ETV Bharat / sitara

ತಯಾರಾಗ್ತಿದೆ ಸೌಂದರ್ಯ ಬಯೋಪಿಕ್​​​...ಖ್ಯಾತ ನಟಿಯ ಪಾತ್ರ ಮಾಡ್ತಿರೋದು ಇವರೇ..! - Sai Pallavi as Soundarya

'ಗಂಧರ್ವ' ಚಿತ್ರದ ಮೂಲಕ ಕರಿಯರ್ ಆರಂಭಿಸಿ ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಸಿನಿಮಾಗಳಲ್ಲಿ ನಟಿಸಿ ದೊಡ್ಡ ಹೆಸರು ಮಾಡಿದ ಸೌಂದರ್ಯ ಬಯೋಪಿಕ್ ತಯಾರಾಗುತ್ತಿದೆ. ಸೌಂದರ್ಯ ಪಾತ್ರವನ್ನು ಖ್ಯಾತ ನಟಿ ಸಾಯಿ ಪಲ್ಲವಿ ಮಾಡುತ್ತಿದ್ದಾರೆ ಎನ್ನಲಾಗಿದೆ.

Soundarya Biopic
ಸೌಂದರ್ಯ ಬಯೋಪಿಕ್
author img

By

Published : Oct 13, 2020, 7:46 AM IST

Updated : Oct 13, 2020, 11:43 AM IST

ಹಿರಿಯ ನಟಿ ಸಾವಿತ್ರಿ, ತಮಿಳುನಾಡು ಮಾಜಿ ಸಿಎಂ ಜಯಲಲಿತ, ಕಪಿಲ್ ದೇವ್, ಮಹೇಂದ್ರಸಿಂಗ್ ಧೋನಿ, ಎನ್​​ಟಿಆರ್​...ಹೀಗೆ ಖ್ಯಾತನಾಮರ ಬಯೋಪಿಕ್ ಸಿನಿಮಾಗಳಾಗಿ ತೆರೆ ಮೇಲೆ ಬಂದಿದೆ. ಇದೀಗ ದಕ್ಷಿಣ ಭಾರತದ ಖ್ಯಾತ ನಟಿಯಾಗಿ ಮಿಂಚಿದ ಸೌಂದರ್ಯ ಜೀವನ ಸಿನಿಮಾವಾಗಿ ತೆರೆ ಮೇಲೆ ಬರುತ್ತಿದೆ.

Soundarya Biopic
ಸಾಯಿ ಪಲ್ಲವಿ

ಕರ್ನಾಟಕದ ಮುಳಬಾಗಿಲಿನ ಪತ್ರಕರ್ತ ಸತ್ಯನಾರಾಯಣ ಅವರ ಪುತ್ರಿ ಸೌಂದರ್ಯ 'ಗಂಧರ್ವ' ಕನ್ನಡ ಚಿತ್ರದಲ್ಲಿ ಶಶಿಕುಮಾರ್ ತಂಗಿ ಪಾತ್ರದಲ್ಲಿ ನಟಿಸುವ ಮೂಲಕ ಚಿತ್ರರಂಗಕ್ಕೆ ಬಂದು ನಂತರ ದಕ್ಷಿಣ ಭಾರತದಲ್ಲಿ ದೊಡ್ಡ ನಾಯಕಿ ನಟಿಯಾಗಿ ಮಿಂಚಿದವರು. ಅಮಿತಾಬ್ ಬಚ್ಚನ್​​​, ರಜನಿಕಾಂತ್, ಕಮಲ್ ಹಾಸನ್, ವಿಜಯಕಾಂತ್, ಚಿರಂಜೀವಿ, ವಿಕ್ಟರಿ ವೆಂಕಟೇಶ್, ನಾಗಾರ್ಜುನ, ಸಾಯಿಕುಮಾರ್​​​​, ರವಿಚಂದ್ರನ್ ಸೇರಿ ಬಹುತೇಕ ಎಲ್ಲಾ ನಟರೊಂದಿಗೆ ನಟಿಸಿ ಮರೆಯಾದ ನಟಿ. 2004 ಏಪ್ರಿಲ್ 17 ರಂದು ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನರಾದ ಸೌಂದರ್ಯ ಮದುವೆಯಾಗಿ 1 ವರ್ಷ ಕಳೆದಿತ್ತು ಅಷ್ಟೇ.

Soundarya Biopic
ಸೌಂದರ್ಯ

ಅಂದಹಾಗೆ ಈ ಸುಂದರ ನಟಿ ಸೌಂದರ್ಯ ಅವರ ಪಾತ್ರಕ್ಕೆ ಸಾಯಿ ಪಲ್ಲವಿ ಸೂಕ್ತ ಎಂದು ಹೇಳಲಾಗುತ್ತಿದೆ. ಈಗಾಗಲೇ ಸಾಯಿ ಪಲ್ಲವಿ ಜೊತೆ ಚಿತ್ರದ ನಿರ್ಮಾಪಕ, ನಿರ್ದೇಶಕ ಮಾತನಾಡಿದ್ದು ಆಕೆ ಕೂಡಾ ಈ ಪಾತ್ರ ಮಾಡಲು ಒಪ್ಪಿದ್ದಾರೆ ಎನ್ನಲಾಗುತ್ತಿದೆ. ಎಲ್ಲಾ ಓಕೆ ಆದರೆ ಆದಷ್ಟು ಬೇಗ ಸಿನಿಪ್ರಿಯರು ಸೌಂದರ್ಯ ಅವರ ಜೀವನವನ್ನು ತೆರೆ ಮೇಲೆ ನೋಡಬಹುದು.

Last Updated : Oct 13, 2020, 11:43 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.