ETV Bharat / sitara

ನಮಗೆ, ತಮಿಳುನಾಡಿಗೂ ನೀರು ಸಿಗುವಷ್ಟು ಮಳೆಯಾಗಲಿ.. ವರುಣನನ್ನು ಪ್ರಾರ್ಥಿಸಲು ಡಾಲಿ ಕೋರಿಕೆ - undefined

ಸೋಶಿಯಲ್ ಮೀಡಿಯಾ ಬಗ್ಗೆ ಬಿಟ್ಟು ಯೋಚಿಸಬೇಕಾದ ವಿಷಯದ ಬಗ್ಗೆ ಗಮನ ಕೊಡಿ. ನೀರನ್ನು ಮಿತವಾಗಿ ಬಳಸಿ, ಉತ್ತಮ ಮಳೆ‌ ಆಗಲಿ, ನಮಗೂ ನೀರು ದೊರೆತು ಪಕ್ಕದ ರಾಜ್ಯಕ್ಕೂ ಕೊಡುವಷ್ಟು ಮಳೆ ಬೀಳುವಂತೆ ಪ್ರಾರ್ಥಿಸಿ ಎಂದು ನಟ ಧನಂಜಯ್ ಮನವಿ ಮಾಡಿದ್ದಾರೆ.

ಡಾಲಿ ಧನಂಜಯ್​
author img

By

Published : Jul 5, 2019, 10:18 AM IST

ಕಳೆದ‌ ಎರಡು ದಿನಗಳ ಹಿಂದೆ ವಿಶ್ವಾದ್ಯಂತ ಫೇಸ್‌ಬುಕ್‌, ವಾಟ್ಸಾಪ್‌, ಇನ್‌ಸ್ಟಾಗ್ರಾಂ, ಟ್ವಿಟ್ಟರ್ ಸೇರಿದಂತೆ ಎಲ್ಲಾ ಸಾಮಾಜಿಕ ಜಾಲತಾಣಗಳ ಸರ್ವರ್ ಡೌನ್ ಆಗಿ ಸೇವೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಕೆಲವರಂತೂ ಸೋಶಿಯಲ್ ಮೀಡಿಯಾಗಳನ್ನು ಬಳಸಲು ಆಗದೆ ತಾವು ಏನೋ ಕಳೆದುಕೊಂಡಿದ್ದೇವೆ ಎಂಬಂತೆ ಕೂಡಾ ವರ್ತಿಸಿದ್ದರು.

ನೀರಿನ ಸಮಸ್ಯೆ ಬಗ್ಗೆ ಕಳವಳ ವ್ಯಕ್ತಪಡಿಸಿದ ಡಾಲಿ ಧನಂಜಯ್​

ಹೆಚ್ಚಾಗಿ ಯುವಜನತೆ ಈ ವಿಚಾರದಲ್ಲಿ ತೊಂದರೆಗೆ ಸಿಲುಕಿದ್ದವರಂತೆ ಆಗಿದ್ದರು. ಆದರೆ ಇವರೆಲ್ಲರ ಈ ವರ್ತನೆಗೆ ಸ್ಯಾಂಡಲ್​​​ವುಡ್​​​​​ ನಟ ಡಾಲಿ ಧನಂಜಯ್ ಕಳವಳ ವ್ಯಕ್ತಪಡಿಸಿದ್ದಾರೆ. 'ಸೋಶಿಯಲ್ ಮೀಡಿಯಾಗಳ ವಿಚಾರವಾಗಿ ಕೆಲವರ ಮಾತುಗಳನ್ನು ಕೇಳಿದ್ರೆ ನಗು ಬರುತ್ತೆ. ನಾವು ಯೊಚಿಸಬೇಕಾದ ವಿಷಯವೇ ಬೇರೆ ಇದೆ. ಪಕ್ಕದ ರಾಜ್ಯ ಚೆನ್ನೈನಲ್ಲಿ ಕುಡಿಯಲು ನೀರಿಲ್ಲದೆ ಜನ ಒದ್ದಾಡುತಿದ್ದಾರೆ. ಆದರೆ ಅವರಿಗೆ ಕೊಡುವಷ್ಟು ನೀರೂ ಕೂಡಾ ನಮ್ಮ ರಾಜ್ಯದಲ್ಲಿಲ್ಲ. ಸರಿಯಾಗಿ ಮಳೆಯಾಗದಿದ್ರೆ ನಮಗೂ ಕೂಡಾ ನೀರಿನ ಸಮಸ್ಯೆ ಎದುರಾಗಲಿದೆ.‌ ಒಂದು ವೇಳೆ ಜಗತ್ತಿನಲ್ಲಿ ಮುಂದೇನಾದ್ರೂ ಯುದ್ಧ ಸಂಭವಿಸಿದರೆ ಅದು ನೀರಿಗಾಗಿ ಎನ್ನುವ ಮಾತೂ ಕೇಳಿಬರುತ್ತಿದೆ.

