ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಹೊಸ ಸಿನಿಮಾಗೆ ಭರ್ಜರಿ ತಯಾರಿ ನಡೆಸಿದ್ದಾರೆ. ತಮ್ಮ 35ನೇ ಸಿನಿಮಾದ ಟೈಟಲ್‌ನ ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಹುಟ್ಟುಹಬ್ಬದ ದಿನ ಘೋಷಿಸಿಕೊಂಡಿದ್ದರು. ನಾಳೆ 34ನೇ ವಸಂತಕ್ಕೆ ಕಾಲಿಡುತ್ತಿರೋ ಪ್ರಜ್ವಲ್ ದೇವರಾಜ್‍ಗೆ ವೀರಂ ಚಿತ್ರತಂಡ ಟೀಸರ್ ರಿಲೀಸ್ ಮಾಡುವ ಮೂಲಕ ಉಡುಗೊರೆ ನೀಡಿದೆ.
ಉದ್ದವಾದ ಕೂದಲು ಬಿಟ್ಟು ಈ ಪಾತ್ರಕ್ಕಾಗಿ ಮೇಕ್ ಓವರ್ ಮಾಡಿಕೊಂಡಿರುವ ಪ್ರಜ್ವಲ್ ದೇವರಾಜ್, ಈ ಸಿನಿಮಾದಲ್ಲಿ ಡಬಲ್ಶೇಡ್ನಲ್ಲಿ ಕಾಣಿಸಿದ್ದಾರೆ. ಕೈಯಲ್ಲಿ ಮಚ್ಚು, ಜೊತೆಯಲ್ಲಿ ಮಚ್ಚಾ ಅವನೇ ಅಂತಾ ಹೊಡೆಯಕ್ಕೆ ಹೋದೆ ಅಣ್ಣಾ, ನನ್ನ ಕೈಯಲ್ಲಿ ಇದ್ದ ಮಚ್ಚುಗಿಂತ, ಅವನ ಕೈಯಲ್ಲಿದ್ದ ಮಚ್ಚೆಗೆ ಒಂದು ಖದರ್ ಇದೆ ಅಂತಾ ಗೊತ್ತಾಯಿತು ಅಣ್ಣಾ ಎಂಬ, ಪಂಚಿಂಗ್ ಡೈಲಾಗ್ ಮೂಲಕ ಮತ್ತೆ ತಮ್ಮ ಅಭಿಮಾನಿಗಳಿಗೆ ಸಖತ್ ಕಿಕ್ ಕೊಟ್ಟಿದ್ದಾರೆ.
- " class="align-text-top noRightClick twitterSection" data="">
ಈ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ವಿಷ್ಣುದಾದಾನ ಅಭಿಮಾನಿಯಾಗಿ ಕಾಣಿಸಿದ್ದಾರೆ. ಕಥೆ, ಚಿತ್ರಕಥೆ ಬರೆಯುವುದರ ಜೊತೆಗೆ ಖದರ್ ಸಿನಿಮಾ ನಿರ್ದೇಶಕ ಕುಮಾರ್ ನಿರ್ದೇಶನ ಮಾಡ್ತಿರೋ, ಈ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಎರಡು ಶೇಡ್‌ನಲ್ಲಿದ್ದಾರೆ. ಇನ್ನು, ಪ್ರಜ್ವಲ್ ಜೋಡಿಯಾಗಿ ರಚಿತಾ ರಾಮ್ ಕಾಣಿಸಿಕೊಂಡಿದ್ದಾರೆ.
ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ಮತ್ತು ಲವಿತ್ ಛಾಯಾಗ್ರಹಣವಿದೆ. ಈ ಹಿಂದೆ ಡಾಟರ್ ಆಫ್ ಪಾರ್ವತಮ್ಮ ಚಿತ್ರವನ್ನು ನಿರ್ಮಿಸಿದ್ದ ಮತ್ತು ಇದೀಗ ಶುಗರ್ಲೆಸ್ ಎಂಬ ಚಿತ್ರವನ್ನು ನಿರ್ಮಿಸಿ-ನಿರ್ದೇಶಿಸುತ್ತಿರುವ ಕೆ.ಎಂ. ಶಶಿಧರ್, ವೀರಂ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಕೊರೊನಾದಿಂದಾಗಿ ಪ್ರಜ್ವಲ್ ದೇವರಾಜ್ ನಾಳೆ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಹೀಗಾಗಿ, ವೀರಂ ಚಿತ್ರತಂಡ ಹುಟ್ಟು ಹಬ್ಬಕ್ಕೆ ಈ ಸ್ಪೆಷಲ್ ಟೀಸರ್‌ನ ಗಿಫ್ಟ್ ಆಗಿ ನೀಡಿದೆ.
ಇದನ್ನೂ ಓದಿ : 'ವೀರಂ' ಸಿನಿಮಾ: ಲುಕ್ ಬದಲಿಸಿದ ಪ್ರಜ್ವಲ್ ದೇವರಾಜ್