ETV Bharat / sitara

ಉಪ್ಪಿ ಮತ್ತೆ ನಿರ್ದೇಶನ ಮಾಡ್ಬೇಕಂತೆ, ಆ ಇಬ್ಬರೂ ಒಟ್ಟಿಗೆ ನಟಿಸ್ಬೇಕಂತೆ..ಇದು ಫ್ಯಾನ್ಸ್ ಆಸೆ

author img

By

Published : Sep 18, 2020, 2:53 PM IST

ಉಪೇಂದ್ರ ನಿರ್ದೇಶನದಲ್ಲಿ ಸುದೀಪ್ ಹಾಗೂ ದರ್ಶನ್ ಒಟ್ಟಿಗೆ ನಟಿಸಬೇಕು ಎಂದು ಅಭಿಮಾನಿಗಳು ಬೇಡಿಕೆ ಇಟ್ಟಿದ್ದಾರೆ. ಫ್ಯಾನ್ಸ್ ಜೊತೆ ಸೇರಿ 'ದಿಗ್ಗಜರು-2' ಎಂಬ ಹೆಸರಿನ ಪೋಸ್ಟರ್ ಡಿಸೈನ್ ಮಾಡಿದ್ದು ಚಿತ್ರವನ್ನು ಅಭಿಮಾನಿಗಳೇ ನಿರ್ಮಿಸಲಿದ್ದಾರೆ ಎಂದು ಪೋಸ್ಟರ್​​​ನಲ್ಲಿ ಬರೆಯಲಾಗಿದೆ.

Fans Demand to Upendra
ಉಪೇಂದ್ರ

ಇಂದು ಉಪೇಂದ್ರ ಅವರ 51ನೇ ಹುಟ್ಟುಹಬ್ಬ. ರಾಜ್ಯಾದ್ಯಂತ ಅಭಿಮಾನಿಗಳು ಬುದ್ಧಿವಂತನ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಇನ್ನು ಅಭಿಮಾನಿಗಳು ಉಪೇಂದ್ರ ಮತ್ತೆ ಸಿನಿಮಾ ನಿರ್ದೇಶನ ಮಾಡಬೇಕೆಂಬ ಆಸೆಯನ್ನು ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಒಪ್ಪಿಕೊಂಡಿರುವ ಚಿತ್ರಗಳನ್ನು ಮುಗಿಸಿ ನಿರ್ದೇಶನ ಮಾಡುತ್ತೇನೆ ಎಂದು ಉಪ್ಪಿ ಕೂಡಾ ಭರವಸೆ ನೀಡಿದ್ದಾರೆ.

Fans Demand to Upendra
ಅಭಿಮಾನಿಗಳು ಡಿಸೈನ್ ಮಾಡಿದ ಪೋಸ್ಟರ್

ಈಗ ಅಭಿಮಾನಿಗಳು ಉಪೇಂದ್ರ ಅವರಿಗೆ ಮತ್ತೊಂದು ಬೇಡಿಕೆ ಇಟ್ಟಿದ್ದಾರೆ. ಉಪೇಂದ್ರ ಆದಷ್ಟು ಬೇಗ ನಿರ್ದೇಶನ ಮಾಡಬೇಕು. ಅಷ್ಟೇ ಅಲ್ಲ, ಆ ಚಿತ್ರದಲ್ಲಿ ದರ್ಶನ್ ಹಾಗೂ ಸುದೀಪ್ ಒಟ್ಟಿಗೆ ನಟಿಸಬೇಕು ಎನ್ನುವುದು ಅಭಿಮಾನಿಗಳ ಮಹದಾಸೆ. ಅಷ್ಟೇ ಅಲ್ಲ. ಈ ಸಿನಿಮಾಗೆ ಅಭಿಮಾನಿಗಳು ಸೇರಿ 'ದಿಗ್ಗಜರು 2' ಎಂಬ ಹೆಸರಿಟ್ಟಿದ್ದಾರೆ. ಈ ಪೋಸ್ಟರನ್ನು ಅಭಿಮಾನಿಗಳೇ ಡಿಸೈನ್ ಮಾಡಿದ್ದಾರೆ ಚಿತ್ರಕ್ಕೆ ಅಜನೀಶ್ ಲೋಕನಾಥ್​​​​​​​​ ಸಂಗೀತ ಇದ್ದು ಅಭಿಮಾನಿಗಳೇ ಸೇರಿ ಚಿತ್ರವನ್ನು ನಿರ್ಮಿಸುತ್ತಾರಂತೆ.

Fans Demand to Upendra
ದರ್ಶನ್, ಸುದೀಪ್

ಸುದೀಪ್​​​ ಹಾಗೂ ದರ್ಶನ್ ಒಳ್ಳೆಯ ಗೆಳೆಯರು. ಆದರೆ ಇಬ್ಬರ ನಡುವೆ ಸ್ವಲ್ಪ ಮನಸ್ತಾಪವಿದೆ ಅಷ್ಟೇ. ಆದರೆ ಸುದೀಪ್, ದರ್ಶನ್ ಇಬ್ಬರೂ ಉಪೇಂದ್ರ ನಿರ್ದೇಶನದ ಸಿನಿಮಾಗಳೆಂದರೆ ಇಷ್ಟ ಎಂದು ಅನೇಕ ಬಾರಿ ಹೇಳಿಕೊಂಡಿದ್ದಾರೆ. ಆದರೆ ಇಬ್ಬರೂ ಒಟ್ಟಿಗೆ ನಟಿಸುವ ಅಭಿಮಾನಿಗಳ ಈ ಆಸೆ ಈಡೇರಲಿದೆಯಾ ಎಂಬುದು ಮಾತ್ರ ಯಕ್ಷಪ್ರಶ್ನೆ.

Fans Demand to Upendra
ಉಪೇಂದ್ರ, ಸುದೀಪ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.