ಇಷ್ಟೆಲ್ಲಾ ಸಮಸ್ಯೆಗಳಿರುವಾಗ ಅದನ್ನು ಬಿಟ್ಟು ಕೆಲಸಕ್ಕೆ ಬಾರದ ವಿಷಯಗಳ ಬಗ್ಗೆ ಇಷ್ಟು ಯೋಚಿಸುವುದು ಅರ್ಥವಿಲ್ಲ. ಯೋಚಿಸಬೇಕಾದ ವಿಷಯಗಳ ಬಗ್ಗೆ ಗಮನ ಕೊಡಿ. ನೀರನ್ನು ಹಿತಮಿತವಾಗಿ ಬಳಸಿ. ಉತ್ತಮ ಮಳೆ‌ ಆಗಲಿ, ನಮಗೂ ನೀರು ಸಿಕ್ಕಿ ಪಕ್ಕದ ರಾಜ್ಯಕ್ಕೂ ಕೊಡುವಷ್ಟು ಮಳೆಯಾಗುವಂತೆ ಪ್ರಾರ್ಥಿಸಿ' ಎಂದು ಹೇಳುವ‌ ಮೂಲಕ ಯುವ ಸಮೂಹಕ್ಕೆ ಮಾತಿನಲ್ಲೇ ಚಾಟಿ ಬೀಸಿದ್ದಾರೆ ಈ ಭೈರವ. ದ.ರಾ. ಬೇಂದ್ರೆಯವರ 'ಇಳಿದು ಬಾ ತಾಯೇ ಇಳಿದು ಬಾ' ಕವಿತೆಯನ್ನು ಹಾಡುವ ಮೂಲಕ ಧನಂಜಯ್ ನೀರಿನ ಬಗ್ಗೆ ಜಾಗೃತಿ ವಹಿಸುವಂತೆ ಎಲ್ಲರಲ್ಲೂ ಮನವಿ ಮಾಡಿದ್ದಾರೆ.

ಯೋಚಿಸ ಬೇಕಾದ ವಿಷಯ ಹಲವಾರು.ಅದರ ಬಗ್ಗೆ ಯೋಚಿಸಿ. ಮುಂದೆ ಜಗತ್ತಿನಲ್ಲಿ ಯುದ್ದ ಅಂತ ಆದ್ರೆ ಅದು ನೀರಿಗಾಗಿ. ಡಾಲಿ ಧನಂಜಯ...!!!!

