ETV Bharat / sitara

ದರ್ಶನ್ ಶೂಟಿಂಗ್​​​ಗೆ ಹೋಗೋದು ಯಾವಾಗ...ಅಭಿಮಾನಿಗಳನ್ನು ಕಾಡುತ್ತಿರುವ ಪ್ರಶ್ನೆ ಇದು - Darshan movie shooting

ಮಾರ್ಚ್ 11 ರಂದು ದರ್ಶನ್ ಅಭಿನಯದ 'ರಾಬರ್ಟ್' ಬಿಡುಗಡೆಯಾಗುತ್ತಿದ್ದು ಈ ಚಿತ್ರದ ನಂತರ ದರ್ಶನ್ ಹೊಸ ಸಿನಿಮಾ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗುತ್ತಿದೆ. ಆದರೆ ದರ್ಶನ್ ಹೊಸ ಸಿನಿಮಾ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರಾ ಅಥವಾ ಬಾಕಿ ಇರುವ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರಾ ಎಂಬುದನ್ನು ಕಾದು ನೋಡಬೇಕಿದೆ.

Darshan
ದರ್ಶನ್
author img

By

Published : Feb 17, 2021, 12:41 PM IST

ಲಾಕ್​ಡೌನ್ ತೆರವುಗೊಂಡು ಚಿತ್ರೀಕರಣಕ್ಕೆ ಅವಕಾಶ ನೀಡಿದ ನಂತರ ಬಹುತೇಕ ಎಲ್ಲಾ ನಟರು ಬಾಕಿ ಇರುವ ಚಿತ್ರೀಕರಣದಲ್ಲಿ ಭಾಗವಹಿಸುತ್ತಿದ್ದಾರೆ. ಮತ್ತೆ ಕೆಲವರು ಹೊಸ ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ. ಆದರೆ ದರ್ಶನ್ ಮಾತ್ರ ತಮ್ಮದೇ ಪ್ರಪಂಚದಲ್ಲಿ ಜಾಲಿ ಮಾಡುತ್ತಿದ್ದು ಬಾಕಿ ಇರುವ ಸಿನಿಮಾ ಚಿತ್ರೀಕರಣದಲ್ಲಿ ಅವರು ಭಾಗವಹಿಸುವುದು ಯಾವಾಗ ಎಂಬ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದೆ.

ಅಭಿಮಾನಿಗಳನ್ನು ಕಾಡುತ್ತಿರುವ ಪ್ರಶ್ನೆಗೆ ಕೊನೆಗೂ ಉತ್ತರ ದೊರೆತಿದೆ. ಏಪ್ರಿಲ್‍ನಿಂದ ದರ್ಶನ್ ಮತ್ತೆ ಚಿತ್ರೀಕರಣದಲ್ಲಿ ಭಾಗವಹಿಸುತ್ತಿದ್ದಾರಂತೆ. ಹಾಗಂತ ಅವರೇ ಹೇಳಿಕೊಂಡಿದ್ದಾರೆ. ದರ್ಶನ್ ಅಭಿನಯದ 'ರಾಬರ್ಟ್' ಚಿತ್ರವು ಮಾರ್ಚ್ 11ರಂದು ಬಿಡುಗಡೆಯಾಗುತ್ತಿದೆ. ಆ ಸಿನಿಮಾ ಬಿಡುಗಡೆ ನಂತರ ದರ್ಶನ್ ಮತ್ತೆ ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳಲಿದ್ದಾರಂತೆ. ಆದರೆ, ಯಾವ ಚಿತ್ರದಲ್ಲಿ ದರ್ಶನ್ ನಟಿಸುತ್ತಿದ್ದಾರೆ ಎಂಬ ಪ್ರಶ್ನೆಗೆ ಮಾತ್ರ ಉತ್ತರ ದೊರೆತಿಲ್ಲ. ಲಾಕ್‍ಡೌನ್‍ಗೂ ಮುನ್ನ 'ರಾಜವೀರ ಮದಕರಿನಾಯಕ' ಚಿತ್ರದಲ್ಲಿ ದರ್ಶನ್ ನಟಿಸುತ್ತಿದ್ದರು. ಈಗ ಅದೇ ಸಿನಿಮಾ ಮುಂದುವರೆಯಲಿದೆಯಾ..? ಅಥವಾ ಬೇರೆ ಹೊಸ ಚಿತ್ರವನ್ನು ಒಪ್ಪಿಕೊಳ್ಳುತ್ತಾರಾ ಎಂಬ ಕುತೂಹಲ ಎಲ್ಲರಲ್ಲೂ ಇದೆ. ಏಕೆಂದರೆ, 'ರಾಜವೀರ ಮದಕರಿನಾಯಕ' ಚಿತ್ರವನ್ನು ಮುಂದುವರೆಸಬೇಕೋ ಅಥವಾ ಬೇಡವೋ ಎಂಬ ಯೋಚನೆ ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಅವರನ್ನು ಕಾಡುತ್ತಿದೆಯಂತೆ.

ಇದನ್ನೂ ಓದಿ: ಟಾಪ್​​ಲೆಸ್​​ ಮಧ್ಯೆ ಗಣೇಶ​​: ನೆಟ್ಟಿಗರಿಗೆ ಆಹಾರವಾದ ರಿಹನ್ನಾ

ಚಿತ್ರದ ಬಜೆಟ್ ಹೆಚ್ಚಾಗಿದ್ದು ಈ ಸಂದರ್ಭದಲ್ಲಿ ಅಷ್ಟೊಂದು ಹಣ ಹೂಡಿಕೆ ಮಾಡಿದರೆ ಅದನ್ನು ವಾಪಸ್​​​​​​​​​​​​​​​ ಪಡೆಯುವುದು ಹೇಗೆ ಎಂಬುದು ರಾಕ್‍ಲೈನ್ ವೆಂಕಟೇಶ್ ಯೋಚಿಸುತ್ತಿದ್ದಾರೆ ಎನ್ನಲಾಗಿದೆ. ಹಾಗಾಗಿ ಅವರು ಆ ಚಿತ್ರವನ್ನು ಮುಂದುವರೆಸುತ್ತಾರೋ ಅಥವಾ ಅದೇ ಕಾಲ್‍ಶೀಟ್‍ನಲ್ಲಿ ಬೇರೆ ಇನ್ನೊಂದು ಚಿತ್ರ ಪ್ರಾರಂಭಿಸುತ್ತಾರೋ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಶೈಲಜಾ ನಾಗ್ ಮತ್ತು ಮಿಲನ ಸಿನಿಮಾ ನಿರ್ದೇಶಕ ಪ್ರಕಾಶ್​​​ಗೆ ಕೂಡಾ ದರ್ಶನ್ ಕಾಲ್‍ಶೀಟ್ ನೀಡಿದ್ದು, ಅವರೇನಾದರೂ ದರ್ಶನ್ ಅಭಿನಯದಲ್ಲಿ ಇನ್ನೊಂದು ಹೊಸ ಚಿತ್ರ ಆರಂಭಿಸಲಿದ್ದಾರಾ ಎಂದು ಇನ್ನಷ್ಟೇ ಕಾದು ನೋಡಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.