ETV Bharat / sitara

ಮ್ಯಾಂಡರಿನ್ ಭಾಷೆಗೆ ರೀಮೇಕ್ ಆಗುತ್ತಿದೆ 'ದೃಶ್ಯಂ-2' - Mandarin langauge

ಮಲಯಾಳಂ ನಟ ಮೋಹನ್ ಲಾಲ್ ಅಭಿನಯದ ದೃಶ್ಯಂ-2 ಸಿನಿಮಾ ಮ್ಯಾಂಡರಿನ್ ಭಾಷೆಗೆ ರೀಮೇಕ್ ಆಗಿ, ಚೀನಾದಲ್ಲಿ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗಲಿದೆ ಎಂಬ ಮಾಹಿತಿ ದೊರೆತಿದೆ. ಈ ಚಿತ್ರಕ್ಕೂ ಮುನ್ನ ಬಿಡುಗಡೆಯಾಗಿದ್ದ ದೃಶ್ಯಂ ಚಿತ್ರವೂ ಮ್ಯಾಂಡರಿನ್ ಭಾಷೆಗೆ 'ಶೀಪ್ ವಿಥೌಟ್ ಎ ಶೆಪರ್ಡ್' ಎಂಬ ಹೆಸರಿನಲ್ಲಿ ರೀಮೇಕ್ ಆಗಿ ಹಿಟ್ ಆಗಿತ್ತು.

Drishyam 2 Movie
ದೃಶ್ಯಂ 2 ಸಿನಿಮಾ
author img

By

Published : Jun 10, 2021, 10:42 AM IST

ಮಲಯಾಳಂ ನಟ ಮೋಹನ್ ಲಾಲ್ ಅಭಿನಯದ ದೃಶ್ಯಂ-2 ಸಿನಿಮಾ ಕೆಲವು ತಿಂಗಳುಗಳ ಹಿಂದೆ ಅಮೇಜಾನ್ ಪ್ರೈಮ್​​​​​ನಲ್ಲಿ ನೇರವಾಗಿ ಬಿಡುಗಡೆಯಾಗುವುದರ ಜೊತೆಗೆ ಓಟಿಟಿಯಲ್ಲಿ ಅತೀ ಹೆಚ್ಚು ವೀಕ್ಷಣೆ ಪಡೆದ ಚಿತ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು. ಈ ಚಿತ್ರ ಈಗಾಗಲೇ ತೆಲುಗಿಗೆ ರೀಮೇಕ್ ಆಗಿದ್ದು, ಬಿಡುಗಡೆ ಬಾಕಿ ಉಳಿದಿದೆ. ಅಷ್ಟೇ ಅಲ್ಲ, ಹಿಂದಿ ಮತ್ತು ತೆಲುಗಿಗೆ ರೀಮೇಕ್ ಹಕ್ಕುಗಳು ಮಾರಾಟವಾಗಿದ್ದು, ಲಾಕ್​ಡೌನ್​ ನಂತರ ಚಿತ್ರೀಕರಣ ಪ್ರಾರಂಭವಾಗಲಿದೆ. ತಮಿಳಿನಲ್ಲೂ ಚಿತ್ರ ರೀಮೇಕ್ ಮಾಡುವ ಬಗ್ಗೆ ಮಾತುಕಥೆ ನಡೆಯುತ್ತಿದೆ.

ಈ ಮಧ್ಯೆ ಚಿತ್ರವು ಮ್ಯಾಂಡರಿನ್ ಭಾಷೆಗೆ ರೀಮೇಕ್ ಆಗಿ, ಚೀನಾದಲ್ಲಿ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗುವುದಾಗಿ ಸುದ್ದಿ ಇದೆ. ದೃಶ್ಯಂ-2ಗೂ ಮುನ್ನ ದೃಶ್ಯಂ ಚಿತ್ರವೂ ಮ್ಯಾಂಡರಿನ್ ಭಾಷೆಗೆ 'ಶೀಪ್ ವಿಥೌಟ್ ಎ ಶೆಪರ್ಡ್' ಎಂಬ ಹೆಸರಿನಲ್ಲಿ ರೀಮೇಕ್ ಆಗಿ ಹಿಟ್ ಆಗಿತ್ತು. 2019ರಲ್ಲಿ ಚೀನಾದಲ್ಲಿ ಬಿಡುಗಡೆಯಾದ ಚಿತ್ರಗಳ ಪೈಕಿ 9ನೇ ಸ್ಥಾನ ಪಡೆದಿತ್ತು. ಇದೀಗ ದೃಶ್ಯಂ 2 ಚಿತ್ರದ ರೀಮೇಕ್ ಹಕ್ಕುಗಳು ಸಹ ಮ್ಯಾಂಡರಿನ್ ಭಾಷೆಗೆ ಮಾರಾಟವಾಗಿರುವ ಮಾಹಿತಿ ದೊರೆತಿದೆ.

ದೃಶ್ಯಂ-2ನ ಚೈನೀಸ್ ಅವತರಣಿಕೆಯ ಚಿತ್ರೀಕರಣ ಸೆಪ್ಟೆಂಬರ್​​ನಲ್ಲಿ ಪ್ರಾರಂಭವಾಗಿ 2022ರಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: 'ನಯನತಾರಾ' ಧಾರಾವಾಹಿಯ ರಾಹುಲ್ ಪಾತ್ರಧಾರಿಯ ಬಗ್ಗೆ ನಿಮಗೆಷ್ಟು ಗೊತ್ತು?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.