ಅಮೆರಿಕ ಗಾಯಕಿ ಎಲ್ಲೀ ಗೌಲ್ಡಿಂಗ್ ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ ವೈವಾಹಿಕ ಜೀವನದ ಬಗ್ಗೆ ಮಾತನಾಡಿದ್ದು, ನನ್ನ ವೈವಾಹಿಕ ಜೀವನ ಅದ್ಭುತವಾಗಿದೆ, ನಾನು ಮತ್ತು ನನ್ನ ಗಂಡ ಗೆಳೆಯ-ಗೆಳತಿ ರೀತಿಯೇ ಬದುಕುತ್ತಿದ್ದೇವೆ ಎಂದು ಹೇಳಿದ್ದಾರೆ.
ತಮ್ಮ ಜೀವನದ ಬಗ್ಗೆ ಮಾತನಾಡಿರುವ ಎಲ್ಲೀ ಗೌಲ್ಡಿಂಗ್, ನನ್ನ ಗಂಡ ಕ್ಯಾಸ್ಪರ್ ಜೊಪ್ಲಿಂಗ್ ಈಗಲೂ ಹನಿಮೂನ್ ರೀತಿಯಲ್ಲೇ ಜೀವನವನ್ನು ಎಂಜಾಯ್ ಮಾಡ್ತಿದ್ದಾರೆ ಎಂದು ಖುಷಿ ಪಟ್ಟಿದ್ದಾರೆ. ಎಲ್ಲೀ ಗೌಲ್ಡಿಂಗ್ ಮತ್ತು ಕ್ಯಾಸ್ಪರ್ ಜೊಪ್ಲಿಂಗ್ ಕಳೆದ ವರ್ಷ ಆಗಸ್ಟ್ನಲ್ಲಿ ಮದುವೆಯಾಗಿದ್ದರು.
ಇನ್ನು ತಮ್ಮ ಮುಂಬರುವ ಆಲ್ಬಮ್ ಬಗ್ಗೆ ಮಾತನಾಡಿದ ಎಲ್ಲೀ ಗೌಲ್ಡಿಂಗ್, ಎ ಲಾಂಗ್ ಟೈಮ್ ಎಗೋ ಸಿದ್ದವಾಗುತ್ತಿದೆ. ಇದು ಜೀವನ ಮತ್ತು ಸಂಬಂಧಗಳ ವಿಷಯದ ಮೇಲೆ ನಿರ್ಮಿತವಾಗುತ್ತಿವೆ ಎಂದು ಪ್ರತಿಕ್ರಿಯಿಸಿದ್ದಾರೆ.