ಬೆಂಗಳೂರು: ಡೆಡ್ಲಿ ವೈರಸ್ ಕೊರೊನಾದಿಂದ ಇಡೀ ದೇಶವೇ ಲಾಕ್ಡೌನ್ ಆಗಿದೆ. ಅಲ್ಲದೆ ಕೆಲವೊಂದು ಷರತ್ತಿನೊಂದಿಗೆ ಸರ್ಕಾರ ಲಾಕ್ಡೌನ್ ಸಡಿಲಿಸಿದೆ. ಆದರೆ ಸರ್ಕಾರ ಇನ್ನೂ ಸಿನಿಮಾ ಚಿತ್ರೀಕರಣಕ್ಕೆ ಅವಕಾಶ ನೀಡಿಲ್ಲ.ಇದರಿಂದ ಸುಮಾರು 50 ದಿನಗಳಿಂದ ಸಿನಿಕಾರ್ಮಿಕರು ಕೆಲಸ ಇಲ್ಲದೆ ಸಂಕಷ್ಟದಲ್ಲಿದ್ದಾರೆ.
ಕಷ್ಟದಲ್ಲಿರುವ ಪೋಷಕ ಕಲಾವಿದರಿಗೆ ಟಿ. ದಾಸರಹಳ್ಳಿ ಮಾಜಿ ಶಾಸಕ ಮುನಿರಾಜು ಅಗತ್ಯ ದಿನಸಿ ಕಿಟ್ ವಿತರಿಸಿದ್ದಾರೆ. ಫಿಲ್ಮ್ ಚೇಂಬರ್ ಬಳಿ ಇರುವ ಗುರುರಾಜ ಕಲ್ಯಾಣ ಮಂಟಪದಲ್ಲಿ ಇಂದು ಮುನಿರಾಜು ದಿನಸಿ ಕಿಟ್ ಹಂಚಿಕೆ ಮಾಡಿದ್ದಾರೆ. ನಟಿ ತಾರಾ ಅನುರಾಧ ಕೂಡಾ ಸ್ಥಳಕ್ಕೆ ಬಂದು ಕಲಾವಿದರಿಗೆ ಕಿಟ್ ವಿತರಿಸಿದರು. ನಂತರ ಮಾತನಾಡಿದ ಮಾಜಿ ಶಾಸಕ ಮುನಿರಾಜು ಪೋಷಕ ಕಲಾವಿದರ ಸಂಘದ ಅಧ್ಯಕ್ಷ ಡಿಂಗ್ರಿ ನಾಗರಾಜ್ ಅವರ ಮನವಿ ಮೇರೆಗೆ ನನ್ನ ಕೈಲಾದ ಸಹಾಯ ಮಾಡುತ್ತಿದ್ದೇನೆ. ಜನರನ್ನು ರಂಜಿಸುವ ಪೋಷಕ ಕಲಾವಿದರು ಸಂಕಷ್ಟದಲ್ಲಿರುವ ಈ ವೇಳೆ ಎಲ್ಲರೂ ಅವರ ನೆರವಿಗೆ ನಿಲ್ಲಬೇಕು. ಡಿಂಗ್ರಿ ನಾಗರಾಜ್, ಬ್ಯಾಂಕ್ ಜನಾರ್ಧನ್, ಆಶಾರಾಣಿ ಸೇರಿದಂತೆ ಅನೇಕ ಹಿರಿಯ ಕಲಾವಿದರು ಈ ವೇಳೆ ಉಪಸ್ಥಿತರಿದ್ದರು.