ETV Bharat / sitara

ಅಪ್ಪಾಜಿಯವರ ಹುಟ್ಟುಹಬ್ಬಕ್ಕೆ ಎಲ್ಲರೂ ಬನ್ನಿ: ಅನಿರುದ್ಧ ಆಹ್ವಾನ - Aniruddha

ಸಾಹಸ ಸಿಂಹ ವಿಷ್ಣುವರ್ಧನ್ ಹುಟ್ಟುಹಬ್ಬದ ಹಿನ್ನೆಲೆ ಇಂದು ನಡೆಯುವ ಕಾರ್ಯಕ್ರಮಕ್ಕೆ ಎಲ್ಲರೂ ಆಗಮಿಸುವಂತೆ ವಿಷ್ಣು ಅವರ ಅಳಿಯ ಅನಿರುದ್ಧ ಅಭಿಮಾನಿಗಳಿಗೆ ವಿಡಿಯೋ ಮೂಲಕ ಆಹ್ವಾನಿಸಿದ್ದಾರೆ.

ಅನಿರುದ್ಧ
Dr. Vishnuvardhan
author img

By

Published : Sep 18, 2021, 7:54 AM IST

ಕನ್ನಡ ಚಿತ್ರರಂಗದಲ್ಲಿ 'ಸಾಹಸ ಸಿಂಹ'ನಾಗಿ ರಾರಾಜಿಸಿದ ನಟ ಡಾ. ವಿಷ್ಣುವರ್ಧನ್ ಅವರ 71ನೇ ಜನ್ಮದಿನ. ಅವರು ನಮ್ಮನ್ನಗಲಿದ್ದರೂ ಕೂಡ ಅಭಿಮಾನಿಗಳ ಎದೆಯಲ್ಲಿ ಅವರ ನೆನಪು ಮಾತ್ರ ಶಾಶ್ವತ. ಅವರ ಜನ್ಮದಿನದ ಪ್ರಯುಕ್ತ ನಟ ಅನಿರುದ್ಧ ಅಭಿಮಾನಿಗಳಿಗೆ ಹುಟ್ಟುಹಬ್ಬ ಆಚರಿಸಲು ಆಹ್ವಾನ ನೀಡಿದ್ದಾರೆ.

ಕೋಟ್ಯಂತರ ಅಭಿಮಾನಿಗಳ ಹೃದಯವಂತನಾಗಿ ಪ್ರೇಕ್ಷಕರ ಮನದಲ್ಲಿ ಉಳಿದಿರುವ ಡಾ. ವಿಷ್ಣುವರ್ಧನ್, ಬದುಕಿದ್ದರೆ ಇಂದು 71ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. ಸೆಪ್ಟೆಂಬರ್ 18 ಬಂತು ಅಂದ್ರೆ ಸಾಕು ಸಾಹಸ ಸಿಂಹನ ಹುಟ್ಟುಹಬ್ಬವನ್ನ ಅಭಿಮಾನಿಗಳು ಅನ್ನದಾನ, ರಕ್ತದಾನದ ಮೂಲಕ ವಿಭಿನ್ನವಾಗಿ ಆಚರಿಸುತ್ತಾರೆ.

ವಿಡಿಯೋ ಮಾಡಿ ಹುಟ್ಟುಹಬ್ಬಕ್ಕೆ ಆಹ್ವಾನ ನೀಡಿದ ಅನಿರುದ್ಧ

ಕಳೆದ ವರ್ಷ ವಿಷ್ಣುವರ್ಧನ್ ಸ್ಮಾರಕದ ಸಮಸ್ಯೆ ಬಗೆಹರಿದಿದೆ. ಮೈಸೂರಿನ ಹೆಚ್.ಡಿ ಕೋಟೆ ಹತ್ತಿರ ಐದು ಎಕರೆ ಜಮೀನು ನೀಡಿ, ಸ್ಮಾರಕ ನಿರ್ಮಾಣಕ್ಕೆ ಚಾಲನೆ ಕೂಡ ನೀಡಲಾಗಿದೆ. ಕಳೆದ ವರ್ಷ ಭಾರತಿ ವಿಷ್ಣುವರ್ಧನ್, ಅಳಿಯ ಅನಿರುದ್ಧ, ವಿಷ್ಣುವರ್ಧನ್ ಮಗಳು ಕೀರ್ತಿ ಸೇರಿದಂತೆ ಕುಟುಂಬ ವರ್ಗ ಹಾಗೂ ಅಭಿಮಾನಿಗಳು ಮೈಸೂರಿನಲ್ಲಿರುವ ಸ್ಮಾರಕಕ್ಕೆ ಪೂಜೆ ಸಲ್ಲಿಸುವ ಮೂಲಕ ಸರಳವಾಗಿ ಹುಟ್ಟುಹಬ್ಬ ಆಚರಿಸಿದ್ದರು. ಅದೇ ರೀತಿ ಈ ವರ್ಷವೂ ಕೂಡ ವಿಷ್ಣುವರ್ಧನ್ ಕುಟುಂಬಸ್ಥರು ಮೈಸೂರಿನಲ್ಲಿರುವ ಸ್ಮಾರಕದ ಬಳಿ ಜನ್ಮದಿನ ಆಚರಿಸಲಿದ್ದಾರೆ.

ವಿಷ್ಣುವರ್ಧನ್ ಹುಟ್ಟುಹಬ್ಬ ಹಿನ್ನೆಲೆ ಇಂದು ನಡೆಯುವ ಕಾರ್ಯಕ್ರಮಕ್ಕೆ ಆಗಮಿಸುವಂತೆ ವಿಷ್ಣುವರ್ಧನ್​ ಅವರ ಅಳಿಯ ಅನಿರುದ್ಧ ಅಭಿಮಾನಿಗಳಿಗೆ ಮತ್ತು ಮಾಧ್ಯಮ ಸ್ನೇಹಿತರಿಗೆ ವಿಡಿಯೋ ಮೂಲಕ ಆಹ್ವಾನ ನೀಡಿದ್ದಾರೆ. ಜೊತೆಗೆ ಕೊರೊನಾ ಮುಂಜಾಗ್ರತಾ ಕ್ರಮಗಳೊಂದಿಗೆ ಆಗಮಿಸುವಂತೆ ಮನವಿ ಮಾಡಿದ್ದಾರೆ.

ನಿನ್ನೆಯಷ್ಟೇ ಒಡಿಶಾದ ಪುರಿ ಸಮುದ್ರ ತೀರದಲ್ಲಿ ಹೆಸರಾಂತ ಶಿಲ್ಪಿ ಮನೀಶ್ ಕುಮಾರ್ ಅವರು ಕನ್ನಡದ ಮೇರುನಟ ಡಾ.ವಿಷ್ಣುವರ್ಧನ್ ಅವರ ಮರಳು ಕಲಾಕೃತಿ ಬಿಡಿಸಿದ್ದಾರೆ. ಇದು 6 ಅಡಿ ಎತ್ತರ ಮತ್ತು 15 ಅಡಿ ಅಗಲವಿದ್ದು, ಮರಳಿನಲ್ಲಿ ಅರಳಿದ ಈ ಶಿಲ್ಪಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.