ಸಿನಿಮಾ, ಧಾರಾವಾಹಿ, ಟಿಕ್ಟಾಕ್ ಸ್ಟಾರ್, ಕ್ರೀಡಾತಾರೆಯರು ಹೀಗೆ ಸೆಲಬ್ರಿಟಿಗಳ ಹೆಸರಿನಲ್ಲಿ ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಫೇಕ್ ಅಕೌಂಟ್ ತೆರೆಯುವುದು ಇತ್ತೀಚೆಗೆ ಹೆಚ್ಚಾಗಿ ಹೋಗಿದೆ. ಇದೀಗ ದಕ್ಷಿಣ ಭಾರತದ ಖ್ಯಾತ ಹಿರಿಯ ನಟಿ ಅಂಬಿಕಾ ಅವರ ಹೆಸರಿನಲ್ಲಿ ನಕಲಿ ಖಾತೆ ತೆರೆಯಲಾಗಿದೆ.
ಈ ಬಗ್ಗೆ ಅಂಬಿಕಾ ತಮ್ಮ ಸ್ನೇಹಿತರ ಮುಖಾಂತರ ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ತಮ್ಮ ಹೆಸರಿನಲ್ಲಿ ಫೇಕ್ ಅಕೌಂಟ್ ತೆರೆದಿರುವುದು ಅಂಬಿಕಾ ಅವರಿಗೆ ಶಾಕ್ ಆಗಿದೆ. ಇಂತಹ ವಿಚಾರಗಳನ್ನು ಯಾರೂ ಪ್ರೋತ್ಸಾಹಿಸಬೇಡಿ. ಈ ಫೇಕ್ ಅಕೌಂಟ್ನಿಂದ ಯಾವುದಾದರೂ ಸಂದೇಶಗಳು ಬಂದರೆ ಕೂಡಲೇ ಸೈಬರ್ ಕ್ರೈಂಗೆ ದೂರು ನೀಡುವಂತೆ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಅಸಲಿಗೆ ಅಂಬಿಕಾ ಇದುವರೆಗೂ ಯಾವುದೇ ಸೋಷಿಯಲ್ ಮೀಡಿಯಾ ಅಕೌಂಟ್ ತೆರೆದಿಲ್ಲ.
ಸಾಮಾನ್ಯವಾಗಿ ಸೆಲಬ್ರಿಟಿಗಳ ಸೋಷಿಯಲ್ ಮೀಡಿಯಾ ಅಕೌಂಟ್ಗಳನ್ನು ವೆರಿಫೈಯ್ಡ್ ಮಾಡಲಾಗಿರುತ್ತದೆ. ಹೆಸರಿನ ಮುಂದೆ ನೀಲಿ ಬಣ್ಣದ ಟಿಕ್ ಮಾರ್ಕ್ ಇರುತ್ತದೆ. ಆದ್ದರಿಂದ ಅಭಿಮಾನಿಗಳು ಈ ಸಂಬಂಧ ಎಚ್ಚರಿಕೆಯಿಂದ ಇರಬೇಕು ಎಂದು ಅಂಬಿಕಾ ಮನವಿ ಮಾಡಿದ್ದಾರೆ.