ಚೆನ್ನೈ (ತಮಿಳುನಾಡು): ನಟ ರಜನಿಕಾಂತ್ ಮನೆಗೆ ಬಾಂಬ್ ಇಟ್ಟಿರುವುದಾಗಿ ಅಪರಿಚಿತ ವ್ಯಕ್ತಿ ಕರೆ ಮಾಡಿ ಬೆದರಿಕೆಯೊಡ್ಡಿದ್ದರು. ಚೆನ್ನೈನಲ್ಲಿರುವ ರಜನಿಕಾಂತ್ ಅವರ ಮನೆಯನ್ನು ಪೊಲೀಸರು ಪರಿಶೀಲಿಸಿದ್ದು, ಇದೊಂದು ಹುಸಿ ಕರೆ ಎಂದು ತಿಳಿದುಬಂದಿದೆ.
ಬಾಂಬ್ ಸ್ಕ್ವಾಡ್ ಮತ್ತು ಪೊಲೀಸರು ರಜನಿ ನಿವಾಸವನ್ನು ತಲುಪಿದಾಗ, ಕೊರೊನಾ ಭೀತಿ ಹಿನ್ನೆಲೆ ಅವರನ್ನು ಒಳಗೆ ಹೋಗಲು ನಿರಾಕರಿಸಿದರು ಎಂದು ವರದಿಯಾಗಿದೆ. ತಂಡವು ಸುಮಾರು 10 ನಿಮಿಷಗಳ ಕಾಲ ಕಾಯ್ದ ಬಳಿಕ ಪ್ರವೇಶವನ್ನು ನಿರಾಕರಿಸಿದ ಕಾರಣ, ಸೆಕ್ಯುರಿಟಿ ಗಾರ್ಡ್ ಕ್ಯಾಬಿನ್ ಮತ್ತು ನಟನ ಮನೆಯ ಹೊರಗಿನ ಪ್ರದೇಶವನ್ನು ಕೂಲಂಕಷವಾಗಿ ಪರಿಶೀಲಿಸಿದರು.
ಕರೆ ಮಾಡಿದವರು ಕಡಲೂರು ಜಿಲ್ಲೆಯ ಬಳಿಯ ನೆಲ್ಲಿಕುಪ್ಪಂನಲ್ಲಿ ಎಂಟನೇ ತರಗತಿ ವಿದ್ಯಾರ್ಥಿ ಎಂದು ಪೊಲೀಸರು ಪತ್ತೆ ಮಾಡಿದ್ದಾರೆ. ಪೊಲೀಸರು ವಿದ್ಯಾರ್ಥಿಯ ತನಿಖೆ ನಡೆಸಿದ ನಂತರ, ಅವರ ವೈದ್ಯಕೀಯ ದಾಖಲೆಗಳನ್ನು ಪರಿಶೀಲಿಸಿ ಬಿಡಲಾಯಿತು.
ಲಾಕ್ಡೌನ್ನಿಂದ ಸಂಕಷ್ಟದಲ್ಲಿ ವಿದ್ಯಾರ್ಥಿ ಕುಟುಂಬಕ್ಕೆ ರಜನಿಕಾಂತ್ ಮಕ್ಕಲ್ ಮಂದಿರಂ (ಆರ್‌ಎಂಎಂ) ಚಿತ್ರ ತಂಡದ ಸದಸ್ಯರು ಆಹಾರ ಪದಾರ್ಥಗಳನ್ನು ವಿತರಿಸಿದರು.
ಎ.ಆರ್.ಮುರುಗದಾಸ್ ನಿರ್ದೇಶನದ ‘ದರ್ಬಾರ್’ ಚಿತ್ರದಲ್ಲಿ ರಜನಿಕಾಂತ್ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದಾರೆ. ರಜನಿಕಾಂತ್ ಮುಂದಿನ ‘ಅನ್ನಾಥೆ’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.