ETV Bharat / sitara

'ಅಮರ್' ರಿಲೀಸ್​​​​​ಗೂ ಮುನ್ನವೇ ಶುರುವಾಯ್ತು ಜ್ಯೂ. ಜಲೀಲನ ಹವಾ

author img

By

Published : May 19, 2019, 7:42 PM IST

ಮೇ 31 ರಂದು ಅಭಿಷೇಕ್ ಅಂಬರೀಶ್ ನಟನೆಯ 'ಅಮರ್​​​' ಸಿನಿಮಾ ಬಿಡುಗಡೆಯಾಗುತ್ತಿದೆ. ಈ ಚಿತ್ರ ಬಿಡುಗಡೆಗೂ ಮುನ್ನವೇ ಸ್ಯಾಂಡಲ್​​ವುಡ್​​​ನಲ್ಲಿ ಸಂಭ್ರಮ ಜೋರಾಗಿದೆ. ಸಿನಿಮಾವನ್ನು ಅಭಿಮಾನಿಗಳು ಗ್ಯ್ರಾಂಡ್ ಆಗಿ ಸ್ವಾಗತಿಸುತ್ತಿದ್ದಾರೆ.

'ಅಮರ್'

ರೆಬಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ನಟಿಸಿರುವ ಮೊದಲ ಸಿನಿಮಾ 'ಅಮರ್​​' ಇದೇ ತಿಂಗಳ 31 ರಂದು ಬಿಡುಗಡೆಯಾಗುತ್ತಿದೆ. ಚಿತ್ರ ಬಿಡುಗಡೆಗೂ ಮುನ್ನವೇ ಗಾಂಧಿನಗರದಲ್ಲಿ ಸಂಭ್ರಮ ಜೋರಾಗಿದೆ.

ಪೋಸ್ಟರ್ ಮುಂದೆ ಅಭಿಮಾನಿಗಳ ಸಂಭ್ರಮ

'ಅಮರ್​' ಬಿಡುಗಡೆಗೆ ಇನ್ನೂ ಎರಡು ವಾರ ಬಾಕಿ ಇರುವಾಗಲೇ ನರ್ತಕಿ ಥಿಯೇಟರ್​ ಮುಂದೆ ಅಭಿಷೇಕ್ ಅಂಬರೀಶ್ ಕಟೌಟ್ ತಲೆಯತ್ತಿದೆ. ಅಭಿಮಾನಿಗಳು ಸುಮಾರು 30-50 ಅಡಿ ಕಟೌಟ್​​​​ ಸಿದ್ಧಗೊಳಿಸಿ ಸಂಭ್ರಮಿಸುತ್ತಿದ್ದಾರೆ. ದೊಡ್ಡ ದೊಡ್ಡ ಪೋಸ್ಟರ್​​​​​​​​​​​​​ಗಳಲ್ಲಿ ಅಭಿಷೇಕ್ ವಿವಿಧ ಭಂಗಿಯಲ್ಲಿ ನಿಂತಿರುವ ಫೋಟೊಗಳೊಂದಿಗೆ ಅಂಬರೀಶ್, ಸುಮಲತಾ ಅಂಬರೀಶ್​​​, ದರ್ಶನ್, ಯಶ್ ಫೋಟೊಗಳನ್ನು ಸೇರಿಸಿ ಅದಕ್ಕೆ ಹೂವು ಹಾಕಿ, ಹಾಲಿನ ಅಭಿಷೇಕ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಆರತಿ ಎತ್ತಿ ಸಂಭ್ರಮಿಸಿದ್ದಾರೆ.

ಒಟ್ಟಿನಲ್ಲಿ 'ಅಮರ್​' ಚಿತ್ರವನ್ನು ಅಭಿಮಾನಿಗಳು ಗ್ರ್ಯಾಂಡ್ ಆಗಿ ವೆಲ್​​​ಕಮ್ ಮಾಡುತ್ತಿದ್ದಾರೆ. ಹೀಗಾಗಿ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಇನ್ನು ಮೇ 29 ಕ್ಕೆ ರೆಬಲ್ ಸ್ಟಾರ್ ಅಂಬರೀಶ್ ಹುಟ್ಟುಹಬ್ಬವಾಗಿದ್ದು 'ಅಮರ್​​' ಸಿನಿಮಾ ಅವರ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ಎಂದೇ ಹೇಳಬಹುದು. ಚಿತ್ರವನ್ನು ಸಂದೇಶ್ ನಾಗರಾಜ್ ನಿರ್ಮಿಸಿದ್ದರೆ, ನಾಗಶೇಖರ್ ನಿರ್ದೇಶಿಸಿದ್ದಾರೆ.

