ಹೈದರಾಬಾದ್ : ಅನಾರೋಗ್ಯದ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದ ಟಾಲಿವುಡ್ ನಟ ನರ್ಸಿಂಗ್ ಯಾದವ್ ಹೈದರಾಬಾದ್ನ ಸೋಮಾಜಿಗೂಡದಲ್ಲಿರುವ ಯಶೋಧಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ನರ್ಸಿಂಗ್ ಯಾದವ್ ಅವರಿಗೆ 52 ವರ್ಷ ವಯಸ್ಸಾಗಿದ್ದು, ಮೂತ್ರಪಿಂಡ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಸುಮಾರು ತೆಲುಗು, ತಮಿಳು, ಹಿಂದಿ ಸೇರಿದಂತೆ ಸುಮಾರು 300ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದರು. ವಿಜಯ್ ನಿರ್ಮಲಾ ನಿರ್ದೇಶನದ 'ಹೇಮ ಹೇಮೀಲು' ಅವರ ಮೊದಲ ಚಿತ್ರವಾಗಿದ್ದು, ರಾಮಗೋಪಾಲ್ ವರ್ಮಾ ಚಿತ್ರಗಳಲ್ಲಿ ನಟಿಸ, ಮುನ್ನೆಲೆಗೆ ಬಂದರು.
ಇದನ್ನೂ ಓದಿ: ತೆಲುಗು ನಟ ರಾಮ್ ಚರಣ್ಗೂ ಕೊರೊನಾ ಸೋಂಕು..
ಕ್ಷಣಂ ಕ್ಷಣಂ, ಗಾಯಂ, ಮನಿ ಮನಿ, ಟ್ಯಾಗೋರ್, ಮಾಸ್, ನುವಸ್ತಾವಂಟೆ ನೇನೊದ್ದಂಟಾನಾ ಮುಂತಾದ ಪ್ರಖ್ಯಾತ ಚಿತ್ರಗಳಲ್ಲಿ ನರ್ಸಿಂಗ್ ಯಾದವ್ ಬಣ್ಣ ಹಚ್ಚಿದ್ದರು.
ಇದರ ಜೊತೆಗೆ ಶಂಕರ್ ದಾದಾ ಎಂಬಿಬಿಎಸ್, ಪೋಕಿರಿ, ಮಾಸ್ಟರ್, ಯಮದೊಂಗಾ, ಅನ್ನಾವರಂ, ಜಾನಿ, ಸೈ ಚಿತ್ರಗಳಲ್ಲಿನ ಅಭಿನಯಕ್ಕೆ ಜನಮನ್ನಣೆಗೆ ಪಾತ್ರರಾಗಿದ್ದರು