ETV Bharat / sitara

'ರಾಬರ್ಟ್' ಸಿನಿಮಾ ನೋಡಬೇಕು ಅಂದುಕೊಂಡಿರುವ ಅಭಿಮಾನಿಗಳಿಗೆ ಶಾಕ್​​...! - Darshan starring Roberrt

ಕೊರೊನಾ ಭಯಕ್ಕೆ ಜನರು ಥಿಯೇಟರ್​​​ಗೆ ಬರುವುದು ಅನುಮಾನ. ಅಂತದ್ದರಲ್ಲಿ 'ರಾಬರ್ಟ್' ಚಿತ್ರತಂಡ ಟಿಕೆಟ್ ಬೆಲೆಯನ್ನು ದುಪ್ಪಟ್ಟುಗೊಳಿಸಿರುವುದು ಅಭಿಮಾನಿಗಳಿಗೆ ನಿರಾಸೆ ಉಂಟುಮಾಡಿದೆ. ಮಲ್ಟಿಪ್ಲೆಕ್ಸ್​​​ಗಳಲ್ಲಿ 150 ರೂಪಾಯಿ ಇದ್ದ ಟಿಕೆಟ್ ಬೆಲೆ 300 ರೂಪಾಯಿ ಹಾಗೂ 200 ರೂಪಾಯಿ ಇದ್ದ ಟಿಕೆಟ್ ಬೆಲೆಯನ್ನು 500 ರೂಪಾಯಿಗೆ ಏರಿಸಲಾಗಿದೆ.

Roberrt movie team
'ರಾಬರ್ಟ್'
author img

By

Published : Mar 9, 2021, 5:45 PM IST

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ರಾಬರ್ಟ್' ಸಿನಿಮಾ ಬಿಡುಗಡೆಗೆ ಇನ್ನೆರಡು ದಿನಗಳಷ್ಟೇ ಬಾಕಿ ಇದೆ. ಈಗಾಗಲೇ ಮುಂಗಡ ಟಿಕೆಟ್ ಬುಕ್ಕಿಂಗ್ ಆರಂಭವಾಗಿದ್ದು ಅನೇಕ ಜನರು ಟಿಕೆಟ್ ಬುಕ್ ಮಾಡಿದ್ದಾರೆ. ಆದರೆ ಸಿನಿಮಾ ನೋಡಬೇಕೆಂದುಕೊಂಡಿದ್ದ ಕೆಲವರಿಗೆ ಶಾಕ್ ಆಗಿದೆ. ಇದಕ್ಕೆ ಕಾರಣ ಟಿಕೆಟ್ ದರ.

Roberrt movie team
ಟಿಕೆಟ್ ಬೆಲೆ ಹೆಚ್ಚಿಸಿದ 'ರಾಬರ್ಟ್' ಚಿತ್ರತಂಡ

'ರಾಬರ್ಟ್' ಬಹುನಿರೀಕ್ಷಿತ ಸಿನಿಮಾ ಆಗಿದ್ದು ಸುಮಾರು 1400 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆ ಇದ್ದು ಹೌಸ್​​ಫುಲ್ ಆಗೋದು ಪಕ್ಕಾ ಎನ್ನಲಾಗುತ್ತಿದೆ. ಆದರೆ ಮಲ್ಟಿಪ್ಲೆಕ್ಸ್​​​​​​​​​​ನಲ್ಲಿ 'ರಾಬರ್ಟ್' ಸಿನಿಮಾ ನೋಡಬೇಕು ಅಂದುಕೊಂಡಿರುವ ಅಭಿಮಾನಿಗಳ ಜೇಬಿಗೆ ಕತ್ತರಿ ಬಿಳೋದು ಗ್ಯಾರಂಟಿ. ಮಲ್ಟಿಪ್ಲೆಕ್ಸ್​​​​​​​​ಗಳಲ್ಲಿ ಚಿತ್ರದ ಟಿಕೆಟ್ ಬೆಲೆ ಬರೋಬ್ಬರಿ 300-500 ರೂಪಾಯಿ ಏರಿಕೆ ಆಗಿದೆ. ಸಾಮಾನ್ಯವಾಗಿ ಮಲ್ಟಿಪ್ಲೆಕ್ಸ್ ನಲ್ಲಿ ಕನ್ನಡ ಸಿನಿಮಾಗೆ ಟಿಕೆಟ್ ಬೆಲೆ ಹೆಚ್ಚಿಸಬಾರದು ಎಂಬುದು ಕಾನೂನು ಇದೆ. ಆದರೆ 200 ರೂಪಾಯಿ ಇದ್ದ ಟಿಕೆಟ್ ಬೆಲೆಯನ್ನು 500 ಹಾಗೂ 150 ರೂ ಇದ್ದ ಟಿಕೆಟ್ ಬೆಲೆಯನ್ನು 300 ರೂಪಾಯಿಗಳಿಗೆ ಏರಿಸಲಾಗಿದೆ.ಅಂದರೆ ಈ ಹಿಂದೆ ಇದ್ದ ಟಿಕೆಟ್ ಬೆಲೆಗಿಂತ ಎರಡರಷ್ಟು ಟಿಕೆಟ್ ಬೆಲೆಯನ್ನು 'ರಾಬರ್ಟ್' ಚಿತ್ರತಂಡ ಹೆಚ್ಚಿಸಿದೆ.

