ಜಾಗ್ವಾರ್ ಹಾಗೂ ಸೀತಾರಾಮ ಕಲ್ಯಾಣ ಸಿನಿಮಾಗಳ ಮೂಲಕ, ಕನ್ನಡ ಚಿತ್ರರಂಗದಲ್ಲಿ ತನ್ನದೇ ಅಭಿಮಾನಿ ಬಳಗ ಹೊಂದಿರುವ ನಟ ನಿಖಿಲ್ ಕುಮಾರಸ್ವಾಮಿ. ಲಾಕ್‌ಡೌನ್ ಸಮಯದಲ್ಲಿ ಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡ್ತಿದ್ದಾರೆ. ಇದರ ಮಧ್ಯೆ ಪತ್ನಿ ರೇವತಿ ಕಡೆಯಿಂದ ನಿಖಿಲ್ ಕುಮಾರಸ್ವಾಮಿಗೆ ಗುಡ್ ನ್ಯೂಸ್ವೊಂದು ಸಿಕ್ಕಿದೆ.
![revathi pregnant](https://etvbharatimages.akamaized.net/etvbharat/prod-images/kn-bng-03-nikhilge-pathini-revathi-kotta-goodnews-enu-7204735_21062021180702_2106f_1624279022_16.jpg)
ಹೌದು, ನಿಖಿಲ್ ಕುಮಾರಸ್ವಾಮಿ ಮನೆಯಲ್ಲಿ ಇದೀಗ ಡಬ್ಬಲ್ ಸಂಭ್ರಮ ಮನೆ ಮಾಡಿದೆ. ನಿಖಿಲ್ ಪತ್ನಿ ರೇವತಿ ತಮ್ಮ ಹುಟ್ಟುಹಬ್ಬದಂದು ಗುಡ್ ನ್ಯೂಸ್ ಒಂದನ್ನ ನೀಡಿದ್ದಾರೆ. ಯುವರಾಜ ನಿಖಿಲ್ ತಂದೆಯಾಗುತ್ತಿರುವ ಖುಷಿಯಲ್ಲಿದ್ದಾರೆ. ಈ ಸಂಭ್ರಮವನ್ನ ನಿಖಿಲ್ ಕುಮಾರಸ್ವಾಮಿ, ರೇವತಿ ಮದುವೆ ಮೆಹಂದಿ ಸಮಯದಲ್ಲಿ ಸೆರೆ ಹಿಡಿದ ಪೋಟೋವನ್ನ ಹಂಚಿಕೊಳ್ಳುವ ಮೂಲಕ ಹಂಚಿಕೊಂಡಿದ್ದಾರೆ. ಜತೆಗೆ ಹ್ಯಾಪಿ ಬರ್ತಡೇ ಮೈ ಲವ್ ಎಂದು ನಿಖಿಲ್, ಪತ್ನಿಯ ಹುಟ್ಟುಹಬ್ಬಕ್ಕೆ ಶುಭ ಹಾರೈಯಿಸಿದ್ದಾರೆ.
![revathi pregnant](https://etvbharatimages.akamaized.net/etvbharat/prod-images/kn-bng-03-nikhilge-pathini-revathi-kotta-goodnews-enu-7204735_21062021180702_2106f_1624279022_193.png)
ನಿಖಿಲ್ ಕುಮಾರಸ್ವಾಮಿ ಪತ್ನಿ ರೇವತಿ ಐದು ತಿಂಗಳ ಗರ್ಭಿಣಿ ಎಂದು ಹೇಳಲಾಗುತ್ತಿದೆ. ಮೊದಲ ಲಾಕ್‌ಡೌನ್ ಸಂದರ್ಭದಲ್ಲಿ, ಏಪ್ರಿಲ್ 17, 2020ರಂದು ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ಬಿಡದಿ ತೋಟದ ಮನೆಯಲ್ಲಿ ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ರೇವತಿ ಐದು ತಿಂಗಳ ಗರ್ಭಿಣಿಯಾಗಿದ್ದು, ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ತಾತ ಆಗುತ್ತಿದ್ದಾರೆ.
![revathi pregnant](https://etvbharatimages.akamaized.net/etvbharat/prod-images/kn-bng-03-nikhilge-pathini-revathi-kotta-goodnews-enu-7204735_21062021180702_2106f_1624279022_272.jpg)