ETV Bharat / sports

ಚೆನ್ನೈ ಟೆಸ್ಟ್​: ವಿರಾಟ್​ ಕೊಹ್ಲಿ ಬಳಿಕ ಶುಭಮನ್​ ಗಿಲ್​ ಹೆಸರಿಗೆ ಸೇರ್ಪಡೆಯಾಯ್ತು ಈ ಕಳಪೆ ದಾಖಲೆ! - Shubman Gill

ಚೆನ್ನೈನಲ್ಲಿ ನಡೆಯುತ್ತಿರುವ ಬಾಂಗ್ಲಾ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದಲ್ಲಿ ಭಾರತದ ಬ್ಯಾಟರ್​ ಶುಭಮನ್​ ಗಿಲ್​, ತಮ್ಮ ಹೆಸರಿಗೆ ಬೇಡದ ದಾಖಲೆಯೊಂದನ್ನು ಸೇರ್ಪಡೆ ಮಾಡಿಕೊಂಡಿದ್ದಾರೆ. ಯಾವುದು ಆ ದಾಖಲೆ ಎಂದು ಈ ಸುದ್ದಿಯಲ್ಲಿ ತಿಳಿಯಿರಿ.

ಶುಭಮನ್​ ಗಿಲ್​
ಶುಭಮನ್​ ಗಿಲ್​ (IANS)
author img

By ETV Bharat Sports Team

Published : Sep 19, 2024, 5:53 PM IST

ನವದೆಹಲಿ: ಭಾರತ ಮತ್ತು ಬಾಂಗ್ಲಾದೇಶ ನಡುವೆ ಎರಡು ಪಂದ್ಯಗಳ ಟೆಸ್ಟ್ ಸರಣಿ ಇಂದಿನಿಂದ ಆರಂಭಗೊಂಡಿದೆ. ಮೊದಲ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ ಮಾಡಿದ್ದ ಭಾರತದ ಅಗ್ರ ಮೂವರು ಬ್ಯಾಟರ್​ಗಳು ಅಲ್ಪಮೊತ್ತಕೆ ಪೆವಿಲಿಯನ್ ಸೇರಿದ್ದಾರೆ. ಅದರಲ್ಲೂ ಶುಭಮನ್​ ಗಿಲ್​ ಶೂನ್ಯಕ್ಕೆ ನಿರ್ಗಮಿಸುವ ಮೂಲಕ ಅವರ ಹೆಸರಿಗೆ ಬೇಡದ ದಾಖಲೆಯೊಂದು ಸೇರ್ಪಡೆಯಾಗಿದೆ.

ಹೌದು, ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಎಂಟು ಎಸೆತಗಳನ್ನು ಎದುರಿಸಿದ ಗಿಲ್​ ಖಾತೆ ತೆರೆಯದೇ ಪೆವಿಲಿಯನ್​ ಸೇರ್ಪಡೆಗೊಂಡಿದ್ದಾರೆ. ಇದರೊಂದಿಗೆ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ ಹೆಸರಿನಲ್ಲಿದ್ದ ಕಳಪೆ ದಾಖಲೆ ಇದೀಗ ಗಿಲ್​ ಹೆಸರಿಗೂ ಸೇರ್ಪಡೆಯಾಗಿದೆ.

ಯಾವುದು ಆ ದಾಖಲೆ: ಈ ವರ್ಷ ತವರು ನೆಲದಲ್ಲಿ ಗಿಲ್ ಅವರು ಮೂರನೇ ಬಾರಿಗೆ ಶೂನ್ಯ ಸುತ್ತಿದ್ದಾರೆ. ಇದರೊಂದಿಗೆ ಅವರು ಕೊಹ್ಲಿ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ. ವರ್ಷದಲ್ಲಿ 3 ಅಥವಾ ಅದಕ್ಕಿಂತ ಹೆಚ್ಚು ಡಕ್‌ ಔಟ್​ ಆದ ಆರನೇ ಭಾರತೀಯ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಇದಕ್ಕೂ ಮೊದಲು ಮೊಹಿಂದರ್ ಅಮರನಾಥ್ 1983ರಲ್ಲಿ 5 ಬಾರಿ ಶೂನ್ಯ ಸುತ್ತಿ ಅಗ್ರಸ್ಥಾನದಲ್ಲಿದ್ದರೇ, ಮನ್ಸೂರ್ ಅಲಿ ಖಾನ್ ಪಟೌಡಿ (1969), ದಿಲೀಪ್ ವೆಂಗ್‌ಸರ್ಕಾರ್​ (1979), ವಿನೋದ್ ಕಾಂಬ್ಳಿ (1994) ಮತ್ತು ಕೊಹ್ಲಿ (2021) ನಂತರದ ಸ್ಥಾನದಲ್ಲಿದ್ದಾರೆ.