ಇದನ್ನೂ ಓದಿ: ಜಮೀನು ವಿವಾದ: ದುದ್ದ ಪೊಲೀಸ್ ಠಾಣೆಗೆ ಆಗಮಿಸಿದ ರಾಕಿ ಬಾಯ್​​​

ಇದು ಮಲ್ಟಿಪ್ಲೆಕ್ಸ್ ಕಥೆಯಾದರೆ ಇನ್ನು ಸಾಮಾನ್ಯ ಜನ ನೋಡುವಂತಹ ಸಿಂಗಲ್ ಸ್ಕ್ರೀನ್​​​​​​​​​​​ಗಳಲ್ಲಿಕೂಡಾ ಇದೇ ಹಣೆಬರಹವಾಗಿದೆ. ಬಾಲ್ಕನಿಗೆ 200, ಸೆಕೆಂಡ್ ಕ್ಲಾಸ್​​​​​​​​​​ಗೆ 150 ರೂಪಾಯಿ ಕೊಡಲೇಬೇಕು.ಲಾಕ್​​ಡೌನ್​​​​​​​ ನಂತರ ಬಿಡುಗಡೆಯಾದ ಯಾವ ಚಿತ್ರದ ಟಿಕೆಟ್ ರೇಟ್ ಕೂಡಾ ಇಷ್ಟು ಹೆಚ್ಚಾಗಿರಲಿಲ್ಲ.'ರಾಬರ್ಟ್' ಚಿತ್ರತಂಡ ಮಾತ್ರ ಟಿಕೆಟ್ ಬೆಲೆಯನ್ನು ಏಕೆ ದುಪ್ಪಟ್ಟು ಏರಿಸಿದೆ...? ಚಿತ್ರತಂಡಕ್ಕೆ ಸಿನಿಮಾ ಮೇಲೆ ನಂಬಿಕೆ ಇಲ್ವಾ...? ಟಿಕೆಟ್ ರೇಟ್ ಹೆಚ್ಚಿಸಿ ಕಡಿಮೆ ದಿನಗಳಲ್ಲಿ ಹಾಕಿದ್ದ ದುಡ್ಡನ್ನು ಹೇಗಾದರೂ ಮಾಡಿ ಪಡೆದುಬಿಡೋಣ ಎಂಬ ಪ್ಲ್ಯಾನ್ ಮಾಡಿದ್ಯಾ ಚಿತ್ರತಂಡ...ಎಂಬೆಲ್ಲಾ ಮಾತುಗಳು ಗಾಂಧಿನಗರಾದ್ಯಂತ ಕೇಳಿಬರುತ್ತಿದೆ. ಈ ಸಮಯದಲ್ಲಿ ಜನರು ಥಿಯೇಟರ್​​ಗೆ ಬರುವುದು ಕಷ್ಟದ ವಿಚಾರ. ಅಂತದ್ದರಲ್ಲಿ ಹೀಗೆ ಟಿಕೆಟ್ ಬೆಲೆ ಹೆಚ್ಚಿಸಿದರೆ ಏನು ಕಥೆ ಎಂಬುದು ಸಿನಿಪ್ರಿಯರ ಪ್ರಶ್ನೆಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.