ಬಹುಮುಖ ಪ್ರತಿಭೆ ಬಿ.ಆರ್. ಕೇಶವ್ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ, ನಿರ್ಮಾಣದ ಜೊತೆಗೆ ತಮ್ಮದೇ ಆದ ಸ್ಟುಡಿಯೋವೊಂದನ್ನು ನಡೆಸುತ್ತಿದ್ದಾರೆ. ಇದೀಗ ಕೇಶವ್ ಫಿಲ್ಮ್ ಶಾಪ್ ಎಂಬ ತಮ್ಮದೇ ಒಟಿಟಿ ಪ್ಲಾಟ್ಫಾರ್ಮ್ ಸ್ಥಾಪನೆ ಮಾಡಿದ್ದಾರೆ.
ಇತ್ತೀಚೆಗೆ ಜನರು ಮನರಂಜನೆಗಾಗಿ ಹೆಚ್ಚಾಗಿ ಒಟಿಟಿ ಪ್ಲಾಟ್ಫಾರ್ಮ್ಗಳ ಮೊರೆ ಹೋಗುತ್ತಿದ್ದಾರೆ. ಕೊರೊನಾದಂತ ಕಷ್ಟದ ದಿನಗಳಲ್ಲಿ ಇದು ಸ್ವಲ್ಪ ಮಟ್ಟಿಗೆ ಪ್ರಯೋಜನವಾಗಿದೆ ಎನ್ನಬಹುದು. ಥಿಯೇಟರ್ಗಳು ಮುಚ್ಚಿರುವ ಕಾರಣ ನಿರ್ಮಾಪಕರು ತಮ್ಮ ಚಿತ್ರಗಳನ್ನು ಒಟಿಟಿ ಮೂಲಕ ಬಿಡುಗಡೆ ಮಾಡಲು ಹೊರಟಿದ್ದಾರೆ. ಈ ಕಾರಣದಿಂದ ಬಿ.ಆರ್.ಕೇಶವ್ ಇದೀಗ ಒಟಿಟಿ ವೇದಿಕೆಯನ್ನು ಸ್ಥಾಪಿಸಲು ಹೊರಟಿದ್ದಾರೆ. ಕೇಶವ್ ಇದುವರೆಗೂ 54 ಸಿನಿಮಾಗಳ ನಿರ್ದೇಶನ ಸುಮಾರು 25 ಸಿನಿಮಾಗಳ ನಿರ್ಮಾಣ ಮಾಡಿದ್ದಾರೆ.
ವರ್ಷಕ್ಕೆ 199 ರೂಪಾಯಿ, ತಿಂಗಳಿಗೆ 79 ಹಾಗೂ ಒಂದು ತಿಂಗಳಿಗೆ 39 ರೂಪಾಯಿ ಹಣ ಪಾವತಿಸಿ ಈ ಫಿಲ್ಮ್ಶಾಪ್ನಲ್ಲಿ ಚಿತ್ರಗಳನ್ನು ನೋಡಬಹುದಾಗಿದೆ. ಕೇವಲ ಸಿನಿಮಾ ಮಾತ್ರವಲ್ಲದೆ ವೆಬ್ ಸೀರೀಸ್, ಕಿರುಚಿತ್ರಗಳು ಸೇರಿದಂತೆ ಇನ್ನಿತರ ಮನರಂಜನಾ ಕಾರ್ಯಕ್ರಮಗಳು ಈ ಪ್ಲಾಟ್ಫಾರ್ಮ್ನಲ್ಲಿ ಲಭ್ಯ ಇದೆ. ಗಣೇಶ ಹಬ್ಬದಂದು ಈ ವೇದಿಕೆಗೆ ಚಾಲನೆ ದೊರೆತಿದ್ದು ಚಿತ್ರರಂಗದ ಗಣ್ಯರು ಕೇಶವ್ ಅವರ ಈ ಹೊಸ ಕಾರ್ಯಕ್ಕೆ ಶುಭ ಕೋರಿದ್ದಾರೆ.