವರ್ಲ್ಡ್ ಸುತ್ತ ಸುತ್ತುವ ಕಥೆಯು ಚಿತ್ರದಲ್ಲಿ ಇದೆ ಎಂಬುದು ನಾಯಕ ಸಿದ್ಧಾರ್ಥ ಮಹೇಶ್ ಮಾತು. ಇನ್ನು ಚಿತ್ರದಲ್ಲಿ ಆಶಿಕಾ ರಂಗನಾಥ್ ಹಾಗೂ ನಟಿ ಅಂದ್ರಿತಾ ಅಭಿನಯಿಸಿದ್ದು ಇಬ್ಬರದು ತುಂಬಾ ಪ್ರಮುಖ ಪಾತ್ರವಾಗಿದ್ದು ಗರುಡ ಚಿತ್ರ ತುಂಬಾ ಚೆನ್ನಾಗಿ ಮೂಡಿಬಂದಿದೆ. ಅಲ್ಲದೆ ಗಡ್ಡ ಚಿತ್ರ ನನಗೆ ತುಂಬಾ ವಿಶೇಷವಾದ ಸಿನಿಮಾ ಯಾಕೆಂದರೆ ನನ್ನ ಮದುವೆ ವಿಚಾರವನ್ನು ಗರುಡ ಚಿತ್ರದ ಶೂಟಿಂಗ್ ಸೆಟ್ ನಲ್ಲಿ ನಾನು ಅನೌನ್ಸ್ ಮಾಡಿದೆ. ನನ್ನ ಮದುವೆಗೆ ಒಂದು ವಾರ ಇರುವವರೆಗೂ ನಾನು ಗರುಡ ಚಿತ್ರದ ಶೂಟಿಂಗ್ ನಲ್ಲಿ ಪಾಲ್ಗೊಂಡಿದೆ ಹಾಗಾಗಿ ನನಗೆ ಈ ಚಿತ್ರ ತುಂಬಾ ವಿಶೇಷವಾದ ಚಿತ್ರ ಅಲ್ಲದೆ ಚಿತ್ರದಲ್ಲಿ ನನ್ನ ಪಾತ್ರ ತುಂಬಾ ಕ್ಯೂರಿಯಾಸಿಟಿ ಯಾಗಿದೆ ಎಂದು ತಮ್ಮ ಪಾತ್ರದ ಬಗ್ಗೆ ವಿವರಿಸಿದರು.

Conclusion:ಇನ್ನು ಚಿತ್ರದಲ್ಲಿ ನಟಿಸಿರುವ ಆಶಿಕಾ ರಂಗನಾಥ್ ಮುಗುಳ್ನಗೆ ನಂತರ ಈ ಚಿತ್ರದಲ್ಲಿ ನಾನು ಗರುಡ ಚಿತ್ರಕ್ಕೆ ಸಹಿ ಮಾಡಿದೆ ಚಿತ್ರದಲ್ಲಿ ಕಾಲೇಜು ಹುಡುಗಿಯ ಪಾತ್ರದಲ್ಲಿ ನಾನು ನಟಿಸಿದ್ದು. ನನ್ನ ಪಾತ್ರಕ್ಕೆ ತುಂಬಾ ಪ್ರಾಮುಖ್ಯತೆ ಇದೆ ಎಂದು ಆಶಿಕ ರಂಗನಾಥ್ ಹೇಳಿದರು. ಇನ್ನು ಚಿತ್ರವನ್ನು ಸುಮಾರು ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಕೊರಿಯಾಗ್ರಾಫರ್ ಆಗಿ ಕೆಲಸ ಮಾಡಿರುವ ಧನು ಕುಮಾರ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದು, ಗರುಡ ಚಿತ್ರ ಪಕ್ಕಾ ಕಮರ್ಷಿಯಲ್ ಎಲಿಮೆಂಟ್ಸ್ ಇದ್ದು ಕುಟುಂಬಸಮೇತರಾಗಿ ನೋಡಬಹುದಾದಂತಹ ಸಿನಿಮಾವಾಗಿದೆ. ಅಲ್ಲದೆ ಚಿತ್ರದಲ್ಲಿ ಕಾಮಿಡಿ ಗೂ ಸಾಕಷ್ಟು ಸ್ಪೇಸ್ ಇದೆ ಎಂದು ನಿರ್ದೇಶಕ ಧನು ಕುಮಾರ್ ಹೇಳಿದರು. ಹೊಸಬರ ಸಿನಿಮಾ ವಾದ್ರು ತುಂಬಾ ಬಜೆಟ್ ನಲ್ಲಿ ವಿಚಿತ್ರ ನಿರ್ಮಾಣವಾಗಿದ್ದು ಚಿತ್ರಕ್ಕೆ ನಟ ಸಿದ್ಧಾರ್ಥ್ ಮಹೇಶ್ ಅವರ ತಂದೆ ಬಂಡವಾಳ ಹೂಡಿದ್ದಾರೆ. ಅಲ್ಲದೆ ಚಿತ್ರದಲ್ಲಿ ಬಹು ದೊಡ್ಡ ತಾರಾ ಬಳಗವೇ ಇದು ನಟ ರಂಗಾಯಣ ರಘು, ಆದಿ ಲೋಕೇಶ್, ರಾಜೇಶ್ ನಟರಂಗ, ಕಾಮಿಡಿ ನಟ ಆನಂದ್, ರಮೇಶ್ ಪಂಡಿತ್ ಸೇರಿದಂತೆ ಬಹುತೇಕ ಕಲಾವಿದರು ಚಿತ್ರದಲ್ಲಿ ನಟಿಸಿದ್ದು ಚಿತ್ರಕ್ಕೆ ರಘು ದೀಕ್ಷಿತ್ ಸಂಗೀತ ನೀಡಿರುವುದು ಚಿತ್ರದ ಮತ್ತೊಂದು ಹೈಲೈಟ್ಸ್ ಆಗಿದ್ದು. ಸದ್ಯ ಚಿತ್ರತಂಡ ಗ್ರಾಫಿಕ್ಸ್ ವರ್ಕ್ನಲ್ಲಿ ಬಿಜಿಯಾಗಿದ್ದು ಎಲ್ಲಾ ಅಂದುಕೊಂಡಂತೆ ಆದರೆ ಈ ವರ್ಷದ ಕೊನೆಯಲ್ಲಿ ಬರಲು ಚಿತ್ರತಂಡ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಸತೀಶ ಎಂಬಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.