ETV Bharat / sitara

ಬಿಗ್​ಬಾಸ್​ : ಅರವಿಂದ್ - ಪ್ರಶಾಂತ್ ನಡುವೆ ವಾಗ್ಯುದ್ಧ - kannada bigg boss news

ಗಾರ್ಡನ್ ಏರಿಯಾದಲ್ಲಿ ಟಾಸ್ಕ್‌ ನಡೆಯುತ್ತಿದ್ದರೂ, ಸಂಬರಗಿ ಒಬ್ಬರೇ ಬೆಡ್ ರೂಮ್ ಏರಿಯಾಗೆ ಹೋಗಿ ಕಣ್ಣೀರು ಹಾಕಿದರು. ನಂತರ ಸಮಾಧಾನ ಮಾಡಿಕೊಂಡು ಹೊರಗೆ ಬಂದ ಪ್ರಶಾಂತ್, 'ಕ್ಯಾಪ್ಟನ್ ಮೋಸ ಮಾಡಿದ್ದಾಳೆ... ಮಂಜು ಮೋಸ ಮಾಡಿದಾನೆ..' ಕ್ಯಾಪ್ಟನ್ ಮೋಸ ಎಂದು ಹಲವು ಬಾರಿ ಹೇಳುವ ಮೂಲಕ ಅಸಮಾಧಾನ ಹೊರಹಾಕಿದ್ದರು.

  Fight between arvind and prashanth in BIgg boss kannada

author img

By

Published : Jul 9, 2021, 3:06 AM IST

ನಿನ್ನೆ ಚಕ್ರವರ್ತಿ ಹಾಗೂ ದಿವ್ಯಾ ಉರುಡುಗ ಅವರೊಂದಿಗೆ ಜಗಳ ಮಾಡಿಕೊಂಡಿದ್ದ ಪ್ರಶಾಂತ್ ಸಂಬರಗಿ ಇಂದು ಗೆಳೆಯ ಎಂದು ಕರೆದುಕೊಳ್ಳುತ್ತಿದ್ದ ಕೆ.ಪಿ.ಅರವಿಂದ್ ಜೊತೆಗೆ ವಾಗ್ಯುದ್ಧ ನಡೆಸಿದ್ದಾರೆ.

ಶುಕ್ರವಾರದ ಎಪಿಸೋಡ್​​ನಲ್ಲಿ ದಿವ್ಯ ಉರುಡುಗ ಅವರ ಕ್ಯಾಪ್ಟನ್ಸಿ ಅವಧಿ ಮುಗಿದಿದೆ ಎಂದು ಬಿಗ್ ಬಾಸ್ ಹೇಳುತ್ತಾರೆ. ಆ ಸಂದರ್ಭದಲ್ಲಿ, ಪ್ರಶಾಂತ್ ಅವರು, ಇಲ್ಲಿ ಮೋಸ ನಡೆದಿದೆ ಎಂದು ಅರವಿಂದ್ ಅವರನ್ನು ಗುರಿಯಾಗಿಸಿಕೊಂಡು ಹೇಳುತ್ತಾರೆ. ಆಗ ಅರವಿಂದ್, ನೀವು ಮಾಡಿರುವುದು ಮೋಸ. ಗೆಳೆಯ ಎಂದು ಮಾತನಾಡುತ್ತಾರೆ ಆದರೆ, ಹಿಂದೆ ಈ ರೀತಿ ಮಾತನಾಡುತ್ತಾರೆ ಎಂದು ಸಹ ಸ್ಪರ್ಧಿಗಳೊಂದಿಗೆ ಹೇಳಿಕೊಳ್ಳುತ್ತಾರೆ.

ಆಗ ಪ್ರಶಾಂತ್ ನಿನಗೆ ಉರಿಯುತ್ತಿದೆಯಾ, ತಾಕತ್ ಇರಬೇಕು ಎಂದು ಮತ್ತಷ್ಟು ಜೋರಾಗಿ‌ ಮಾತನಾಡುತ್ತಾರೆ. 'ತಾಕತ್ತನ್ನೆಲ್ಲಾ ಟಾಸ್ಕ್ ನಲ್ಲಿ ಇಟ್ಟುಕೊಳ್ಳಿ, ಎಲ್ಲರ ಹಣೆಬರಹ ಗೊತ್ತು ಎಂದು ಅರವಿಂದ್ ಹೇಳಿದಾಗ, ಗಂಡಸುತನ ಇರಬೇಕು.. ಕೆಪಿ ಬಾರೋ ಮುಟ್ಟು... ಎಂದು ಪ್ರಶಾಂತ್ ಮುಂದಾಗುತ್ತಾರೆ.

ದಿವ್ಯಾ ಉರುಡುಗ ಮೋಸ ಮಾಡಿದ್ದಾಳೆ!

ನಿನ್ನೆ ಕೂಡ ಟಂಕ ಶಾಲಾ ಟಾಸ್ಕ್ ನಲ್ಲಿ ಮಂಜು ಪರವಾಗಿ ಕ್ಯಾಪ್ಟನ್ ದಿವ್ಯಾ ಉರುಡುಗ ತೀರ್ಪು ನೀಡಿದ್ದರು. ಇದು ಕೂಡ ಪ್ರಶಾಂತ್‌ಗೆ ಬೇಸರ ತಂದಿತು. ಗಾರ್ಡನ್ ಏರಿಯಾದಲ್ಲಿ ಟಾಸ್ಕ್‌ ನಡೆಯುತ್ತಿದ್ದರೂ, ಒಬ್ಬರೇ ಬೆಡ್ ರೂಮ್ ಏರಿಯಾಗೆ ಹೋಗಿ ಕಣ್ಣೀರು ಹಾಕಿದರು. ನಂತರ ಸಮಾಧಾನ ಮಾಡಿಕೊಂಡು ಹೊರಗೆ ಬಂದ ಪ್ರಶಾಂತ್, 'ಕ್ಯಾಪ್ಟನ್ ಮೋಸ ಮಾಡಿದ್ದಾಳೆ... ಮಂಜು ಮೋಸ ಮಾಡಿದಾನೆ..' ಕ್ಯಾಪ್ಟನ್ ಮೋಸ ಎಂದು ಹಲವು ಬಾರಿ ಹೇಳುವ ಮೂಲಕ ಅಸಮಾಧಾನ ಹೊರಹಾಕಿದ್ದರು.

ಅದಕ್ಕೂ ಮುನ್ನ ಚಕ್ರವರ್ತಿ ಹಾಗೂ ಪ್ರಶಾಂತ್ ಜಗಳ ಮಾಡಿಕೊಳ್ಳುತ್ತಿದ್ದರು. ಆ ಸಂದರ್ಭದಲ್ಲಿ ತಾಕತ್ತಿದ್ದರೆ ನೀನು ಅರವಿಂದ್ ಹಾಗೂ ದಿವ್ಯಾ ಉರುಡುಗ ಬಗ್ಗೆ ಮಾತನಾಡು ಎಂದು ಪ್ರಶಾಂತ್ ಅವರಿಗೆ ಚಕ್ರವರ್ತಿ ಸವಾಲು ಹಾಕಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.