ಕನ್ನಡ ಚಿತ್ರರಂಗದ ಅಭಿನಯ ಶಾರದೆ ಜಯಂತಿ ಬೆಂಗಳೂರಿನ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಹಿರಿಯ ನಟಿ ನಿನ್ನೆ ರಾತ್ರಿ 1 ಗಂಟೆ ಸರಿಸುಮಾರಿಗೆ ಇಹಲೋಕ ತ್ಯಜಿಸಿದ್ದರು.
ಕನ್ನಡ, ತೆಲಗು, ತಮಿಳು, ಮಲಯಾಳಂ, ಹಿಂದಿ ಮತ್ತು ಮರಾಠಿ ಭಾಷೆಗಳೆಲ್ಲ ಸೇರಿ ಸುಮಾರು 500ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ, ಜಯಂತಿ ಅವರು ಸಾಯುವ ಮುನ್ನ, ಅವರ ಕಣ್ಣುಗಳನ್ನು ದಾನ ಮಾಡುವ ನಿರ್ಧಾರಕ್ಕೆ ಬಂದಿದ್ದರಂತೆ. ಅಂತೆಯೇ ಜಯಂತಿ ಈಗ ಅವರ ಕಣ್ಣುಗಳನ್ನು ದಾನ ಮಾಡಿದ್ದಾರೆ ಅಂತಾ ಅವರ ಮಗ ಕೃಷ್ಣ ಕುಮಾರ್ ತಿಳಿಸಿದ್ದಾರೆ.
ಬನಶಂಕರಿಯ ರುದ್ರಭೂಮಿಯಲ್ಲೇ, ಜಯಂತಿ ಅವರ ಕಣ್ಣುದಾನದ ಪ್ರಕ್ರಿಯೆ ಆರಂಭವಾಗಿದ್ದು, 15 ರಿಂದ 20 ನಿಮಿಷಗಳ ಕಾಲ ಪ್ರಕ್ರಿಯೆ ನಡೆಯಲಿದೆ. ತನ್ನೆರಡೂ ಕಣ್ಣುಗಳನ್ನು ಜಯಂತಿ ದಾನ ಮಾಡಿದ್ದಾರೆ.
ನಾರಾಯಣ ನೇತ್ರಾಲಯದ ಡಾ.ರಾಜಕುಮಾರ್ ಐ ಬ್ಯಾಂಕ್‌ಗೆ ಜಯಂತಿ ಅವ್ರ ಕಣ್ಣುಗಳನ್ನು ನೀಡಲಾಗಿದ್ದು, ಪುಟ್ಟ ಮಗುವಿನ ಬಾಳಿಗೆ ಜಯಂತಿ ಬೆಳಕಾಗಿದ್ದಾರೆ. ಹುಟ್ಟು ಕುರುಡಿನಿಂದ ಬಳಲುತ್ತಿರುವ ಕಂದಮ್ಮನಿಗೆ ಅಭಿನಯ ಶಾರದೆಯ ಕಣ್ಣುಗಳನ್ನ ನೀಡಲಾಗಿದೆ.ಈ ಮೂಲಕ ಪುಟ್ಟ ಕಂದಮ್ಮ ಜಯಂತಿ ಅವ್ರ ಕಣ್ಣುಗಳಿಂದ ಜಗತ್ತು ನೋಡಲಿದೆ.
ಇದನ್ನೂ ಓದಿ: ಬಹುಭಾಷಾ ನಟಿ 'ಅಭಿಜಾತ ಪ್ರತಿಭೆ' ಜಯಂತಿ ನಡೆದು ಬಂದ ಹಾದಿ..