ETV Bharat / sitara

'ದೃಶ್ಯಂ-2' ಚಿತ್ರೀಕರಣ ಆರಂಭ...ಕನ್ನಡದಲ್ಲಿ ಮತ್ತೆ ಬರಲಿದ್ದಾರಾ ರಾಜೇಂದ್ರ ಪೊನ್ನಪ್ಪ...? - Drishya movie Rajendra ponnappa

ಮೋಹನ್ ಲಾಲ್ ಹಾಗೂ ಮೀನಾ ಪ್ರಮುಖ ಪಾತ್ರದಲ್ಲಿ ನಟಿಸಲಿರುವ 'ದೃಶ್ಯಂ-2' ಚಿತ್ರೀಕರಣ ಆರಂಭವಾಗಿದೆ. ಈ ಚಿತ್ರ ಬಿಡುಗಡೆಯಾದ ನಂತರ ಮತ್ತೆ ಕನ್ನಡದಲ್ಲಿ 'ದೃಶ್ಯ-2' ಬರುವ ನಿರೀಕ್ಷೆಯಿದೆ.

Drishyam 2 movie shoot started
'ದೃಶ್ಯಂ-2' ಚಿತ್ರೀಕರಣ ಆರಂಭ
author img

By

Published : Sep 22, 2020, 1:12 PM IST

2014 ರಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ನವ್ಯಾ ನಾಯರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದ 'ದೃಶ್ಯ' ಸಿನಿಮಾ ಪ್ರೇಕ್ಷಕರ ಮನಸ್ಸು ಗೆದ್ದಿತ್ತು. ಇದು 2013 ರಲ್ಲಿ ಬಿಡುಗಡೆಯಾದ ಮಲಯಾಳಂ ಚಿತ್ರ 'ದೃಶ್ಯಂ' ನ ರೀಮೇಕ್. ಇದೀಗ ಮಲಯಾಳಂನಲ್ಲಿ 'ದೃಶ್ಯಂ-2' ಚಿತ್ರೀಕರಣ ಆರಂಭವಾಗಿದೆ.

Drishyam 2 movie shoot started
ರವಿಚಂದ್ರನ್

ನಿನ್ನೆ ಈ ಚಿತ್ರದ ಮುಹೂರ್ತ ಕಾರ್ಯಕ್ರಮ ನೆರವೇರಿದ್ದು ಚಿತ್ರೀಕರಣ ಕೂಡಾ ಆರಂಭವಾಗಿದೆ. ಮೋಹನ್ ಲಾಲ್ ಹಾಗೂ ಮೀನಾ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸೆಪ್ಟೆಂಬರ್​ 26 ರಿಂದ ನಟ ಮೋಹನ್ ಲಾಲ್ ಚಿತ್ರತಂಡ ಸೇರಿಕೊಳ್ಳಲಿದ್ದಾರೆ ಎನ್ನಲಾಗಿದೆ. ಕ್ರೈಂ-ಥ್ರಿಲ್ಲರ್ ಕಥೆ ಹೊಂದಿರುವ ಈ ಚಿತ್ರ ಬಿಡುಗಡೆಯಾದ ನಂತರ ಕನ್ನಡ ಸೇರಿ ಇತರ ಭಾಷೆಗಳಿಗೆ ರೀಮೇಕ್ ಆಗಿತ್ತು. ಕನ್ನಡದಲ್ಲಿ ರವಿಚಂದ್ರನ್ ಮಗಳನ್ನು ಕಾಪಾಡುವ ಜವಾಬ್ದಾರಿಯುತ ತಂದೆ ರಾಜೇಂದ್ರ ಪೊನ್ನಪ್ಪ ಆಗಿ ನಟಿಸಿದ್ದರು.

ಇದೀಗ ಮಲಯಾಳಂನಲ್ಲಿ 'ದೃಶ್ಯಂ-2' ಆರಂಭವಾಗಿದ್ದು ಈ ಚಿತ್ರ ಕೂಡಾ ಯಶಸ್ವಿಯಾಗಲಿದೆ ಎಂಬ ನಂಬಿಕೆಯಲ್ಲಿದೆ ಚಿತ್ರತಂಡ. ಚಿತ್ರದ ಮುಹೂರ್ತದ ಫೋಟೋಗಳನ್ನು ಮೋಹನ್ ಲಾಲ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆಶೀರ್ವಾದ್ ಸಿನಿಮಾಸ್ ಬ್ಯಾನರ್​​​​ ಅಡಿ ಚಿತ್ರವನ್ನು ಆಂಟೋನಿ ಪೆರುಂಬವೂರ್ ನಿರ್ಮಿಸುತ್ತಿದ್ದಾರೆ. ಜೀತೂ ಜೋಸೆಫ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಈ ಸಿನಿಮಾ ಬಿಡುಗಡೆಯಾದ ನಂತರ ಬಹುಶ: ಕನ್ನಡದಲ್ಲಿ ಕೂಡಾ ಮತ್ತೆ ದೃಶ್ಯ-2 ತಯಾರಾಗುವುದು ಖಚಿತ ಎನ್ನಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.