ETV Bharat / sitara

'ಪೈಲ್ವಾನ್' ಆಡಿಯೋ ಬಿಡುಗಡೆ ಕಾರ್ಯಕ್ರಮ ನೋಡಲು ಮುಗಿಬಿದ್ದ ಕಿಚ್ಚನ ಅಭಿಮಾನಿಗಳು! - ಕಿಚ್ಚನ ಅಭಿಮಾನಿಗಳು

ಆಗಸ್ಟ್​​ 9ರಂದು ನಡೆಯಬೇಕಿದ್ದ ಕಿಚ್ಚ ಸುದೀಪ್ ಅಭಿನಯದ 'ಪೈಲ್ವಾನ್' ಚಿತ್ರದ ಆಡಿಯೋ ನಿನ್ನೆ ಬಿಡುಗಡೆಯಾಗಿದೆ. ಬೆಂಗಳೂರಿನ ಕೋರಮಂಗಲದಲ್ಲಿ ನಡೆದ ಸಮಾರಂಭದಲ್ಲಿ ಪಾಲ್ಗೊಳ್ಳಲು ಕಿಚ್ಚನ ಅಭಿಮಾನಿಗಳು ಮುಗಿಬಿದ್ದಿದ್ದರು. ಕೃಷ್ಣ ನಿರ್ದೇಶನದ ಈ ಸಿನಿಮಾವನ್ನು ಸ್ವಪ್ನ ಕೃಷ್ಣ ನಿರ್ಮಿಸಿದ್ದಾರೆ.

'ಪೈಲ್ವಾನ್' ಆಡಿಯೋ ಬಿಡುಗಡೆ
author img

By

Published : Aug 19, 2019, 9:00 AM IST

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ 'ಪೈಲ್ವಾನ್' ಚಿತ್ರದ ಆಡಿಯೋ ನಿನ್ನೆ ಬಿಡುಗಡೆಯಾಗಿದೆ. ಕೋರಮಂಗಲದ ಇಂಡೋರ್​ ಸ್ಟೇಡಿಯಂನಲ್ಲಿ ನಡೆದ 'ಪೈಲ್ವಾನ್' ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕಿಚ್ಚನ ಅಭಿಮಾನಿಗಳು ಮುಗಿಬಿದ್ದಿದ್ದರು.

'ಪೈಲ್ವಾನ್' ಆಡಿಯೋ ಬಿಡುಗಡೆ ಕಾರ್ಯಕ್ರಮ

ಈ ಹಿಂದೆ ಪೈಲ್ವಾನ್​​​​​ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮವನ್ನು ಆಗಸ್ಟ್​​​ 9ರಂದು ವರಮಹಾಲಕ್ಷ್ಮಿ ಹಬ್ಬದಂದು ಕೋಟೆನಾಡು ಚಿತ್ರದುರ್ಗದಲ್ಲಿ ಏರ್ಪಡಿಸಲಾಗಿತ್ತು. ಆದರೆ ಉತ್ತರ ಕರ್ನಾಟಕದ ಜನರು ನೆರೆಯಿಂದ ಕಷ್ಟ ಪಡುತ್ತಿರುವಾಗ ಈ ಆಡಿಯೋ ಸಮಾರಂಭ ನಡೆಸಲು ನನಗೆ ಮನಸ್ಸು ಒಪ್ಪುತ್ತಿಲ್ಲ ಎಂದು ಸುದೀಪ್ ಕಾರ್ಯಕ್ರಮವನ್ನು ಮುಂದೂಡಿದ್ದರು. ಅದರಂತೆ ನಿನ್ನೆ ಬೆಂಗಳೂರಿನ ಕೋರಮಂಗಲದಲ್ಲಿ ಆಡಿಯೋ ಬಿಡುಗಡೆ ಕಾರ್ಯಕ್ರಮ ಜರುಗಿದೆ.

pailwan audio
ಪೈಲ್ವಾನ್​​ಗಳೊಂದಿಗೆ ಕಿಚ್ಚ

ಇನ್ನು ಖಾಸಗಿ ವಾಹಿನಿಯೊಂದು ಪೈಲ್ವಾನ್ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮ ಪ್ರಸಾರದ ಹಕ್ಕನ್ನು ಪಡೆದಿದ್ದರಿಂದ ಕೆಲವೇ ಕೆಲವು ಪಾಸ್​​​ಗಳನ್ನು ವಿತರಿಸಲಾಗಿತ್ತು. ನೆಚ್ಚಿನ ನಟನ ಸಿನಿಮಾ ಕಾರ್ಯಕ್ರಮಕ್ಕೆ ಪಾಲ್ಗೊಳ್ಳಲು ಅಭಿಮಾನಿಗಳು ಪರದಾಡುತ್ತಿರುವುದು ಕಂಡುಬಂತು. ಪಾಸ್ ದೊರಕದವರು ಗೇಟ್ ಒಳಹೋಗಲು ಹರಸಾಹಸ ಪಡುತ್ತಿದ್ದರು. ಆದರೆ ಸ್ಥಳದಲ್ಲಿ ಪೊಲೀಸ್ ವ್ಯವಸ್ಥೆ ಏರ್ಪಡಿಸಿದ್ದರಿಂದ ಯಾವುದೇ ಅಹಿತಕರ ಘಟನೆ ನಡೆಯದೆ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ. ಸ್ವಪ್ನ ಕೃಷ್ಣ ಈ ಸಿನಿಮಾವನ್ನು ನಿರ್ಮಿಸಿದ್ದು, ಕೃಷ್ಣ ನಿರ್ದೇಶಿಸಿದ್ದಾರೆ. ಸೆಪ್ಟೆಂಬರ್ 12ರಂದು ಸಿನಿಮಾ ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ ಸೇರಿ 5 ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ.

