ನಟ, ನಟಿಯರು ಅಂದ್ರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಪ್ರೀತಿ. ಅದ್ರಲ್ಲು ಬಾಲಿವುಡ್ ನಟಿಯರು ಅಂದ್ರೆ ಕೇಳ್ಬೇಕಾ? ಅವರನ್ನು ಕಂಡ ಕ್ಷಣ ಅಭಿಮಾನಿಗಳು ಸೆಲ್ಫಿಗೆ ಮುಗಿ ಬೀಳುತ್ತಾರೆ. ಇನ್ನು ತಾರೆಯರು ಕೂಡ ಅಭಿಮಾನಿಗಳ ಆಸೆಯಂತೆ ಅವರ ಸೆಲ್ಫಿಗೆ ಪೋಸ್ ಕೊಟ್ಟು ಅಭಿಮಾನಿಗಳ ಆಸೆಯನ್ನು ತಣಿಸುತ್ತಾರೆ. ಆದ್ರೆ ಇಲ್ಲೊಂದು ಅವಾಂತರ ನಡೆದಿದೆ.
ಹೌದು ಬಾಲಿವುಡ್ನ ಹಾಟ್ ಬೆಡಗಿ ಸಾರಾ ಅಲಿಖಾನ್ ಅಭಿಮಾನಿ ಬಳಗ ತುಂಬಾ ದೊಡ್ಡದಿದೆ. ಎಲ್ಲಿಗೋದರೂ ಸಾರಾ ಫ್ಯಾನ್ಸ್ ಶೇಕ್ ಹ್ಯಾಂಡ್ ಮಾಡೋದಕ್ಕೆ, ಮಾತನಾಡಿದೋದಕ್ಕೆ ಬರುತ್ತಾರೆ. ಹೀಗೆ ಜಿಮ್ ಮುಗಿಸಿ ಬಂದ ಸಾರಾ ಅಲಿಖಾನ್ ಕೈಗೆ ಒಬ್ಬ ಅಭಿಮಾನಿ ಕಿಸ್ ಮಾಡಿ ಅವಾಂತರ ಎಸಗಿದ್ದಾನೆ.
- " class="align-text-top noRightClick twitterSection" data="
">
ಹೌದು ಆಗತಾನೇ ಜಿಮ್ ಮುಗಿಸಿಕೊಂಡು ಕಾರು ಹತ್ತುವಾಗ ಬಂದ ಅಭಿಮಾನಿಗಳನ್ನು ಮಾತನಾಡಿಸುತ್ತಿದ್ದ ವೇಳೆ, ಕೆಲವರು ಸಾರಾ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಖುಷಿ ಪಟ್ರೆ, ಅಲ್ಲೆ ಇದ್ದ ಅಭಿಮಾನಿಯೊಬ್ಬ ಶೇಕ್ ಹ್ಯಾಂಡ್ ಮಾಡಲು ಹೋಗಿ ನಟಿ ಸಾರಾ ಅಲಿಖಾನ್ ಕೈಗೆ ಕಿಸ್ ಕೊಟ್ಟಿದ್ದಾನೆ. ತಕ್ಷಣ ಆಶ್ಚರ್ಯ ಚಕಿತರಾದ ಸಾರಾ ಅವನನ್ನೇ ನೋಡುತ್ತ ನಿಲ್ಲುತ್ತಾರೆ. ನಂತ್ರ ಅಲ್ಲೆ ಇದ್ದ ಬಾಡಿ ಗಾರ್ಡ್ಗಳು ಆ ಅಭಿಮಾನಿ ಆಸಾಮಿಯನ್ನು ಹೊರಕ್ಕೆ ಕಳುಹಿಸುತ್ತಾರೆ.
ಸಾರಾ ಅಲಿಖಾನ್ಗೆ ಅಭಿಮಾನಿ ಕಿಸ್ಮಾಡಿದ ವಿಡಿಯೋವನ್ನು ಫೋಟೋಗ್ರಾಫರ್ ವೈರಲ್ ಬಯಾನಿ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡುದ್ದು ಇದೀಗ ವೈರಲ್ ಆಗುತ್ತಿದೆ.