ನಿರ್ದೇಶಕ ಸೂರಿ ಆ್ಯಕ್ಷನ್ ಕಟ್ ಹೇಳಿರುವ, ಡಾಲಿ ಧನಂಜಯ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ 'ಪಾಪ್ ಕಾರ್ನ್ ಮಂಕಿ ಟೈಗರ್' ಸಿನಿಮಾ ಥಿಯೇಟರ್ಗಳಲ್ಲಿ ಧೂಳಿಬ್ಬಿಸುತ್ತಿದೆ.
ಇಂದು ಮೈಸೂರಿನ ಗಾಯತ್ರಿ ಚಿತ್ರಮಂದಿರದಲ್ಲಿ ಸಿನಿಮಾದ ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು. ಈ ಶೋ ನೋಡಲು ಪಾಪ್ ಕಾರ್ನ್ ಮಂಕಿ ಟೈಗರ್ ತಂಡ ಗಾಯತ್ರಿ ಚಿತ್ರ ಮಂದಿರಕ್ಕೆ ಭೇಟಿ ನೀಡಿತ್ತು. ಈ ವೇಳೆ ಮಂಕಿ ಸೀನನಿಗೆ ಅಭಿಮಾನಿಗಳು ಬಾಳೆಹಣ್ಣು ಗಿಫ್ಟ್ ಕೊಟ್ಟರು.
- View this post on Instagram
Thanks for such an honour #nammamysuru❤️ ಇದು ನೀವಿತ್ತ ದೊಡ್ಡ ಬಹುಮಾನ. #monkeyseena #popcornmonkeytiger
">
ವಿಶೇಷ ಪ್ರದರ್ಶನ ನಡೆಯುತ್ತಿದ್ದ ಚಿತ್ರ ಮಂದಿರದ ಸುತ್ತ ಸಾವಿರಾರು ಅಭಿಮಾನಿಗಳು ಜಮಾಯಿಸಿದ್ದು, ಧನಂಜಯ್ಗೆ ಬಾಳೆಗೊನೆ ಗಿಫ್ಟ್ ಮಾಡಿದ್ದಾರೆ. ಈ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿರುವ ಧನಂಜಯ್, ಇದು ನೀವಿತ್ತ ದೊಡ್ಡ ಬಹುಮಾನ ಎಂದು ಬರೆದುಕೊಂಡಿದ್ದಾರೆ.
ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರದಲ್ಲಿ ಧನಂಜಯ್ಗೆ ಮಂಕಿ ಸೀನ ಎಂಬ ಹೆಸರನ್ನಿಡಲಾಗಿದೆ.