ಮುಂಬೈ: ಸಲ್ಮಾನ್ ಖಾನ್ ಮತ್ತು ಜಾಕ್ವೆಲಿನ್ ಫರ್ನಾಂಡೀಸ್ ಅಭಿನಯದ 'ತೇರೆ ಬಿನಾ..' ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಜೊತೆಗೆ ಆ ಹಾಡಿನ ಕೊನೆಯಲ್ಲಿ ಸಲ್ಮಾನ್ ಖಾನ್ ಮಗಳಾಗಿ ಬರುವ ಮುದ್ದು ಹುಡುಗಿ ನೆಟಿಜನ್ ಗಮನ ಸೆಳೆದಿದ್ದಾಳೆ.
ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಮುದ್ದಾದ ಕಿಡ್ಡೋ ಯಾರೆಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ವಿಡಿಯೋದ ಕೊನೆಯಲ್ಲಿ ಕಾಣಿಸಿಕೊಂಡಿರುವ ಸಲ್ಮಾನ್ ಅವರ ತೆರೆಯ ಮೇಲಿನ ಮಗಳು ಬೇರೆ ಯಾರೂ ಅಲ್ಲ ಆಕೆ ವಾಲುಶ್ಚಾ ಡಿ ಸೂಸಾ ಅವರ ಕಿರಿಯ ಮಗಳು ಸಿಯೆನ್ನಾ.
- " class="align-text-top noRightClick twitterSection" data="">
ಸಲ್ಮಾನ್ ಖಾನ್ ಅಭಿನಯದ ತೇರೆ ಬಿನಾ ಒಂದು ರೊಮ್ಯಾಂಟಿಕ್ ಹಾಡಾಗಿದ್ದು, ಅದನ್ನು ಅವರ ಪನ್ವೆಲ್ ತೋಟದ ಮನೆಯಲ್ಲಿ ಸಂಪೂರ್ಣವಾಗಿ ಚಿತ್ರೀಕರಿಸಲಾಗಿದೆ.
ಈ ಮ್ಯೂಸಿಕ್ ವಿಡಿಯೊ ಚಿತ್ರೀಕರಣದ ಬಗ್ಗೆ ಮಾತನಾಡಿದ ಸಲ್ಮಾನ್, ಈ ವಿಡಿಯೊವನ್ನು ನಾಲ್ಕು ದಿನಗಳಲ್ಲಿ ಅತಿ ಕಡಿಮೆ ವೆಚ್ಚದಲ್ಲಿ ಚಿತ್ರೀಕರಿಸಲಾಗಿದೆ ಎಂದಿದ್ದಾರೆ.
ಮಂಗಳವಾರ ಬಿಡುಗಡೆಯಾದ ಸಲ್ಮಾನ್-ಜಾಕ್ವೆಲಿನ್ ಅಭಿನಯದ ತೇರೆ ಬಿನಾ ಹಾಡು 22,31,695 ಬಾರಿ ವೀಕ್ಷಣೆಯಾಗಿದೆ.