ETV Bharat / sitara

ಖಾಸಗಿ ವೆಬ್​​ಸೈಟ್​​ನಲ್ಲಿ ಲೀಕ್ ಆಯ್ತು ಮೋಹನ್​ ಲಾಲ್ ಅಭಿನಯದ 'ದೃಶ್ಯಂ-2' - Mohan lal starring Drishyam 2

ಫೆಬ್ರವರಿ 18 ರಂದು ಅಮೆಜಾನ್ ಪ್ರೈಂನಲ್ಲಿ ಬಿಡುಗಡೆಯಾದ 'ದೃಶ್ಯಂ 2' ಇದೀಗ ಖಾಸಗಿ ವೆಬ್​​​ಸೈಟ್​​​​​​​​​​​​​ನಲ್ಲಿ ಲೀಕ್ ಆಗಿದೆ. ಜೀತು ಜೋಸೆಫ್ ನಿರ್ದೇಶನದ ಈ ಚಿತ್ರದಲ್ಲಿ ಮೋಹನ್ ಲಾಲ್, ಮೀನಾ, ಎಸ್ತರ್ ಅನಿಲ್, ಅನ್ಸಿಬಾ ಹಾಸನ್, ಆಶಾ ಶರತ್, ಸಿದ್ದಿಕಿ, ಮುರಳಿ ಗೋಪಿ, ಕೃಷ್ಣ, ಸಾಯಿ ಕುಮಾರ್, ಜಿ.ಬಿ. ಗಣೇಶ್ ಕುಮಾರ್ ಅನೀಶ್ ಜಿ ಮೆನನ್ ಹಾಗೂ ಇನ್ನಿತರರು ನಟಿಸಿದ್ದಾರೆ.

Drishyam 2
'ದೃಶ್ಯಂ-2'
author img

By

Published : Feb 19, 2021, 2:02 PM IST

ಮಲಯಾಳಂ ಸೂಪರ್ ಸ್ಟಾರ್​ ಮೋಹನ್ ಲಾಲ್ ಅವರ ಬಹುನಿರೀಕ್ಷಿತ 'ದೃಶ್ಯಂ 2' ಸಿನಿಮಾ ಗುರುವಾರ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆಯಾಗಿದೆ. ಆದರೆ ಸಿನಿಮಾ ಬಿಡುಡೆಯಾಗಿ ಮರುದಿನವೇ ಸಂಪೂರ್ಣ ಚಿತ್ರ ಟೆಲಿಗ್ರಾಮ್, ಮೂವಿರೂಲ್ಜ್​​​​​ ಹಾಗೂ ಇನ್ನಿತರ ಖಾಸಗಿ ವೆಬ್​​​ಸೈಟ್​​​​ಗಳಲ್ಲಿ ಲೀಕ್ ಆಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಚಿತ್ರತಂಡ ಬೇಸರ ವ್ಯಕ್ತಪಡಿಸಿದೆ.

Drishyam 2
ಖಾಸಗಿ ವೆಬ್​ಸೈಟ್​​​ನಲ್ಲಿ ಲೀಕ್ ಆಯ್ತು 'ದೃಶ್ಯಂ-2'

