ETV Bharat / sitara

ಸಂದೀಪ್​ ಉನ್ನಿಕೃಷ್ಣನ್​ ಜೀವನಾಧಾರಿತ 'ಮೇಜರ್'​ ಚಿತ್ರ ರಿಲೀಸ್ ಡೇಟ್ ಫಿಕ್ಸ್​!

author img

By

Published : Jan 29, 2021, 10:20 PM IST

ಮೇಜರ್​​ ಸಂದೀಪ್ ಉನ್ನಿಕೃಷ್ಣನ್ ಜೀವನ ಆಧಾರಿತ ಸಿನಿಮಾ ತಯಾರಾಗಿದ್ದು, 'ಮೇಜರ್' ಹೆಸರಿನ ಈ ಚಿತ್ರವನ್ನು ಶಶಿಕಿರಣ್ ತಿಕ್ಕ ನಿರ್ದೇಶಿಸಿದ್ದಾರೆ. ಅದ್ವಿಶೇಷ್ ಸಂದೀಪ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.

Film on Major Sandeep Unnikrishnan
Film on Major Sandeep Unnikrishnan

ಮುಂಬೈ: 26/11 ಮುಂಬೈ ಉಗ್ರರ ದಾಳಿಯಲ್ಲಿ ಹುತಾತ್ಮರಾಗಿರುವ ಮೇಜರ್​ ಸಂದೀಪ್ ಉನ್ನಿಕೃಷ್ಣನ್​ ಜೀವನಾಧಾರಿತ ಮೇಜರ್​ ಚಿತ್ರ ಬಿಡುಗಡೆಗೆ ಇದೀಗ ಮುಹೂರ್ತ ಫಿಕ್ಸ್​ ಆಗಿದೆ.

ಟಾಲಿವುಡ್​ನ ಮಹೇಶ್​ಬಾಬು ಸಹ ನಿರ್ಮಾಪಕರಾಗಿದ್ದು, ಪ್ರಪಂಚದಾದ್ಯಂತ ಜುಲೈ 2ಕ್ಕೆ ಸಿನಿಮಾ ರಿಲೀಸ್​ ಆಗಲಿದೆ. ತೆಲಗು ಹಾಗೂ ಹಿಂದಿ ಭಾಷೆಯಲ್ಲಿ ಶೂಟಿಂಗ್ ಮಾಡಲಾಗಿದ್ದು, ಸಂದೀಪ್ ಉನ್ನಿಕೃಷ್ಣನ್​ ಅವರ ಜೀವನಾಧಾರಿತ ಚಿತ್ರ ಇದಾಗಿದೆ. ಚಿತ್ರ ಬಿಡುಗಡೆ ದಿನಾಂಕದ ಬಗ್ಗೆ ಟಾಲಿವುಡ್ ಪ್ರಿನ್ಸ್​ ಮಹೇಶ್​ ಬಾಬು ತಮ್ಮ ಟ್ವಿಟರ್​ ಅಕೌಂಟ್​ನಲ್ಲಿ ಪೋಸ್ಟ್​ ಶೇರ್ ಮಾಡಿದ್ದಾರೆ.

ಇದೇ ವಿಷಯವಾಗಿ ಮಾತನಾಡಿದ್ದ ಅಡವಿ ಶೇಷ್, ಸಂದೀಪ್​ ಉನ್ನಿಕೃಷ್ಣನ್​ ಅವರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಚಿತ್ರ ತೆರೆ ಮೇಲೆ ತರಲು ನಿರ್ಧರಿಸಲಾಗಿದೆ ಎಂದಿದ್ದರು. ​

'ಮೇಜರ್​​​' ಚಿತ್ರವನ್ನು ಶಶಿ ಕಿರಣ್ ತಿಕ್ಕ ನಿರ್ದೇಶಿಸಿದ್ದು, ಸಂದೀಪ್ ಪಾತ್ರವನ್ನು ಅದ್ವಿಶೇಷ್​​​​​​​ ಮಾಡುತ್ತಿದ್ದಾರೆ. ಇದು ಪ್ಯಾನ್ ಇಂಡಿಯಾ ಸಿನಿಮಾವಾಗಿದೆ. ಡಿಸೆಂಬರ್ 17ರಂದು ಈ ಸಿನಿಮಾದ ಫಸ್ಟ್ ​​​​​ಲುಕ್ ಬಿಡುಗಡೆಯಾಗುತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.