ಮೈಸೂರು: ಶ್ರೀಚಾಮರಾಜೇಂದ್ರ ಮೃಗಾಲಯದಲ್ಲಿ ಪಾರ್ವತಿ ಎಂಬ ಆನೆಯನ್ನು ಒಂದು ವರ್ಷದ ಅವಧಿಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ದತ್ತು ಪಡೆದಿದ್ದಾರೆ.
![Elephant adoption by Actor Shivaraj Kumar, Elephant adoption by Actor Shivaraj Kumar in Mysore, Shiva kumar Elephant adoption news, ಶಿವರಾಜ್ ಕುಮಾರ್ರಿಂದ ಆನೆ ದತ್ತು ಸ್ವೀಕಾರ, ಮೈಸೂರಿನಲ್ಲಿ ಶಿವರಾಜ್ ಕುಮಾರ್ರಿಂದ ಆನೆ ದತ್ತು ಸ್ವೀಕಾರ, ಶಿವರಾಜ್ ಕುಮಾರ್ ಆನೆ ದತ್ತು ಸ್ವೀಕಾರ ಸುದ್ದಿ,](https://etvbharatimages.akamaized.net/etvbharat/prod-images/kn-mys-03-elephant-adoption-vis-ka10003_20082020152616_2008f_01610_807.jpg)
2020ರ ಆಗಸ್ಟ್ 20ರಿಂದ 2021ರ ಆಗಸ್ಟ್ 19ರವರೆಗೆ 75 ಸಾವಿರ ರೂ.ಗಳನ್ನು ಪಾವತಿಸಿ ಆನೆಯನ್ನು ದತ್ತು ಪಡೆದಿದ್ದಾರೆ. ಮೃಗಾಲಯದ ಮುಖ್ಯ ಧ್ಯೇಯೋದ್ದೇಶವಾದ ಪ್ರಾಣಿ ಸಂರಕ್ಷಣೆಯಂತಹ ಮಹಾನ್ ಕಾರ್ಯದಲ್ಲಿ ಕೈಜೋಡಿಸಿದ ಶಿವರಾಜ್ ಕುಮಾರ್ ಅವರಿಗೆ ಮೃಗಾಲಯ ಅಭಿನಂದಿಸಿದೆ.
ಕೊರೊನಾ ಆರ್ಭಟದಿಂದ ಎರಡು ತಿಂಗಳು ಮೃಗಾಲಯ ಪ್ರವೇಶಕ್ಕೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಿದ್ದರಿಂದ ಆದಾಯ ಕುಸಿತಗೊಂಡಿತ್ತು. ನಂತರ ದಾನಿಗಳ ಸಹಾಯ ಹಾಗೂ ಪ್ರಾಣಿ ಪ್ರೀಯರು ದತ್ತು ಸ್ವೀಕಾರದಿಂದ ಪ್ರಾಣಿ-ಪಕ್ಷಿಗಳಿಗೆ ತಕ್ಕ ಮಟ್ಟಿಗೆ ಅನುಕೂಲವಾಗಿದೆ.