ಒಬ್ಬ ನಟ ಹೀರೋಯಿಸಂ ಬಿಟ್ಟು, ಸಮಾಜಕ್ಕೆ ಹತ್ತಿರ ಇರುವ ಪಾತ್ರಗಳಲ್ಲಿ ನಟಿಸಿ ಸೈ ಎನ್ನಿಸಿಕೊಂಡು ಸಿನಿಮಾ ಇತಿಹಾಸದಲ್ಲಿ ಉಳಿಯಬೇಕು ಎಂಬುದು ಪ್ರತಿಯೊಬ್ಬರ ನಟನ ಆಸೆ ಆಗಿರುತ್ತದೆ. ಇನ್ನು ಕನ್ನಡ ಚಿತ್ರರಂಗದಲ್ಲಿ ಡಾ ರಾಜ್ಕುಮಾರ್ ಅವರಿಂದ ಹಿಡಿದು, ಕೆಲ ನಟರು ಕುರುಡನ ಪಾತ್ರದಲ್ಲಿ ಸಿಲ್ವರ್ ಸ್ಕ್ರೀನ್ ಮೇಲೆ ರಾರಾಜಿಸಿದ್ದಾರೆ. ಈಗ ಗೋಲ್ಡನ್ ಸ್ಟಾರ್ ಗಣೇಶ್ ಇಂತಹ ಚಾಲೆಂಜಿಂಗ್ ಪಾತ್ರ ಮಾಡುತ್ತಿದ್ದಾರೆ.
![Ganesh plays a blind role for sakath movie](https://etvbharatimages.akamaized.net/etvbharat/prod-images/kn-bng-05-sakath-cinemadhali-adhanada-ganesh-7204735_22032021192806_2203f_1616421486_556.jpg)
ಅಷ್ಟಕ್ಕೂ ಗಣೇಶ್ ಅಂಧನ ಪಾತ್ರಕ್ಕೆ ಜೀವ ತುಂಬಲು ರೆಡಿಯಾಗಿರೋದು 'ಸಖತ್' ಸಿನಿಮಾದಲ್ಲಿ. ಈ ವಿಷಯವನ್ನ ಸ್ವತಃ ಗಣೇಶ್ ತಮ್ಮ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಕಣ್ಣಿಗೆ ಕಪ್ಪು ಕನ್ನಡ ಹಾಕಿಕೊಂಡು ಕಟಕಟೆಯಲ್ಲಿ ಅಂಧನಂತೆ ನಿಂತಿರುವ ಫೋಟೋವನ್ನ ಹಂಚಿಕೊಳ್ಳುವ ಮೂಲಕ, ಸಖತ್ ಚಿತ್ರದಲ್ಲಿ ಗಣೇಶ್ ಯಾವ ರೀತಿ ಪಾತ್ರ ಎಂಬುದರ ಗುಟ್ಟನ್ನ ಬಿಟ್ಟು ಕೊಟ್ಟಿದ್ದಾರೆ. ನಾಯಕನಾಗಿ 15 ವರ್ಷಗಳಿಂದ ನಿಮ್ಮ ನೋಟಗಳಿಗೆ ಸೆರೆಯಾಗಿದ್ದೇನೆ. ಮೊದಲ ಬಾರಿಗೆ ನನ್ನ ನೋಟವನ್ನು ಕಟ್ಟಿಟ್ಟು ಕಾಣಿಸಿಕೊಳ್ಳುತ್ತಿದ್ದೇನೆ. ಮುಚ್ಚಿಟ್ಟ ಕಂಗಳಿಗೆ ಬಿಚ್ಚಿಟ್ಟ ಪ್ರೀತಿಯ ಬೆಳಕಚೆಲ್ಲಿ ಹಾರೈಸಿ ಎಂದು ಗಣೇಶ್ ಬರೆದುಕೊಂಡಿದ್ದಾರೆ.
![Ganesh plays a blind role for sakath movie](https://etvbharatimages.akamaized.net/etvbharat/prod-images/kn-bng-05-sakath-cinemadhali-adhanada-ganesh-7204735_22032021192806_2203f_1616421486_262.jpg)
ನಿರ್ದೇಶಕ ಸಿಂಪಲ್ ಸುನಿ ನಿರ್ದೇಶನದ ಸಖತ್ ಸಿನಿಮಾದಲ್ಲಿ ಗಣೇಶ್ ಈ ರೀತಿಯ ಪಾತ್ರ ಮಾಡುತ್ತಿದ್ದಾರೆ. ಗಣೇಶ್ ಜೊತೆ ನಿಶ್ಚಿಕ್ ನಾಯ್ಡು ಜೋಡಿಯಾಗಿದ್ದು, ಸುಪ್ರೀತ್ ಈ ಸಿನಿಮಾವನ್ನ ನಿರ್ಮಾಣ ಮಾಡುತ್ತಿದ್ದಾರೆ. ಚಮಕ್ ಸಿನಿಮಾ ಬಳಿಕ ಗಣೇಶ್ ಹಾಗೂ ನಿರ್ದೇಶಕ ಸಿಂಪಲ್ ಸುನಿ ಕಾಂಬಿನೇಶನಲ್ಲಿ ಈ ಚಿತ್ರ ಬರ್ತಾ ಇದ್ದು, ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿದೆ.
![Ganesh plays a blind role for sakath movie](https://etvbharatimages.akamaized.net/etvbharat/prod-images/kn-bng-05-sakath-cinemadhali-adhanada-ganesh-7204735_22032021192806_2203f_1616421486_830.jpg)