ETV Bharat / sitara

ಸಂಜೆಯೊಳಗೆ ರಾಜ್ಯ ಸರ್ಕಾರ ಒಳ್ಳೆ ಸುದ್ದಿ ಕೊಡಲಿದೆ: ಫಿಲ್ಮ್ ಚೇಂಬರ್ ಅಧ್ಯಕ್ಷ

ಚಿತ್ರಮಂದಿರಗಳಲ್ಲಿ ಶೇ. 50ರಷ್ಟು ಆಸನಗಳಿಗೆ ಅವಕಾಶ ನೀಡಿರುವುದಕ್ಕೆ ಕೆಲವು ನಟರು ಸಾಕಷ್ಟು ಆಕ್ರೊಶ ಹೊರ ಹಾಕಿದ್ದಾರೆ. ಇದರ ಬೆನ್ನೆಲ್ಲೇ ಫಿಲ್ಮ್ ಚೇಂಬರ್ ನಿಯೋಗ ಕುಮಾರ್​ ಬಂಗಾರಪ್ಪನವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ. ಅಷ್ಟೇ ಅಲ್ಲದೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜಯರಾಜ್, ಸಂಜೆಯೊಳಗೆ ಸರ್ಕಾರ ಸಿಹಿ ಸುದ್ದಿ ನೀಡುವ ಭರವಸೆ ಇದೆ ಎಂದರು.

author img

By

Published : Feb 3, 2021, 3:30 PM IST

Updated : Feb 3, 2021, 4:21 PM IST

ಕುಮಾರ್​ ಬಂಗಾರಪ್ಪನವರನ್ನು ಭೇಟಿ ಮಾಡಿದ ಫಿಲ್ಮ್ ಚೇಂಬರ್ ನಿಯೋಗ
Film Chamber delegatiion meets Kumar Bangarappa

ಕೇಂದ್ರ ಸರ್ಕಾರ ಚಿತ್ರಮಂದಿರಗಳಲ್ಲಿ ಶೇ. 100ರಷ್ಟು ಆಸನಗಳಿಗೆ ಅವಕಾಶ ನೀಡಿತ್ತು. ಆದರೆ ರಾಜ್ಯ ಸರ್ಕಾರ ಚಿತ್ರರಂಗದ ನಿರ್ಮಾಪಕರು ಹಾಗೂ ನಟರ ಆಸೆಗೆ ತಣ್ಣೀರು ಎರಚಿತ್ತು. ಈ ಸಂಬಂಧ ನಟ ಧ್ರುವ ಸರ್ಜಾ ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದರು. ಇದಕ್ಕೆ ಚಿತ್ರರಂಗದ ಎಲ್ಲಾ ಸ್ಟಾರ್ ನಟರು ಕೈ ಜೋಡಿಸಿದ್ದಾರೆ.

ಫಿಲ್ಮ್ ಚೇಂಬರ್ ಅಧ್ಯಕ್ಷ ಜಯರಾಜ್

ಇದೀಗ ಈ ವಿಷಯವಾಗಿ ಫಿಲ್ಮ್ ಚೇಂಬರ್ ಅಧ್ಯಕ್ಷ ಜಯರಾಜ್, ಉಪಾಧ್ಯಕ್ಷ ಉಮೇಶ್ ಬಣಕಾರ್, ನಿರ್ಮಾಪಕರಾದ ಸೂರಪ್ಪ ಬಾಬು, ಗಂಗಾಧರ್, ನಿರ್ಮಾಪಕ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್ ನಿಯೋಗ ಶಾಸಕ ಕುಮಾರ್ ಬಂಗಾರಪ್ಪ ಅವರನ್ನು ಭೇಟಿ ಮಾಡಿ, ರಾಜ್ಯ ಸರ್ಕಾರ ಚಿತ್ರಮಂದಿರಗಳಲ್ಲಿ ಶೇ. 100ರಷ್ಟು ಆಸನ ವ್ಯವಸ್ಥೆಗೆ ಅನುಮತಿ ನೀಡಬೇಕೆಂದು ಮನವಿ ಮಾಡಿದೆ.

film-chamber-delegatiion-meets-kumar-bangarappa
ಕುಮಾರ್​ ಬಂಗಾರಪ್ಪನವರಿಗೆ ಮನವಿ ಸಲ್ಲಿಸಿದ ಫಿಲ್ಮ್ ಚೇಂಬರ್ ನಿಯೋಗ

ಈ ಸಂಬಂಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜಯರಾಜ್ ಮಾತನಾಡಿ, ಸಂಜೆ ಹೊತ್ತಿಗೆ ಚಿತ್ರಮಂದಿರಗಳಲ್ಲಿ ಶೇ. 100ರಷ್ಟು ಆಸನಗಳಿಗೆ ಅವಕಾಶ ಸಿಗುತ್ತೆ ಅನ್ನೋ ಆಶಾಭಾವನೆಯಲ್ಲಿ ಇದ್ದೀವಿ. ಹಾಗೆ ಇಂದು ಸಂಜೆ ಸಿಎಂ ಯಡಿಯೂರಪ್ಪನವರನ್ನು ಭೇಟಿ ಮಾಡಿ ಈ ಬಗ್ಗೆ ಅನುಮತಿ ನೀಡುವಂತೆ ಮನವಿ ಮಾಡುತ್ತೇವೆ ಎಂದರು.

ಓದಿ: ಬಸ್​ನಲ್ಲಿ ಫುಲ್ ರಶ್ ಇರತ್ತೆ.. ಚಿತ್ರಮಂದಿರಕ್ಕೆ ಯಾಕೆ ನಿರ್ಬಂಧ...? ಸರ್ಕಾರಕ್ಕೆ ಸ್ಯಾಂಡಲ್​ವುಡ್​ ಪ್ರಶ್ನೆ

ಬಳಿಕ ನಿರ್ಮಾಪಕರ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್ ಮಾತನಾಡಿ, ಸಿನಿಮಾ ಥೆಯೇಟರ್​ಗಳಲ್ಲಿ ಶೇ. 50ರಿಂದ ಶೇ. 100 ಆಸನಗಳ ವ್ಯವಸ್ಥೆಗೆ ಅವಕಾಶ ಕೊಟ್ಟಾಗ ನಮಗೆ ತುಂಬಾ ಖುಷಿ ಆಗಿತ್ತು. ಇನ್ಮುಂದೆ ಹೊಟ್ಟೆ ತುಂಬಾ ಊಟ ಸಿಗುತ್ತೆ ಎಂಬ ಭಾವನೆಯಲ್ಲಿ ಇದ್ವಿ. ಆದರೆ ಊಟ ಕೊಟ್ಟು ಮತ್ತೆ ವಾಪಸ್ ಕಿತ್ತುಕೊಂಡು ಬಿಟ್ಟರು. ಇದರಿಂದ ನೋವಾಯಿತು. ಒಂದು ವರ್ಷ ನಷ್ಟ, ನೋವು ಅನುಭವಿಸಿದ್ದೇವೆ. ಸಂಜೆ ಹೊತ್ತಿಗೆ ಒಳ್ಳೆ ಸುದ್ದಿ ಸಿಗುವ ಭರವಸೆ ಇದೆ ಎಂದರು.

Last Updated : Feb 3, 2021, 4:21 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.