Intro:ಅಮರ್ ಚಿತ್ರದ ರಿಲೀಸ್ ಗೂ ಮುನ್ನವೇ ಸ್ಯಾಂಡಲ್ ವುಡ್ ನಲ್ಲಿ ಶುರುವಾಯ್ತು ಜೂನಿಯರ್ ಜಲೀಲಾನ ಹವಾ. !!!!!!!!!

ಸ್ಯಾಂಡಲ್ ವುಡ್ ನಲ್ಲಿ ಶುರುವಾಯ್ತು ಜೂನಿಯರ್ ಜಲೀಲಾನ ಹವಾ. ಅಮರ್ ಚಿತ್ರ ರಿಲೀಸ್ ಗೆ ಇನ್ನೂ ಎರಡು ವಾರ ಇರುವ ಮುನ್ನವೇ ನರ್ತಕಿ ಥಿಯೇಟರ್ ನ ಮುಂದೆ ತಲೆ ಎತ್ತಿದ್ದ ಅಭಿಷೇಕ್ ಅಂಬರೀಶ್ ಕಟೌಟ್ .ಅಮರ್ ಚಿತ್ರಕ್ಕಾಗಿ ಅಂಬಿ ಅಭಿಮಾನಿಗಳು ಸುಮಾರು 30 ಹಾಗೂ 50 ಅಡಿ ಇರೋ ಅಭಿಷೇಕ್ ಕಟೌಟ್ ಹಾಕಿ ಸಂಭ್ರಮಸಿದ್ದಾರೆ. ಬೆಂಗಳೂರಿನ ನರ್ತಕಿ ಥೇಟರ್ ಮುಂದೆ ಕಟೌಟ್ ನಿಲ್ಲಿಸಿ ಪಟಾಕಿ ಹೊಡೆದು ಅಂಬಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ.ಇದೇ ತಿಂಗಳ ೩೧ ಕ್ಕೆ ಅಮರ್ ಚಿತ್ರ ರಾಜ್ಯಾದ್ಯಂತ ತೆರೆಕಾಣ್ತಿದ್ದು.ಅಮರ್ ಚಿತ್ರವನ್ನು ಗ್ರಾಂಡ್ ಆಗಿ ವೆಲ್ ಕಮ್ ಮಾಡಲು ಅಂಬರೀಶ್ ಅಭಿಮಾನಿಗಳು ಭರ್ಜರಿ ತಯಾರಿಮಾಡಿಕೋಳ್ತಿದ್ದಾರೆ.ಇನ್ನೂ ಅಮರ್ ಚಿತ್ರವೂ ಅಭಿಷೇಕ್ ಅಂಬರೀಶ್ ಅವರ ಮೊದಲ ಚಿತ್ರವಾಗಿದ್ದು ಚಿತ್ರದ ಮೇಲೆ ಅಂಬಿ ಅಭಿಮಾನಿಗಳಲ್ಲಿ ಸಖತ್ ಕ್ಯೂರಿಯಾಸಿಟಿ ಕ್ರಿಯೇಟ್ ಮಾಡಿದೆ.Body:ಮೇ ೨೯ ಕ್ಕೆ ಅಂಬರೀಶ್ ಅವರ ಹುಟ್ಟು ಹಬ್ಬ ಇದ್ದು ಅಮರ್ ಚಿತ್ರವು ಅಂಬಿ‌ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ಅಂತಲೇ ಹೇಳಬಹುದು. ಅಮರ್ ಚಿತ್ರ ರಿಲೀಸ್ ಗೂ ಮುನ್ನವೇ ಅಭಿಷೇಕ್ ಗಾಂಧಿನಗರದಲ್ಲಿ ಸಖತ್ ಸೌಂಡ್ ಮಾಡ್ತಿದ್ದು. ಅಭಿ ಅಪ್ಪನ ಹಾದಿಯಲ್ಲೇ ಸಾಗುವ ಮುನ್ಸೂಚನೇ ಕೊಟ್ಟಿದ್ದಾರೆ ಎನ್ನುವುದು ಸಿನಿ ಪಂಡಿತರ ಮಾತು..

ಸತೀಶ ಎಂಬಿ
Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.