ಆಶೀರ್ವಾದ್ ಸಿನಿಮಾಸ್ ಬ್ಯಾನರ್ ಅಡಿ ಆಂಟೋನಿ ಪೆರುಂಬವೂರ್ ಈ ಫ್ಯಾಮಿಲಿ ಥ್ರಿಲ್ಲರ್ ಚಿತ್ರವನ್ನು ನಿರ್ಮಿಸಿದ್ದು ಜೀತು ಜೋಸೆಫ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ವೀಕ್ಷಕರು ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ ಎನ್ನಲಾಗಿದೆ. ತನಗೆ ತೊಂದರೆ ನೀಡಲು ಬಂದವನನ್ನು ಆತ್ಮರಕ್ಷಣೆಗಾಗಿ ಕೊಲೆ ಮಾಡುವ ಮಗಳನ್ನು ತಂದೆ ಹೇಗೆ ರಕ್ಷಿಸುತ್ತಾನೆ ಎಂಬುದನ್ನು ಮೊದಲ ಭಾಗದಲ್ಲಿ ತೋರಿಸಲಾಗಿದೆ. ಅದರ ಮುಂದುವರೆದ ಭಾಗ ಇದಾಗಿದ್ದು ಮೋಹನ್​​ ಲಾಲ್​​​​​​ ಅವರ ಜಾರ್ಜ್ ಕುಟ್ಟಿ ಪಾತ್ರವನ್ನು ಅಭಿಮಾನಿಗಳು ಬಹಳ ಮೆಚ್ಚಿಕೊಂಡಿದ್ದಾರೆ. ಮೀನಾ ಹಾಗೂ ಇತರ ಕಲಾವಿದರ ಆ್ಯಕ್ಟಿಂಗ್ ಕೂಡಾ ಚೆನ್ನಾಗಿದೆ ಎಂದು ಸಿನಿಪ್ರಿಯರು ಹೇಳುತ್ತಿದ್ದಾರೆ. ಚಿತ್ರಕ್ಕೆ ಸತೀಶ್ ಕುರುಪ್ ಛಾಯಾಗ್ರಹಣ, ಅನಿಲ್ ಜೋಸೆಫ್ ಸಂಗೀತ, ಜೀತು ಜೋಸೆಫ್ ಸಾಹಿತ್ಯ ಇದೆ. ಸಸ್ಪೆನ್ಸ್, ಥ್ರಿಲ್ಲರ್, ಎಮೋಷನ್ಸ್ ಎಲ್ಲಾ ಅಂಶಗಳಿವೆ ಎನ್ನಲಾಗಿದೆ.

Drishyam 2
ಮೋಹನ್​ ಲಾಲ್ ಅಭಿನಯದ 'ದೃಶ್ಯಂ-2'

ಇದನ್ನೂ ಓದಿ: ವಿವಾಹ ನೆರವೇರಿಸಿದ ಅರ್ಚಕಿಗೆ ಧನ್ಯವಾದ ಅರ್ಪಿಸಿದ ದಿಯಾ ಮಿರ್ಜಾ!

2013 ರಲ್ಲಿ 'ದೃಶ್ಯಂ' ಮೊದಲ ಭಾಗ ಬಿಡುಗಡೆಯಾಗಿತ್ತು. ಈ ಸಿನಿಮಾ ಕೂಡಾ ದೊಡ್ಡ ಮಟ್ಟಿಗೆ ಹಿಟ್ ಆಗಿತ್ತು. ಈ ಸಿನಿಮಾ ಕನ್ನಡಕ್ಕೆ 'ದೃಶ್ಯ' ಹೆಸರಿನಲ್ಲಿ ರೀಮೇಕ್ ಆಗಿತ್ತು. ಈ ಚಿತ್ರದಲ್ಲಿ ರವಿಚಂದ್ರನ್, ನವ್ಯ ನಾಯರ್, ಸ್ವರೂಪಿಣಿ ನಾರಾಯಣ್, ಉನ್ನತಿ, ಅಚ್ಯುತ್ ಕುಮಾರ್ ಹಾಗೂ ಇನ್ನಿತರರು ನಟಿಸಿದ್ದಾರೆ. ಮಲಯಾಳಂನಲ್ಲಿ 'ದೃಶ್ಯಂ 2' ಬಿಡುಗಡೆಯಾಗಿದ್ದು ರವಿಚಂದ್ರನ್ ದೃಶ್ಯ 2 ಸಿನಿಮಾವನ್ನು ಮಾಡಲಿದ್ದಾರಾ ಎಂಬುದನ್ನು ಕಾದು ನೋಡಬೇಕು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.