ಈ ವರ್ಷದ ಆರಂಭದಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಆಕರ್ಷಕ ಇನ್ನಿಂಗ್ಸ್​ನಿಂದಾಗಿ ಟೆಸ್ಟ್​ನಲ್ಲಿ ತನ್ನ ಸ್ಥಾನ ಭದ್ರಪಡಿಸಿಕೊಂಡ ಗಿಲ್​ ಬಾಂಗ್ಲಾ ವಿರುದ್ಧದ ಟೆಸ್ಟ್​ ಸರಣಿಗೆ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ, ಈ ಸರಣಿಯ ಮೊದಲ ಪಂದ್ಯದಲ್ಲೇ ವಿಕೆಟ್‌ ಕೀಪರ್ ಲಿಟನ್ ದಾಸ್‌ಗೆ ಕ್ಯಾಚ್ ನೀಡಿ ಶೂನ್ಯಕ್ಕೆ ಪೆವಿಲಿಯನ್‌ ಸೇರಿದ್ದಾರೆ. ಬಲಗೈ ವೇಗದ ಬೌಲರ್ ಹಸನ್ ಮಹಮೂದ್ ಮೊದಲ ಸೆಷನ್‌ನಲ್ಲಿ ಭಾರತದ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಗಿಲ್, ಪಂತ್​ ಅವರ ವಿಕೆಟ್‌ಗಳನ್ನು ಪಡೆಯುವ ಮೂಲಕ ಬಾಂಗ್ಲಾದ ಪಾಲಿಗೆ ಅತ್ಯುತ್ತಮ ಬೌಲರ್​ ಎನಿಸಿಕೊಂಡರು.

ಈ ವರ್ಷ ತವರಿನಲ್ಲಿ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಬಲಗೈ ಬ್ಯಾಟ್ಸ್‌ಮನ್ ಗಿಲ್​ ಎರಡು ಬಾರಿ ಡಕ್‌ ಔಟ್​ ಆಗಿ ಪೆವಿಲಿಯನ್​ ಸೇರಿದ್ದರು. ಮೊದಲು ಹೈದರಾಬಾದ್​ನಲ್ಲಿ ನಡೆದ ಟೆಸ್ಟ್‌ ನಂತರ ರಾಜ್‌ಕೋಟ್​ನಲ್ಲಿ ನಡೆದ ಎರಡನೇ ಟೆಸ್ಟ್​ನಲ್ಲಿ ಶೂನ್ಯ ಸುತ್ತಿದ್ದರು. ಇದರೊಂದಿಗೆ ತವರಿನಲ್ಲಿ ಒಂದು ವರ್ಷದಲ್ಲಿ 3 ಅಥವಾ ಅದಕ್ಕಿಂತ ಹೆಚ್ಚು ಟೆಸ್ಟ್ ಡಕ್‌ಗಳನ್ನು ಗಳಿಸಿದ ಭಾರತದ ಆರನೇ ಬ್ಯಾಟರ್​ ಆಗಿದ್ದಾರೆ.

ಇದನ್ನೂ ಓದಿ: ಈ ದಿನ ಕ್ರಿಕೆಟ್​ ಇತಿಹಾಸದಲ್ಲೇ ಹೊಸ ದಾಖಲೆ ಬರೆದಿದ್ದ 'ಸಿಕ್ಸರ್​ ಕಿಂಗ್​' ಯುವರಾಜ್​ ಸಿಂಗ್​: ಅದೇನೆಂದು ಗೊತ್ತಾ? - YUVRAJ SINGH ON THIS DAY 2007

ETV Bharat Logo

Copyright © 2024 Ushodaya Enterprises Pvt. Ltd., All Rights Reserved.