ಲಾಸ್ ಏಂಜಲೀಸ್: ನೆಟ್ಫ್ಲಿಕ್ಸ್ನಲ್ಲಿ ಪ್ರಸಾರವಾಗಲಿರುವ ಬ್ರಿಟನ್ ರಾಣಿ ದಿವಂಗತ ಡಯಾನ ಜೀವನ ಚರಿತ್ರೆಯುಳ್ಳ 'ದಿ ಕ್ರೌನ್' ವೆಬ್ ಸರಣಿಯ ಕೊನೆಯ ಎರಡು ಸೀಸನ್ಗಳಲ್ಲಿ ನಟಿ ಎಲಿಜಬೆತ್ ಡೆಬಿಕಿ, ಡಯಾನ ಪಾತ್ರವನ್ನು ನಿರ್ವಹಿಸಲಿದ್ದಾರೆ.
ಈ ಸೀರೀಸನ್ನು ಪೀಟರ್ ಮೋರ್ಗನ್ ರಚಿಸಿದ್ದು ತಮ್ಮ ಅಫಿಷಿಯಲ್ ಟ್ವಿಟ್ಟರ್ ಪೇಜ್ನಲ್ಲಿ ಪೀಟರ್ ಈ ವಿಚಾರವನ್ನು ಘೋಷಿಸಿದ್ದಾರೆ. 'ದಿ ಕ್ರೌನ್' ಸರಣಿಯ 5 ಹಾಗೂ 6 ಸೀಸನ್ನಲ್ಲಿ ಎಲಿಜಬೆತ್ ಡೆಬಿಕಿ, ಪ್ರಿನ್ಸ್ ಡಯಾನ ಪಾತ್ರವನ್ನು ನಿರ್ವಹಿಸಲಿದ್ದಾರೆ ಎಂದು ಪೀಟರ್ ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದಾರೆ. 'ಡಯನ ಪಾತ್ರವನ್ನು ನಿರ್ವಹಿಸಲು ನನಗೆ ಅವಕಾಶ ದೊರೆತಿರುವುದು ಸಂತೋಷದ ವಿಚಾರ ಎಂದು ಎಲಿಜಬೆತ್ ಡೆಬಿಕಿ' ಹೇಳಿಕೊಂಡಿದ್ದಾರೆ. ಕ್ರಿಸ್ಟೋಫರ್ ನೊಲನ್ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ 'ಟೆನಿಟ್' ನಲ್ಲಿ ಕೂಡಾ ಎಲಿಜಬೆತ್ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ.
'ರಾಜಕುಮಾರಿ ಡಯಾನ ಅವರು ಇಂದು ನಮ್ಮೊಂದಿಗೆ ಇಲ್ಲದಿದ್ದರೂ ಬಹಳಷ್ಟು ಜನರ ಹೃದಯದಲ್ಲಿ ಇಂದಿಗೂ ನೆಲೆಸಿದ್ದಾರೆ. ಅವರ ಪಾತ್ರವನ್ನು ನಾನು ಮಾಡುತ್ತಿರುವುದು ಬಹಳ ಸಂತೋಷ ತಂದಿದೆ' ಎಂದು ಆಸ್ಟ್ರೇಲಿಯನ್ ನಟಿ ಎಲಿಜಬೆತ್ ಹೇಳಿಕೊಂಡಿದ್ದಾರೆ. ಡೆಬಿಕಿ ಎ ಫ್ಯೂ ಬೆಸ್ಟ್ ಮೆನ್, ದಿ ಗ್ರೇಟ್ ಗಾಟ್ಸ್ಬೆ, ಎವರೆಸ್ಟ್, ದಿ ನೈಟ್ ಮ್ಯಾನೇಜರ್, ಗಾರ್ಡಿಯನ್ಸ್ ಆಫ್ ದಿ ಗ್ಯಾಲಕ್ಸಿ ಸೇರಿ ಬಹಳಷ್ಟು ಸಿನಿಮಾಗಳಲ್ಲಿ ಎಲಿಜಬೆತ್ ಡೆಬಿಕಿ ನಟಿಸಿದ್ದಾರೆ.
ಮಾಜಿ ಯುಕೆ ಪ್ರಧಾನ ಮಂತ್ರಿ ಮಾರ್ಗರೇಟ್ ಥ್ಯಾಚರ್ ಪಾತ್ರದಲ್ಲಿ ನಟ ಗಿಲಿಯನ್ ಅ್ಯಂಡ್ರಸನ್ ನಟಿಸಿರುವ 'ದಿ ಕ್ರೌನ್' 4ನೇ ಸೀಸನ್ ಈ ವರ್ಷದ ಅಂತ್ಯದಲ್ಲಿ ಪ್ರಸಾರವಾಗಲಿದೆ ಎಂದು ಪೀಟರ್ ಮೋರ್ಗನ್ ಹೇಳಿದ್ದಾರೆ.