ಕಳೆದ‌ ಎರಡು ದಿನಗಳಿಂದ ವಿಶ್ವಾದ್ಯಂತ ಫೇಸ್‌ಬುಕ್‌, ವಾಟ್ಸಾಪ್‌, ಇನ್‌ಸ್ಟಾಗ್ರಾಂ ಮತ್ತು ಟ್ವೀಟರ್‌ ಆಪ್ ಗಳಲ್ಲಿ ಸರ್ವರ್ ಡೌನ್ ಆಗಿ ಇವುಗಳ ಸೇವೆಯಲ್ಲಿವ ವ್ಯತ್ಯಯಉಂಟಾಗಿತ್ತು.ಇನ್ನೂ ಇದಕ್ಕೆ ಕೆಲವರು ಫೀವರ್ ಬಂದಂತೆ ವರ್ತಿಸೋಕೆ ಶುರುಮಾಡಿದ್ರು.ಅಲ್ಲದೆ ಸೋಷಿಯಲ್ ಮೀಡಿಯಾಗಳಲ್ಲಿ ಫೋಟೋಗಳು,
ವಿಡಿಯೋಗಳು ಮತ್ತು ಸಂದೇಶಗಳನ್ನು ಕಳುಹಿಸಲು, ಹಾಗೂ ಡೌನ್‌ಲೋಡ್‌ ಮಾಡಿಕೊಳ್ಳಲು ಸಾಧ್ಯವಾಗದೆ ಕೋಟ್ಯಂತರ ಬಳಕೆದಾರರು ಗೊಂದಲಕ್ಕೆ ಸಿಲುಕಿದ್ದರು.ಅಲ್ಲದೆ ಕೆಲವರು ಅತಂಕವನ್ನು ವ್ಯಕ್ತಪಡಿಸಿ ಬಂಡೆಯೇ ಬರುಡೆ ಮೇಲೆ ಬಿದ್ದಂತೆ ವರ್ತಿಸಿದ್ದರು.ಇನ್ನೂ ಯುವಕರ ಈ ವರ್ತನೆಗೆ ಸ್ಯಾಂಡಲ್ ವುಡ್ ನಟ ಡಾಲಿ ಧನಂಜಯ ಕಳವಳ ವ್ಯಕ್ತಪಡಿಸಿದ್ದಾರೆ. ಸೋಷಿಯಲ್ ಮಿಡಿಯಾ ಗಳ ವಿಚಾರವಾಗಿ ಕೆಲವರ ಮಾತುಗಳ ಕೇಳಿದ್ರೆ ನಗು ಬರುತ್ತೆ.ಯಾಕಪ್ಪ ಅಂದ್ರೆ ನಾವು ಯೊಚಿಸ ಬೇಕಾದ ವಿಷಯವೇ ಬೇರೆ ಇದೆ.ಪಕ್ಕದ ರಾಜ್ಯ ಚೆನ್ನೈ ನಲ್ಲಿ ಕುಡಿಯೋಕು ನೀರಿಲ್ಲದೆ ಜನ ಒದ್ದಾಡುತಿದ್ದಾರೆ.ಅಲ್ಲದೆ ಅವರಿಗೆ ಕೊಡುವಷ್ಟು ನೀರು ಸಹ ನಮ್ಮ ರಾಜ್ಯದಲ್ಲಿಲ್ಲ. ಇನ್ನು ಕೆಲವು ದಿನಗಳಲ್ಲಿ ಮಳೆಯಾಗದಿದ್ರೆ ನಮಗೂ ಸಹ ನೀರಿನ ಸಮಸ್ಯೆ ಎದುರಾಗಲಿದೆ.‌ ಒಂದು ವೇಳೆ ಜಗತ್ತಿನಲ್ಲಿ ಮುಂದೇನಾದರು ಯುದ್ದ ಅಂತ ಆದರೆ ಅದು ನೀರಿಗಾಗಿ ಎನ್ನಯವ ಮಾತು ಕೇಳಿ ಬರ್ತಿದೆ.ಸೋ ಇಷ್ಟೆಲ್ಲಾ ಸಮಸ್ಯೆ ಇರುವಾಗ ನಾವು ಯೋಚಿಸ ಬೇಕಾದ ವಿಷಯಗಳು ಬೇರೆನೇ ಇದ.ಅದ ಬಿಟ್ಟು ಕೆಲಸಕ್ಕೆ ಬಾರದ ವಿಷಯಗಳ ಬಗ್ಗೆ ಇಷ್ಟು ಯೋಚಿಸುವುದು ಅರ್ಥವಿಲ್ಲ.ಹಾಗಾಗಿ ಯೋಚಿಸ ಬೇಕಾದ ವಿಷಯಗಳ ಬಗ್ಗೆ ಯೋಚಿಸಿ.ಅಲ್ಲದೆ ನೀರನ್ನು ಮಿತವಾಗಿ ಬಳಸಿ .ಅಲ್ಲದೆ‌ ಉತ್ತಮ ಮಳೆ‌ಆಗಲಿ ನಮಗೂ ನೀರು ಸಿಕ್ಕಿ ಪಕ್ಕದ ರಾಜ್ಯಕ್ಕೂ ಕೊಡುವಷ್ಟು ಮಳೆ ಬೀಳಲಿ ಎಂದು ಪ್ರಾರ್ಥಿಸಿ ಎಂದು ಹೇಳುವ‌
ಮೂಲಕ ಯುವ ಸಮೂಹಕ್ಕೆ ಮಾತಿನಲ್ಲೆ ಚಾಟಿ ಬೀಸಿದ್ದಾರೆ.ಅಲ್ಲದೆ ದರಾ ಬೇಂದ್ರೆಯವರ ಇಳಿದು ಬಾ ತಾಯೇ ಇಳಿದು ಬಾ,ಹರನ ಜಡೆಯಿಂದ ಹರಿಯ ಹಕ್ಕಿಯಿಂದ .ಇಳಿದು ಬಾ ತಾಯೇ ಇಳಿದು ಬಾ ಎಂದು ಇಳೆಗೆ ಮಳೆ ಬರಲಿ ಎಂದು ಪ್ರಾರ್ಥಿಸುವ ಮೂಲಕ. ಡಾಲಿ ಧನಂಜಯ ನೀರಿನ ಬಗ್ಗೆ ಜಾಗೃತಿ ವಹಿಸುವಂತೆ ಎಲ್ಲರಿಗೂ ಕಿವಿಮಾತಿ ಹೇಳಿದ್ದಾರೆ.

ಸತೀಶ ಎಂಬಿ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.