ನಾಳೆ ಡಾ.ರಾಜ್ಕುಮಾರ್ ಅಭಿಮಾನಿಗಳಿಗೆ ಖುಷಿ. ಯಾಕಂದ್ರೆ ಬಂಗಾರದ ಮನುಷ್ಯ ಹುಟ್ಟಿದ ದಿನ. ನಾಳೆ ಬಹುತೇಕ ವಾಹಿನಿಗಳು, ಅಭಿಮಾನಿಗಳು ಡಾ ರಾಜಕುಮಾರ್ ಅವರನ್ನೇ ಜಪಿಸುತ್ತಾರೆ.
![dr raj day in zee pictures](https://etvbharatimages.akamaized.net/etvbharat/prod-images/raj151587605747131-42_2304email_1587605758_100.jpg)
ಈ ಹಿನ್ನೆಲೆಯಲ್ಲಿ ಹೆಸರಾಂತ ವಾಹಿನಿ ಜೀ ಪಿಕ್ಚರ್ ಸಹ ನಾಳೆ (24 ರಂದು) ಬೆಳಗ್ಗೆ 7 ಗಂಟೆಯಿಂದ ಇಡೀ ದಿವಸ ರಾಜಕುಮಾರ್ ಸಿನಿಮಗಳು ಹಾಗೂ ಒಂದು ಡಾ ರಾಜಕುಮಾರ್ ಭಾಗಿಯಾದ ಜನಪ್ರಿಯ ಕಾರ್ಯಕ್ರಮವನ್ನು ಪ್ರಸಾರ ಮಾಡಲಿದೆ.
ಮನೆಲೇ ಇರಿ, ಸೇಫ್ ಆಗಿರಿ ಅಂತ ಹೇಳೊ ಜೀ ಪಿಕ್ಚರ್ ‘ನ್ಯಾಯವೇ ದೇವರು’, ಮಯೂರ, ‘ಮೇಯರ್ ಮುತ್ತಣ್ಣ’ ಸಿನಿಮಾಗಳನ್ನು ಪ್ರಸಾರ ಮಾಡಲಿದೆ.
ನಾಲ್ಕು ಗಂಟೆಗೆ ಡಾ ರಾಜಕುಮಾರ್ ರಸಮಂಜರಿ ‘ರಾಜಧಾನಿಯಲ್ಲಿ ರಾಜ್ ರಸ ಸಂಜೆ’ ಕಾರ್ಯಕ್ರಮವನ್ನು ಪ್ರಸಾರ ಮಾಡಲಿದೆ. ಆನಂತರ 7 ಗಂಟೆಗೆ ‘ಬಂಗಾರದ ಮನುಷ್ಯ’ ಪ್ರಸಾರವಾಗಲಿದೆ. ರಾತ್ರಿ 10 ಗಂಟೆಗೆ ಡಾ ರಾಜಕುಮಾರ್ ಅವರ 100 ನೇ ಸಿನಿಮಾ ‘ಭಾಗ್ಯದ ಬಾಗಿಲು’ ಪ್ರಸಾರವಾಗಲಿದೆ.
![dr raj day in zee pictures](https://etvbharatimages.akamaized.net/etvbharat/prod-images/bangarada-manushya-of-dr-rajakumar1587605747131-94_2304email_1587605758_451.jpg)