ಟಾಲಿವುಡ್ನಲ್ಲಿ ಸಂಚಲನ ಮೂಡಿಸಿದ್ದ ಡ್ರಗ್ಸ್ ಪ್ರಕರಣ ಕೊನೆಗೂ ಸುಖಾಂತ್ಯ ಕಂಡಿದೆ. ಈ ಪ್ರಕರಣದಲ್ಲಿ ಕೇಳಿ ಬಂದಿದ್ದ ದೊಡ್ಡ ನಟ-ನಟಿಯರಿಗೆ ಕ್ಲೀನ್ ಚಿಟ್ ಸಿಕ್ಕಿದೆ.
ಹೈದರಾಬಾದ್ ಪೊಲೀಸರು 2017ರ ಜುಲೈನಲ್ಲಿ ಡ್ರಗ್ಸ್ ಜಾಲ ಭೇದಿಸಿದ್ದರು. ಈ ಪ್ರಕರಣದಲ್ಲಿ ನಟ ರವಿತೇಜ, ಪೂರಿ ಜಗನ್ನಾಥ್, ನಟಿ ಚಾರ್ಮಿ , ಮುಮೈತಾ ಖಾನ್ ಸೇರಿದಂತೆ ಹಲವು ತಾರೆಯರ ಹೆಸರುಗಳು ತಳುಕು ಹಾಕಿಕೊಂಡಿತ್ತು. ಈ ಸೆಲಬ್ರಿಟಿಗಳಿಗೆ ನೋಟಿಸ್ ನೀಡಿದ್ದ ತನಿಖಾ ತಂಡ, ವಿಚಾರಣೆಗೊಳಪಡಿಸಿತ್ತು.
ಇದೀಗ ಎರಡು ವರ್ಷಗಳ ಈ ಬಳಿಕ ಪ್ರಕರಣಕ್ಕೆ ಸೆಲಬ್ರಿಟಿಗಳ ಲಿಂಕ್ ಇಲ್ಲದಿರುವುದು ವಿಚಾರಣೆಯಿಂದ ಸಾಬೀತಾಗಿದೆ. ಕೊನೆಗೂ ನಟ-ನಟಿಯರು ನಿರಾಳರಾಗಿದ್ದಾರೆ.