ನಿರ್ದೇಶಕ 'ಜೋಗಿ' ಪ್ರೇಮ್, ಇಂದು ಸಖತ್ ಸರ್ಪ್ರೈಸ್ ಕೊಡುವುದಾಗಿ ಹೇಳಿದ್ದರು. ಚಿತ್ರದ ಬಗ್ಗೆ ಒಂದು ಹೊಸ ಘೋಷಣೆ ಮಾಡುವುದಾಗಿ ಹೇಳಿದ್ದರು. ಅದರಂತೆ ಪ್ರೇಮ್, ಸೋಷಿಯಲ್ ಮೀಡಿಯಾ ಮೂಲಕ ಒಂದು ಮಹತ್ವದ ವಿಷಯವನ್ನು ಹಂಚಿಕೊಂಡಿದ್ದಾರೆ. ಅದೇನೆಂದರೆ, ಚಿತ್ರವನ್ನು ಅವರು ನಾಲ್ಕು ಭಾಷೆಗಳಲ್ಲಿ ಬಿಡುಗಡೆ ಮಾಡುವುದಕ್ಕೆ ಸಜ್ಜಾಗುತ್ತಿದ್ದಾರೆ.
'ಏಕ್ ಲವ್ ಯಾ' ಚಿತ್ರವು ನಾಲ್ಕು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಕನ್ನಡದಲ್ಲಿ ಚಿತ್ರ ಚಿತ್ರೀಕರಣವಾದರೂ, ತೆಲುಗು, ತಮಿಳು ಮತ್ತು ಮಲಯಾಳಂನಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ. ಕನ್ನಡ ಚಿತ್ರವನ್ನು ಬೇರೆ ಭಾಷೆಗಳಿಗೆ ಡಬ್ ಮಾಡಿ ಬಿಡುಗಡೆ ಮಾಡುವ ಚಾಳಿ ಇತ್ತೀಚಿನ ದಿನಗಳಲ್ಲಿ ಕನ್ನಡದಲ್ಲೂ ಹೆಚ್ಚಾಗಿದೆ. ಈಗಾಗಲೇ 'ಯುವರತ್ನ', 'ಪೊಗರು', 'ಕಬ್ಜ', 'ಮದಗಜ' ಮುಂತಾದ ಚಿತ್ರಗಳು ಕನ್ನಡವಲ್ಲದೆ ಬೇರೆ ಭಾಷೆಗಳಲ್ಲೂ ಬಿಡುಗಡೆಯಾಗುತ್ತಿವೆ. ಈಗ ಆ ಸಾಲಿಗೆ 'ಏಕ್ ಲವ್ ಯಾ' ಚಿತ್ರ ಸಹ ಸೇರಿಕೊಂಡಿದೆ.
-
Wishing you all a very Happy Makara Sankranthi🤗Finally the wait is over! Ekloveya first song is releasing on 14th February in 4 languages.Need all your blessings, love and support 🤗🙏🏻 Thankyou so much 🤗love you all❤️ https://t.co/KXO66VA7Nt#Kannada #telugu #tamil #malayalam pic.twitter.com/nrGnaElUnE
— PREM❣️S (@directorprems) January 14, 2021 " class="align-text-top noRightClick twitterSection" data="
">Wishing you all a very Happy Makara Sankranthi🤗Finally the wait is over! Ekloveya first song is releasing on 14th February in 4 languages.Need all your blessings, love and support 🤗🙏🏻 Thankyou so much 🤗love you all❤️ https://t.co/KXO66VA7Nt#Kannada #telugu #tamil #malayalam pic.twitter.com/nrGnaElUnE
— PREM❣️S (@directorprems) January 14, 2021Wishing you all a very Happy Makara Sankranthi🤗Finally the wait is over! Ekloveya first song is releasing on 14th February in 4 languages.Need all your blessings, love and support 🤗🙏🏻 Thankyou so much 🤗love you all❤️ https://t.co/KXO66VA7Nt#Kannada #telugu #tamil #malayalam pic.twitter.com/nrGnaElUnE
— PREM❣️S (@directorprems) January 14, 2021
ಮೊದಲ ಹಂತವಾಗಿ, ಚಿತ್ರದ ಮೊದಲ ಹಾಡು ಪ್ರೇಮಿಗಳ ದಿನವಾದ ಫೆಬ್ರವರಿ 14ರಂದು ಬಿಡುಗಡೆಯಾಗಲಿದ್ದು, ಅಂದು ಯೂಟ್ಯೂಬ್ನ ಎ2 ಮ್ಯೂಸಿಕ್ ಚಾನಲ್ನಲ್ಲಿ ಚಿತ್ರದ ಮೊದಲ ಹಾಡು ಬಿಡುಗಡೆಯಾಗುತ್ತಿದೆ. ಬರೀ ಕನ್ನಡವಷ್ಟೇ ಅಲ್ಲ, ತೆಲುಗು, ತಮಿಳು ಮತ್ತು ಮಲಯಾಳಂ ಹಾಡುಗಳು ಸಹ ಅಂದೇ ಬಿಡುಗಡೆಯಾಗುತ್ತಿವೆ.
'ಏಕ್ ಲವ್ ಯಾ' ಚಿತ್ರದಲ್ಲಿ ಪ್ರೇಮ್ ಅವರ ಬಾಮೈದ ರಾಣಾ ಹೀರೋ ಆಗಿ ನಟಿಸುತ್ತಿದ್ದು, ರೀಷ್ಮಾ ನಾಣಯ್ಯ ನಾಯಕಿಯಾಗಿ ಪರಿಚಿತರಾಗುತ್ತಿದ್ದಾರೆ. ಮಿಕ್ಕಂತೆ ರಚಿತಾ ರಾಮ್, 'ಶಿಷ್ಯ' ದೀಪಕ್ ಮುಂತಾದವರು ಅಭಿನಯಿಸಿರುವ ಈ ಚಿತ್ರಕ್ಕೆ ಮಹೇಂದ್ರ ಸಿಂಹ ಅವರ ಛಾಯಾಗ್ರಹಣ ಮತ್ತು ಅರ್ಜುನ್ ಜನ್ಯ ಅವರ ಸಂಗೀತವಿದೆ. ಈ ಚಿತ್ರವನ್ನು ಪ್ರೇಮ್ ಅವರ ಪತ್ನಿ ರಕ್ಷಿತಾ ಪ್ರೇಮ್ ಅವರು ರಕ್ಷಿತಾ ಫಿಲಂ ಫ್ಯಾಕ್ಟರಿ ಮೂಲಕ ನಿರ್ಮಾಣ ಮಾಡುತ್ತಿದ್ದಾರೆ.