pailwan audio
ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಪುನೀತ್ ರಾಜ್​ಕುಮಾರ್

Intro:ಪೈಲ್ವಾನ್ ಚಿತ್ರದ ಆಡಿಯೋ ಕಾರ್ಯಕ್ರಮಕ್ಕೆ ಮುಗಿಬಿದ್ದ
ಕಿಚ್ಚನ ಅಭಿಮಾನಿಗಳು..!!!

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರದ ವಿಡಿಯೋ ಇಂದು ಬಿಡುಗಡೆಯಾಗಿದೆ,
ಕೋರಮಂಗಲದ ಇಂಡೋರ್ ಸ್ಟೇಡಿಯಂನಲ್ಲಿ ನಡೆದ
ಪೈಲ್ವಾನ್ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ
ಕಿಚ್ಚನ ಅಭಿಮಾನಿಗಳ ಮುಗಿ ಬಿದ್ದಿದ್ದಾರೆ, ಈ ಹಿಂದೆ ಫೈಲ್ವಾನ್ ಚಿತ್ರದ ಆಡಿಯೋ ಚಿತ್ರದುರ್ಗದಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಮಾಡಿತ್ತು. ಆದರೆ ಉತ್ತರ ಕರ್ನಾಟಕದಲ್ಲಿ ನೆರೆ ಹಾವಳಿಯಿಂದಾಗಿ ಅಲ್ಲಿನ ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು.ಅದಕ್ಕಾಗಿ ಸುದೀಪ್ ಅಲ್ಲಿನ ಜನರು ಕಷ್ಟಕ್ಕೆ ಮರುಗಿ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮವನ್ನು ಮುಂದಕ್ಕೆ ಹಾಕಿದರು. ಅಲ್ಲದೆ ಕರ್ನಾಟಕದ ಮಂದಿ ಕಷ್ಟದಲ್ಲಿರುವಾಗ ನಾವು ಸಂತೋಷದಿಂದವೈಭವವಾಗಿಕಾರ್ಯಕ್ರಮನಡೆಸುವುದು ಸರಿಯಲ್ಲ ಎಂದುಕಿಚ್ಚಸುದೀಪ್ಅವರಅಭಿಮಾನಿಗಳಲ್ಲಿ
ಮನವಿ ಮಾಡಿದರುBody:ಅದರೆ ಸೆಪ್ಟೆಂಬರ್ 12ಕ್ಕೆ ಪೈಲ್ವಾನ್ ಚಿತ್ರ ಬಿಡುಗಡೆ ಆಗುತ್ತಿರುವ ಕಾರಣ ಅನಿವಾರ್ಯವಾಗಿ ಇಂದು ಬೆಂಗಳೂರಿನಲ್ಲಿ ಚಿತ್ರದ ಆಡಿಯೋ ವನ್ನು ಚಿತ್ರತಂಡ ಬಿಡುಗಡೆ ಮಾಡಿದ್ದಾರೆ, ಇನ್ನು ಖಾಸಗಿ ವಾಹಿನಿ ಪೈಲ್ವಾನ್
ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮ ಹಕ್ಕನ್ನು
ಪಡೆದಿದ್ದು ಕಾರ್ಯಕ್ರಮಕ್ಕೆ ಲಿಮಿಟ್ ಆಗಿ ಪಾಸ್ ಗಳನ್ನು
ವಿತರಿಸಿದರು, ಇನ್ನು ನೆಚ್ಚಿನ ನಟನ ಅದ್ದೂರಿ ಚಿತ್ರದ
ಆಡಿಯೋ ಕಾರ್ಯಕ್ರಮವನ್ನು ಕಣ್ಣುಂಬಿಕೊಳ್ಳಲು ಕಿಚ್ಚನ ಅಭಿಮಾನಿಗಳು ಮುಗಿಬಿದ್ದಿದರು, ಸ್ಥಳದಲ್ಲಿ ಪೊಲೀಸರು ಬೀಡು ಬಿಟ್ಟಿದ್ದರಿಂದ ಯಾವುದೇ ಅಹಿತಕರ ಘಟನೆಗಳು ನಡೆದ ಹಾಗೆ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ.ಇನ್ನು ಹೆಬ್ಬುಲಿ ಕೃಷ್ಣನಿರ್ದೇಶನ ಮಾಡಿ ನಿರ್ಮಾಣ ಮಾಡಿರುವ ಪೈಲ್ವಾನ್ ಚಿತ್ರ ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು ಸೆಪ್ಟೆಂಬರ್ 12 ರಂದು ವಿಶ್ವದಾದ್ಯಂತ ಕನ್ನಡ ತಮಿಳು ತೆಲುಗು ಹಿಂದಿ ಹಾಗೂ ಮಲಯಾಳಂ ಸೇರಿದಂತೆ ಐದು ಭಾಷೆಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ.

ಸತೀಶ್ ಎಂಬಿConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.